ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prostitutes childrens: ವೇಶ್ಯೆಯರು ಸಾಕಿರೋ ಮಕ್ಕಳಾದರೂ ಸಾಧನೆಯಿಂದ ಜಗತ್ಪ್ರಸಿದ್ದರಾದವರು ಇವರೇ ನೋಡಿ

ತಂದೆಯ ಹೆಸರು ಗೊತ್ತಿಲ್ಲ, ತಾಯಿ ಇವಳೇ ಎಂದು ಹೇಳುವಂತಿಲ್ಲ... ಇಂತಹ ಪರಿಸ್ಥಿತಿಯಲ್ಲಿ ಹುಟ್ಟಿದ ಮಕ್ಕಳ ಪಾಡು ಹೇಗಿರುತ್ತದೆ ಎನ್ನುವುದನ್ನು ಊಹಿಸುವುದು ಕೂಡ ಕಷ್ಟ. ಯಾಕೆಂದರೆ ಇವರ ನೋವುಗಳನ್ನು ಯಾರು ಕೇಳುವುದಿಲ್ಲ. ನಲಿವುಗಳನ್ನು ಯಾರು ಸಂಭ್ರಮಿಸವುದಿಲ್ಲ. ಇಂತಹ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಬೆಳೆದ ಮಕ್ಕಳು ಸಾಧಕರಾಗುವುದು ಬಹುತೇಕ ಊಹಿಸಲು ಅಸಾಧ್ಯವಾದ ವಿಚಾರವಾದರೂ ಈ ಐವರು ಸಾಧಕರು ಇಂತಹ ಸವಾಲುಗಳನ್ನು ಎದುರಿಸಿ ಬಂದವರು.

ಈ ಜಗತ್ಪ್ರಸಿದ್ಧ ಸಾಧಕರು ವೇಶ್ಯೆಯರ ಮಕ್ಕಳೆಂದರೆ ನಂಬ್ತೀರಾ?

ವಿಶ್ವದ ಖ್ಯಾತ ಕಲಾವಿದ ಚಾರ್ಲಿ ಚಾಪ್ಲಿನ್ (Charlie Chaplin) ಹೆಸರು ಕೇಳದವರು ಯಾರಿದ್ದಾರೆ. ಆದರೆ ಈತ ಒಬ್ಬ ವೇಶ್ಯೆಯ ಮಗ (Prostitutes' children) ಎನ್ನುವುದನ್ನು ಯಾರೂ ನೆನಪಿನಲ್ಲಿಟ್ಟಿಲ್ಲ. ಇದಕ್ಕೆ ಕಾರಣ ಚಾರ್ಲಿ ಚಾಪ್ಲಿನ್ ಸಾಧನೆ. ಚಾರ್ಲಿ ಚಾಪ್ಲಿನ್ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಆತನ ಹಾಸ್ಯ ಅಭಿನಯದ (comic actor) ವಿವಿಧ ಪಾತ್ರಗಳು. ಮನದಲ್ಲಿ ಅಗಾಧ ನೋವನ್ನು ಇಟ್ಟುಕೊಂಡು ಬದುಕಿದ ಚಾಪ್ಲಿನ್ ಜಗತ್ತನ್ನು ನಗಿಸಲು ಹೊರಟದ್ದು ಬಹುದೊಡ್ಡ ಹೋರಾಟವೆಂದೇ ಹೇಳಬಹುದು. ಅದರ ಫಲವೇ ಇವತ್ತು ಎಲ್ಲರೂ ಆತನನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದೆ.

ಇಂತಹ ಅನೇಕ ವ್ಯಕ್ತಿಗಳಿದ್ದಾರೆ. ಆದರೆ ಈ ಐವರು ಸಾಧಕರನ್ನು ಯಾರೂ ಮರೆಯುವಂತಿಲ್ಲ. ಯಾಕೆಂದರೆ ಇವರೆಲ್ಲ ಮರಣದ ಬಳಿಕವೂ ಅಜರಾಮರಾಗಿ ಉಳಿದಿದ್ದಾರೆ.ಜಗತ್ತಿಗೆ ಸ್ಫೂರ್ತಿಯಾಗಿರುವ ಈ ಐವರು ಸಾಧಕರು ಕೆಸರಿನಲ್ಲಿ ಹುಟ್ಟಿ ಬೆಳೆದವರು. ಆದರೂ ಇಂದಿಗೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಕಾರಣ ಜೀವನ ಮತ್ತು ವೃತ್ತಿಜೀವನವನ್ನು ಅವರು ರೂಪಿಸಿಕೊಂಡ ರೀತಿ ಜಗತ್ತೇ ಅವರನ್ನು ಗುರುತಿಸುವಂತೆ ಮಾಡಿದೆ.

ಚಾರ್ಲಿ ಚಾಪ್ಲಿನ್

ಹಾಸ್ಯದಿಂದ ಜಗತ್ತನ್ನೇ ನಗಿಸಿದ ಕಲಾವಿದ ಚಾರ್ಲಿ ಚಾಪ್ಲಿನ್. ಇವರ ತಾಯಿ ಹನ್ನಾ ವೇಶ್ಯೆಯಾಗಿದ್ದರು. 19 ನೇ ಶತಮಾನದ ಅಂತ್ಯದಲ್ಲಿ ಸುಲಭವಾಗಿ ಗುಣಪಡಿಸಲಾಗದ ಸಿಫಿಲಿಸ್‌ನಿಂದ ಬಳಲುತ್ತಿದ್ದ ಹನ್ನಾ ಹುಚ್ಚಳಾದಳು. ಇದು ಯುವ ವಯಸ್ಸಿನ ಚಾರ್ಲಿ ಚಾಪ್ಲಿನ್ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಿತ್ತು.

ಮನೀಶ್ ಗಾಯಕ್ವಾಡ್

ಕೋಲ್ಕತ್ತಾದಲ್ಲಿ ಹುಟ್ಟಿ ಬೆಳೆದ ಖ್ಯಾತ ಲೇಖಕ ಮನೀಶ್ ಗಾಯಕ್ವಾಡ್ ಅವರ ತಾಯಿ ರೇಖಾಬಾಯಿ ನಗರದ ಪ್ರಮುಖ ವೇಶ್ಯೆಯಾಗಿದ್ದರು.ದಿ ಲಾಸ್ಟ್ ಕೋರ್ಟಿಸನ್ - ರೈಟಿಂಗ್ ಮೈ ಮದರ್ಸ್ ಮೆಮೊಯಿರ್‌ನ ಲೇಖಕರಾಗಿರುವ ಗಾಯಕ್ವಾಡ್ ಅವರು ಈ ಕುರಿತು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ತಾಯಿಯನ್ನು ಅತ್ತೆ- ಮಾವಂದಿರು ನಗರದ ಬೌಬಜಾರ್‌ನಲ್ಲಿರುವ ಕೋಠಾಗೆ ಮಾರಿದ್ದರು. ಅಲ್ಲಿ ಅವರು ಹದಿಹರೆಯದವರಾಗಿದ್ದಾಗಲೇ ಹಾಡಲು ಮತ್ತು ನೃತ್ಯ ಮಾಡಲು ಕಲಿತರು. ವೇಶ್ಯೆಯಾಗಿ ತರಬೇತಿ ಪಡೆದರು. ರೇಖಾಬಾಯಿ ತಮ್ಮ ಮಗುವನ್ನು ಕೋಠಾದಲ್ಲೇ ಬೆಳೆಸಿದರು. ಬಳಿಕ ಬೋರ್ಡಿಂಗ್ ಶಾಲೆಗೆ ಕಳುಹಿಸಿದರು. ವೇಶ್ಯೆ ಸಂಸ್ಕೃತಿ ಸಂಪೂರ್ಣವಾಗಿ ಕಣ್ಮರೆಯಾದ ಅನಂತರ ಅವರು ಕೋಲ್ಕತ್ತಾದ ಅಪಾರ್ಟ್ ಮೆಂಟ್ ಗೆ ತೆರಳಿದರು. 2023ರಲ್ಲಿ ಮುಂಬೈನಲ್ಲಿ ನಿಧನರಾದರು.

ದೀಪಾಲಿ ವಂದನಾ

ನಿರಾಶ್ರಿತ ಮಹಿಳೆಯರಿಗೆ ಸಹಾಯ ಮಾಡುವ ಸರ್ಕಾರೇತರ ಸಂಸ್ಥೆಯಾದ ಉರ್ಜಾ ಟ್ರಸ್ಟ್‌ನ ಸ್ಥಾಪಕಿ ವಂದನಾ ಮುಂಬೈನ ಪ್ರಸಿದ್ಧ ಕೆಂಪು ದೀಪದ ಪ್ರದೇಶದ ಕಾಮತಿಪುರದಲ್ಲಿ ಜನಿಸಿದರು. ವೇಶ್ಯಾವಾಟಿಕೆಯಲ್ಲಿ ಸಿಲುಕಿರುವ ಮಹಿಳೆಯರ ದುಃಸ್ಥಿತಿಯನ್ನು ನೋಡುತ್ತಾ ಬೆಳೆದವರು. ಅವರು 18 ವರ್ಷದವರಿದ್ದಾಗಲೇ ಕೊಳೆಗೇರಿಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದರು. ಮನೆಗಳನ್ನು ಬಿಟ್ಟು ಓಡಿಹೋದ ಮಕ್ಕಳನ್ನು ಸಲಹಿದರು. 2011ರಲ್ಲಿ ಅಲ್ತಾಫ್ ಶೇಖ್ ಅವರೊಂದಿಗೆ ಉರ್ಜಾ ಟ್ರಸ್ಟ್ ಅನ್ನು ಸ್ಥಾಪಿಸಿ ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರು ಮತ್ತು ನಿರಾಶ್ರಿತ ಮಹಿಳೆಯರಿಗೆ ಸಹಾಯ ಮಾಡಲು ಪ್ರಾರಂಭಿಸಿದರು.

ರಿಚರ್ಡ್ ಪಯೋರ್

ಆಫ್ರಿಕನ್- ಅಮೇರಿಕನ್ ನಟ ರಿಚರ್ಡ್ ಪಯೋರ್ ಹತ್ತು ವರ್ಷದವನಿದ್ದಾಗಲೇ ವೇಶ್ಯೆಯಾಗಿದ್ದ ತಾಯಿ ಆತನನ್ನು ತ್ಯಜಿಸಿದಳು. ಅನಂತರ ಈತ ಅಜ್ಜಿಯೊಂದಿಗೆ ವೇಶ್ಯಾಗೃಹದಲ್ಲೇ ಬೆಳೆದನು. ಇಲ್ಲಿಂದ ತಪ್ಪಿಸಿಕೊಳ್ಳಲು ಪಯೋರ್ ಕೆಲಸ ಮಾಡಲು ಪ್ರಾರಂಭಿಸಿದನು. ಬಳಿಕ ಈತನನ್ನು ಬಣ್ಣದ ಲೋಕ ಎಳೆದು ತಂದು ದೊಡ್ಡ ಕಲಾವಿದನಾಗಿ ಮಾಡಿತ್ತು.

ಇದನ್ನೂ ಓದಿ: Accident Case: ಹೈವೇಯಲ್ಲಿ ನಡೀತು ಘನಘೋರ ದುರಂತ! LPG ಟ್ಯಾಂಕರ್‌ ಬ್ಲಾಸ್ಟ್‌- ಏಳು ಮಂದಿ ಸಾವು

ಎಡಿತ್ ಪಿಯಾಫ್

ಎಡಿತ್ ಪಿಯಾಫ್ ಅವರ ಬಾಲ್ಯದ ಹೆಸರು ಎಡಿತ್ ಜಿಯೋವಾನ್ನಾ ಗ್ಯಾಸಿಯನ್. ಖ್ಯಾತ ಫ್ರೆಂಚ್ ಗಾಯಕಿ, ಕಾಫಿಹೌಸ್ ಗಾಯಕಿ ಅನ್ನೆಟ್ಟಾ ಜಾಕ್ವೆಲಿನ್ ಗ್ಯಾಸಿಯನ್ ಅವರ ಮಗಳು. ಪಿಯಾಫ್ ತಾಯಿಗೆ ತಮ್ಮ ಮಗಳನ್ನು ಬೆಳೆಸುವ ಆಸಕ್ತಿ ಇರಲಿಲ್ಲ. ಹೀಗಾಗಿ ಪಿಯಾಫ್ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಅವರು ಅವಳಿಗೆ ಸರಿಯಾಗಿ ಊಟವನ್ನೂ ನೀಡುತ್ತಿರಲಿಲ್ಲ. ಈ ವೇಳೆ ತಂದೆ ಆಲ್ಫೋನ್ಸ್ ಗ್ಯಾಸಿಯನ್ ಬಂದು ತಾಯಿ ವಾಸವಾಗಿದ್ದ ಬರ್ನೇಯಲ್ಲಿ ವೇಶ್ಯಾಗೃಹಕ್ಕೆ ತಂದು ಪಿಯಾಫ್ ನನ್ನು ಬಿಟ್ಟರು. ಹೀಗಾಗಿ 15 ವರ್ಷದವಳಿದ್ದಾಗ ಪಿಯಾಫ್ ಬೀದಿ ಗಾಯಕಿಯಾದರು. ಆದರೆ ಇದನ್ನೇ ಅವರು ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಗಾಯಕಿಯಾಗಿ ಉನ್ನತ ಹೆಸರು ಗಳಿಸಿದರು.