ದೊಡ್ಡವರಿಗೆ ಟಕ್ಕರ್ ಕೊಡುವಂತಹ ಮಕ್ಕಳು ನಿಮ್ಮ ಮನೆಯಲ್ಲಿದ್ದಾರಾ? ಹಾಗಿದ್ರೆ ಬೆಂಗಳೂರಿನಲ್ಲಿ ನಡೆಯುವ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ಗೆ ಬನ್ನಿ!
Gicchi Gili Gili Juniors Audition: ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಶೋ 'ಗಿಚ್ಚಿ ಗಿಲಿಗಿಲಿ' ಈಗ ಮಕ್ಕಳಿಗಾಗಿ ವಿಶೇಷ ಆವೃತ್ತಿಯನ್ನು ತರುತ್ತಿದೆ. 'ಗಿಚ್ಚಿ ಗಿಲಿಗಿಲಿ ಜೂನಿಯರ್ಸ್' ಹೆಸರಿನಲ್ಲಿ ಆರಂಭವಾಗಲಿರುವ ಈ ರಿಯಾಲಿಟಿ ಶೋಗಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಆಡಿಷನ್ ನಡೆಯಲಿದೆ.
-
ಕಲರ್ಸ್ ಕನ್ನಡ ವಾಹಿನಿಯ ʻಗಿಚ್ಚಿ ಗಿಲಿಗಿಲಿʼ ಶೋ ಎಷ್ಟೋ ಕಾಮಿಡಿ ಕಲಾವಿದರಿಗೆ ಭವಿಷ್ಯ ನೀಡಿದೆ. ಅನೇಕ ಪ್ರತಿಭಾನ್ವಿತರನ್ನು ಬೆಳಕಿಗೆ ತಂದಿದೆ. ಈಗಾಗಲೇ ಮೂರು ಸೀಸನ್‌ಗಳನ್ನು ಮುಗಿಸಿದೆ. ಮೊದಲ ಸೀಸನ್‌ನಲ್ಲಿ ವಂಶಿಕಾ ಅಂಜನಿ ಕಶ್ಯಪ ಗೆದ್ದರೆ, ನಂತರ ಸೀಸನ್‌ಗಳಲ್ಲಿ ಚಂದ್ರಪ್ರಭ, ಹುಲಿ ಕಾರ್ತಿಕ್ ಅವರು ಗೆದ್ದಿದ್ದರು. ಇದೀಗ ಹೊಸದೊಂದು ಪ್ರಯೋಗಕ್ಕೆ ಗಿಚ್ಚಿ ಗಿಲಿ ಗಿಲಿ ಶೋ ಮುಂದಾಗಿದೆ.
ಈ ಬಾರಿ ಮಕ್ಕಳಿಗಾಗಿ ಬರ್ತಿದೆ ʻಗಿಚ್ಚಿ ಗಿಲಿ ಗಿಲಿʼ ಶೋ
ಹೌದು, ಈ ಬಾರಿ ಗಿಚ್ಚಿ ಗಿಲಿಗಿಲಿ ಶೋವನ್ನು ಮಕ್ಕಳಿಗಾಗಿ ಮಾಡಲಾಗುತ್ತಿದೆ. ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಹೆಸರಿನಲ್ಲಿ ಮೂಡಿಬರುತ್ತಿರುವ ಈ ಶೋನಲ್ಲಿ ಬರೀ ಮಕ್ಕಳದ್ದೇ ಹವಾ. ಹಾಗಾಗಿ, ಅಂತಹ ಪ್ರತಿಭಾನ್ವಿತ ಮಕ್ಕಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಂತಹ ಮಕ್ಕಳಿಗಾಗಿ ರಾಜ್ಯದ ವಿವಿಧೆಡೆ ಆಡಿಷನ್ ಕೂಡ ಮಾಡಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿರುವ ಪ್ರತಿಭಾನ್ವಿತ ಮಕ್ಕಳಿಗಾಗಿ ಒಂದು ಸುವರ್ಣಾವಕಾಶ ಇಲ್ಲಿದೆ ನೋಡಿ.
Raghavendra: ಇದು ಮನೆ ಅಲ್ಲ.. ಅರಮನೆ: ಗಿಚ್ಚಿ ಗಿಲಿಗಿಲಿ ರಾಘವೇಂದ್ರ ಅವರ ಹೊಸ ಮನೆ ನೋಡಿ
ಡಿಸೆಂಬರ್ 21ರಂದು ಆಡಿಷನ್
ಬೆಂಗಳೂರಿನಲ್ಲಿ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಶೋಗಾಗಿ ಮಕ್ಕಳ ಆಡಿಷನ್ ನಡೆಯಲಿದೆ. ಡಿಸೆಂಬರ್ 21ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಅಕ್ಷಯ ಸ್ಟುಡಿಯೋದ ಆವರಣದಲ್ಲಿ ಆಡಿಷನ್ ನಡೆಯಲಿದೆ. 5 ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಮಕ್ಕಳು ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ರಿಯಾಲಿಟಿ ಶೋನಲ್ಲಿ ಜನಪ್ರಿಯ ಟಿವಿ ಕಲಾವಿದರೊಂದಿಗೆ ಪಾಲ್ಗೊಳ್ಳಬಹುದು. ಅವರಿಗೆ ಅತ್ಯುತ್ತಮ ತರಬೇತಿಯನ್ನೂ ನೀಡಲಾಗುತ್ತದೆ.
ಮಕ್ಕಳ ಸಂಭಾಷಣಾ ಸಾಮರ್ಥ್ಯ, ತಕ್ಷಣದ ಪ್ರತಿಕ್ರಿಯೆ, ಕಥೆ ಹೇಳುವ ಶೈಲಿ ಇತ್ಯಾದಿ ಅಂಶಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಹೆಚ್ಚಿನ ವಿವರಗಳನ್ನು ಆಡಿಷನ್ ಸ್ಥಳದಲ್ಲಿ ನೀಡಲಾಗುವುದು. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ ಮತ್ತು (ಮಕ್ಕಳ ಮತ್ತು ಪೋಷಕರ) ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ ಸಹಿತ ಆಡಿಷನ್‌ಗೆ ಹಾಜರಾಗಬೇಕು ಎಂದು ಕಲರ್ಸ್ ಕನ್ನಡ ವಾಹಿನಿಯ ಹೇಳಿದೆ.
ಸಾಮಾನ್ಯವಾಗಿ ಹಾಸ್ಯ ಕಾರ್ಯಕ್ರಮಗಳಲ್ಲಿ ಕಾಮಿಡಿಯನ್ಸ್‌ಗಳೇ ಇರುತ್ತಾರೆ. ಆದರೆ 'ಗಿಚ್ಚಿ ಗಿಲಿ ಗಿಲಿ' ಶೋನಲ್ಲಿ ಒಬ್ಬರು ವೃತ್ತಿಪರ ಹಾಸ್ಯ ಕಲಾವಿದರ ಜೊತೆಯಾಗಿ ಬೇರೆ ಬೇರೆ ರಂಗದ ಸಾಧಕರು, ಅಂದರೆ ಕಿರುತೆರೆ ನಟರು, ಗಾಯಕರು, ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದರು. ಈ ಬಾರಿ ಮಕ್ಕಳ ಜೊತೆ ಶೋ ಮಾಡುತ್ತಿರುವುದು ವಿಶೇಷ.
ಈ ವೇದಿಕೆಯ ಮೂಲಕ ಸ್ಟಾರ್‌ಗಳಾಗಿ ಮಿಂಚಿದವರು
ವಂಶಿಕಾ ಅಂಜನಿ ಕಶ್ಯಪ್
ಚಂದ್ರಪ್ರಭಾ
ಶಿವು
ಮಾನಸ
ನಿವೇದಿತಾ ಗೌಡ
ವಿನೋದ್ ಗೊಬ್ಬರಗಾಲ