ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Deepika Das: ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

Deepika Das Birthday: ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ನಟಿ ದೀಪಿಕಾ ದಾಸ್ ಕನ್ನಡದ ಬಿಗ್​ಬಾಸ್​ ​ಸೀಸನ್​ 7 ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ದೀಪಿಕಾ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸನ್ನೂ ರಿವೀಲ್‌ ಮಾಡಿದ್ದಾರೆ.

ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

ದೀಪಿಕಾ ದಾಸ್‌ -

Yashaswi Devadiga
Yashaswi Devadiga Feb 24, 2026 3:48 PM

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss Kannada), ನಾಗಿಣಿ ಸೀರಿಯಲ್​​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದಾರೆ ನಟಿ ದೀಪಿಕಾ ದಾಸ್ (Deepika Das). ಕನ್ನಡದ ನಟಿ ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ನಟಿ ದೀಪಿಕಾ ದಾಸ್ ಕನ್ನಡದ ಬಿಗ್​ಬಾಸ್​ ​ಸೀಸನ್​ 7 (Bigg Boss Season 7) ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ದೀಪಿಕಾ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾರೆ. ವಯಸ್ಸನ್ನೂ ರಿವೀಲ್‌ ಮಾಡಿದ್ದಾರೆ.

ದೀಪಿಕಾ ದಾಸ್‌ಗೆ 30 ವರ್ಷ

ದೀಪಿಕಾ ದಾಸ್ ಗೆ ಇದೀಗ 30 ವರ್ಷ ತುಂಬಿದ್ದು, ದುಬೈನಲ್ಲಿ ತಮ್ಮ ಗಂಡನ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ನಟಿ ‘ ಪಾರು ಪಾರ್ವತಿ’ ಎನ್ನುವ ಟ್ರಾವೆಲ್ ಸಿನಿಮಾ ಒಂದರಲ್ಲಿ ನಟಿಸಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ. ಈಗಂತೂ ನಟನೆಯಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: Filmfare Awards event: ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ, ಕಾರಣ ಇದು

ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆ ಮಾಡಿದ ನಟಿ 'ದೂದ್ ಸಾಗರ್', 'ಡ್ರೀಮ್ ಗರ್ಲ್', 'ಪಾರು ಪಾರ್ವತಿ' ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಚ್ 1, 2024ರಲ್ಲಿ ಉದ್ಯಮಿ ದೀಪಕ್ ಅವರನ್ನ ವರಿಸಿದರು ದೀಪಿಕಾ ದಾಸ್.

ಸದ್ಯ ದುಬೈನಲ್ಲಿ ನೆಲೆಸಿರುವ ದೀಪಿಕಾ ದಾಸ್, ದೇಶ ವಿದೇಶ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ. ಇದರ ಜೊತೆಗೆ ಗಂಡನ ಬ್ಯುಸಿನೆಸ್ ನಲ್ಲಿ ಬೆಂಬಲವಾಗಿ ನಿಂತಿದ್ದಾರೆ.

ಇದನ್ನೂ ಓದಿ: Sudhindra venkatesh: ಪ್ರಚಾರಕರ್ಥ ಸುಧೀಂದ್ರ ವೆಂಕಟೇಶ್‍ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍

ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ಬಹುಕಾಲದ ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದರು. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಶಾಕ್​ ಆಗಿದ್ದರು.