ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranveer Singh: 50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ ! ರಣವೀರ್‌ ಮೂವಿ ಹವಾ ಜೋರು

Bollywood: ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ , ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಸೇರಿದಂತೆ ಪ್ರಭಾವಿ ತಾರಾಗಣವಿದೆ. ಧುರಂಧರ ಸಿನಿಮಾ ಡಿಸೆಂಬರ್-5 ರಂದು ರಿಲೀಸ್ ಆಗಿದೆ. ಡೈರೆಕ್ಟರ್ ಆದಿತ್ಯ ಧರ್ ಈ ಚಿತ್ರವನ್ನ ಬರೆದಿದ್ದಾರೆ. ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಶಾಶ್ವತ್ ಸಚ್‌ದೇವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ

ಧುರಂಧರ್‌ ಸಿನಿಮಾ -

Yashaswi Devadiga
Yashaswi Devadiga Dec 14, 2025 10:46 AM

ರಣವೀರ್ ಸಿಂಗ್ (Ranveer singh) ಅವರ 'ಧುರಂಧರ್' (Dhurandhar) ಚಿತ್ರವು ಒಂಬತ್ತನೇ ದಿನವೂ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಹಲವು ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದ್ದರಿಂದ ಭರ್ಜರಿ ಕಲೆಕ್ಷನ್ (collection) ಆಗುತ್ತಿದೆ. , ಡಿಸೆಂಬರ್ 13, 2025 ರ ಶನಿವಾರದಂದು, 'ಧುರಂಧರ್' ಒಟ್ಟಾರೆಯಾಗಿ ಶೇ. 45.39 ರಷ್ಟು ಹಿಂದಿ ವೀಕ್ಷಕರ ಸಂಖ್ಯೆ ದಾಖಲಿಸಿದೆ.

ಕಲೆಕ್ಷನ್‌ ಎಷ್ಟು?

ಸ್ಯಾಕ್ನಿಲ್ಕ್ ವೆಬ್‌ಸೈಟ್ ಒದಗಿಸಿದಂತೆ, ಈ ಚಿತ್ರವು 9 ನೇ ದಿನದಂದು (ಎರಡನೇ ಶನಿವಾರ) ಭಾರತದಲ್ಲಿ ಮತ್ತೆ 53 ಕೋಟಿ ರೂ.ಗಳನ್ನು ಗಳಿಸಿತು, ಇದರ ಒಟ್ಟು ಸಂಗ್ರಹವು 292.75 ಕೋಟಿ ರೂ. ಈ ಚಿತ್ರವು ತನ್ನ ಮೊದಲ ಎಂಟು ದಿನಗಳಲ್ಲಿ ಅಂದಾಜು 239.75 ಕೋಟಿ ರೂ.ಗಳನ್ನು ಗಳಿಸಿತ್ತು.

ಇದನ್ನೂ ಓದಿ: Rishab Shetty: ದೈವವನ್ನು ದೆವ್ವ ಎಂದು ಅಣಕಿಸಿದ್ದ ರಣವೀರ್‌ ಸಿಂಗ್;‌ ಕೊನೆಗೂ ಕ್ಷಮೆ ಕೇಳಿದ ದೀಪಿಕಾ ಪಡುಕೋಣೆ ಪತಿ

ನೇರ ವರದಿಗಳ ಪ್ರಕಾರ, ಡಿಸೆಂಬರ್ 13, 2025 ರ ಶನಿವಾರದಂದು, 'ಧುರಂಧರ್' ಒಟ್ಟಾರೆಯಾಗಿ ಶೇ. 45.39 ರಷ್ಟು ಹಿಂದಿ ವೀಕ್ಷಕರ ಸಂಖ್ಯೆ ದಾಖಲಿಸಿದೆ. ಬೆಳಗಿನ ಪ್ರದರ್ಶನಗಳು ಶೇ. 45.39 ರಷ್ಟು ವೀಕ್ಷಕರ ಸಂಖ್ಯೆಯೊಂದಿಗೆ ಪ್ರಾರಂಭವಾದವು. ಎರಡನೇ ಶುಕ್ರವಾರ ಈಗಾಗಲೇ ಶೇ. 20.37 ರಷ್ಟು ಏರಿಕೆಯೊಂದಿಗೆ 32.5 ಕೋಟಿ ರೂ.ಗಳ ಬೃಹತ್ ಗಳಿಕೆಯನ್ನು ದಾಖಲಿಸಿದೆ.

ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ , ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಸೇರಿದಂತೆ ಪ್ರಭಾವಿ ತಾರಾಗಣವಿದೆ .

ಅಭಿನಯ ಅದ್ಭುತ

ಅಲ್ಲು ಅರ್ಜುನ್‌ ಕೂಡ ಈ ಸಿನಿಮಾ ಮೆಚ್ಚಿಕೊಂಡಿದ್ದಾರೆ. ರಣವೀರ್ ಸಿಂಗ್ ಅಭಿನಯವನ್ನು ಅಲ್ಲು ತುಂಬಾನೆ ಮೆಚ್ಚಿಕೊಂಡಿದ್ದಾರೆ. ಬ್ರದರ್ ರಣವೀರ್ ಸಿಂಗ್ ಅವರ ಅಭಿನಯ ಅದ್ಭುತವಾಗಿದೆ. ತಮ್ಮ ಮಹಾನ್ ಪ್ರತಿಭೆಯಿಂದಲೇ ಇಡೀ ಸಿನಿಮಾದಲ್ಲಿ ಹೊಳೆದಿದ್ದಾರೆ ಅನ್ನೋದನ್ನು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ.

‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.2ನೇ ದಿನ 32 ಕೋಟಿ ರೂಪಾಯಿ ಆಯಿತು. 3ನೇ ದಿನ 43 ಕೋಟಿ, 4ನೇ ದಿನ 23.25 ಕೋಟಿ ರೂಪಾಯಿ, 5, 6 ಹಾಗೂ 7ನೇ ದಿನ ತಲಾ 27 ಕೋಟಿ ರೂಪಾಯಿ, 8ನೇ ದಿನ 32.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

ಇದನ್ನೂ ಓದಿ: ದೈವವನ್ನು ದೆವ್ವ ಎಂದು ಕರೆದ ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್

ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಯಿತು. ಅದರ ನಂತರದ ವಾರ ‘ದಿ ಡೆವಿಲ್’, ‘ಅಖಂಡ 2’ ಸಿನಿಮಾಗಳು ತೆರೆಕಂಡವು. ಧುರಂಧರ ಸಿನಿಮಾ ಡಿಸೆಂಬರ್-5 ರಂದು ರಿಲೀಸ್ ಆಗಿದೆ. ಡೈರೆಕ್ಟರ್ ಆದಿತ್ಯ ಧರ್ ಈ ಚಿತ್ರವನ್ನ ಬರೆದಿದ್ದಾರೆ. ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಶಾಶ್ವತ್ ಸಚ್‌ದೇವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.