ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Darshith Gowda: ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ನಟ ದರ್ಶಿತ್‌

Darshith Gowda: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗ ಸಮರ್ಥ್ ಆಗಿ ಅಭಿನಯಿಸಿದ್ದ ದರ್ಶಿತ್ ಗೌಡ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಸಹೋದರನಾಗಿ ದರ್ಶಿತ್ ನಟಿಸಿದ್ದರು. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿ ತಂಡ ಸೇರಿದಂತೆ ನಟ ನಟಿಯರು ಬಂದು ನವದಂಪತಿಗೆ ಶುಭ ಹಾರೈಸಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ದರ್ಶಿತ್‌ ಗೌಡ

ದರ್ಶಿತ್‌ ಗೌಡ -

Yashaswi Devadiga
Yashaswi Devadiga Mar 5, 2026 8:10 PM

ಶ್ರೀರಸ್ತು ಶುಭಮಸ್ತು (shrirasthu shubhamasthu Serial) ಧಾರಾವಾಹಿಯಲ್ಲಿ ತುಳಸಿ ಮಗ ಸಮರ್ಥ್ (Samarth) ಆಗಿ ಅಭಿನಯಿಸಿದ್ದ ದರ್ಶಿತ್ ಗೌಡ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಸಹೋದರನಾಗಿ ದರ್ಶಿತ್ ನಟಿಸಿದ್ದರು. ಅಷ್ಟೇ ಅಲ್ಲ ಗುಳಿ ಕೆನ್ನೆ ಚೆಲುವ ದರ್ಶಿತ್ ಗೌಡ (Darshith Gowda), ಕಣ್ಸೆಳೆವ ಮಾಯಾವಿ ಎನ್ನುವ ಆಲ್ಬಂ ಹಾಡಿನಲ್ಲಿ ಕೂಡ ನಟಿಸಿದ್ದರು. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿ ತಂಡ ಸೇರಿದಂತೆ ನಟ ನಟಿಯರು ಬಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Actor Trivikram : ಅಪ್ಪ ತೀರಿ ಹೋದ ದಿನವೇ ಬ್ರೇಕಪ್! ತಮ್ಮ ಲವ್‌ಸ್ಟೋರಿಯನ್ನ ನೆನೆದ‌ ತ್ರಿವಿಕ್ರಮ್‌

ಮದುವೆ ಫೋಟೋಗಳು ವೈರಲ್‌

ಹುಡುಗಿ ಯಾರು ಎಂದು ಇನ್ನಷ್ಟೇ ಗೊತ್ತಾಗಬೇಕಿದೆ. ದರ್ಶಿತ್ ಅವರ ಮದುವೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ನದ್ದು, ಮಿಡಲ್ ಕ್ಲಾಸ್ ಹುಡುಗನ ಪಾತ್ರ. ಯಾರಿಗೂ ಯಾವತ್ತೂ ನೋವು ಮಾಡದ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ, ಆದರೆ ಎದುರಲ್ಲಿ ಮಾತ್ರ ಸದಾ ಸಿಡಿಮಿಡಿಗೊಳ್ಳುವ, ಯಾರಿಗೂ ಮುಖ ಕೊಟ್ಟು ಮಾತನಾಡದ ಪಾತ್ರ ಆಗಿತ್ತು.

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಪ್ರೀತಿಯ ದಂಡಪಿಂಡ, ತುಳಸಿಯ ಮುದ್ದಿನ ಮಗಸೀರಿಯಲ್ ನಿಜವಾದ ಹೀರೋ ಸಮರ್ಥ್ ಅಂತಾನೆ ಹೇಳುತ್ತಿದ್ದರು ಜನ. ಅಷ್ಟರಮಟ್ಟಿಗೆ ಸಮರ್ಥ್ ಪಾತ್ರವನ್ನ ಜನ ಮೆಚ್ಚಿಕೊಂಡಿದ್ದರು.

ಇದನ್ನೂ ಓದಿ: Shiva Rajkumar: 'ಇದು ನಮ್ಮ ದೌರ್ಭಾಗ್ಯ' ; ಪಾಪರಾಜಿಗಳ ವರ್ತನೆ ಬಗ್ಗೆ ಶಿವಣ್ಣ ಬೇಸರ

ದೊರೆಸಾನಿ ಧಾರಾವಾಹಿಗೆ ಆಡಿಶನ್ ಕೊಟ್ಟು ಸೀರಿಯಲ್ ಆಯ್ಕೆಯಾಗಿದ್ದರು. ಕಣ್ಸೆಳೆವ ಮಾಯಾವಿ ಎನ್ನುವ ಕನ್ನಡ ಮ್ಯೂಸಿಕ್‌ ವಿಡಿಯೋದಲ್ಲಿಯೂ ದರ್ಶಿತ್‌ ಕಾಣಿಸಿಕೊಂಡಿದ್ದರು.