ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಧುರಂಧರ್‌ʼ ಚಿತ್ರಕ್ಕೆ ಕೌಂಟರ್‌ ಕೊಡಲು ಹೋಗಿ ಎಡವಿಬಿದ್ದ ಪಾಕ್‌ನ ʻಮೆರಾ ಲಿಯಾರಿʼ ಸಿನಿಮಾ; ಸೇಲ್ ಆಗಿದ್ದು ಬರೀ ಇಪ್ಪತ್ತೆರಡೇ ಟಿಕೆಟ್!‌ ‌

ಆದಿತ್ಯ ಧರ್ ನಿರ್ದೇಶನದ ಭಾರತೀಯ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರಕ್ಕೆ ಕೌಂಟರ್‌ ಕೊಡಲು ಬಂದ ಸಿನಿಮಾ ಎಂಬ ಪ್ರಚಾರದಲ್ಲಿ ಬಿಡುಗಡೆಗೊಂಡ ಪಾಕಿಸ್ತಾನದ 'ಮೇರಾ ಲಿಯಾರಿ' ಬಾಕ್ಸ್ ಆಫೀಸ್‌ನಲ್ಲಿ ದಯನೀಯವಾಗಿ ಸೋತಿದೆ. ಚಿತ್ರರಂಗದಲ್ಲಿ ಅತಿ ದೊಡ್ಡ ಮುಖಭಂಗ ಅನುಭವಿಸಿದೆ.

ʻಧುರಂಧರ್ʼಗೆ ಕೌಂಟರ್ ಕೊಡಲು ಬಂದ 'ಮೇರಾ ಲಿಯಾರಿ' ಸಿನಿಮಾ ಅಟ್ಟರ್‌ ಫ್ಲಾಪ್‌

-

Avinash GR
Avinash GR May 14, 2026 5:29 PM

ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಆದರೆ ಈ ಸಿನಿಮಾದಲ್ಲಿ ತಮ್ಮ ದೇಶವನ್ನು, ಅದರಲ್ಲೂ ಲಿಯಾರಿಯನ್ನು ನೆಗೆಟಿವ್‌ ಆಗಿ ತೋರಿಸಲಾಗಿದೆ ಎಂದು ಪಾಕಿಸ್ತಾನ ವಾದ ಮಾಡಿತ್ತು. ಅಲ್ಲದೆ, ʻಧುರಂಧರ್‌ʼ ಸಿನಿಮಾಗೆ ಕೌಂಟರ್‌ ಕೊಡುವ ಸಲುವಾಗಿಯೇ ʻಮೇರಾ ಲಿಯಾರಿʼ ಎಂಬ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವರು. ಆದರೆ ʻಮೇರಾ ಲಿಯಾರಿʼ ಸಿನಿಮಾದ ಫಲಿತಾಂಶ ಏನಾಗಿದೆ? ಇಲ್ಲಿದೆ ಮಾಹಿತಿ.

ಮೇ 8ರಂದು ತೆರೆಕಂಡಿದ್ದ ಮೇರಾ ಲಿಯಾರಿ

ಅಬು ಅಲಿಹಾ ನಿರ್ದೇಶನದ 'ಮೇರಾ ಲಿಯಾರಿ' ಚಿತ್ರದಲ್ಲಿ ಆಯೇಶಾ ಒಮರ್, ದನನೀರ್ ಮೊಬೀನ್, ಸಾಮಿಯಾ ಮುಮ್ತಾಜ್ ಮತ್ತು ಟ್ರಿನೆಟ್ ಲ್ಯೂಕಾಸ್ ನಟಿಸಿದ್ದಾರೆ. ಮೇ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಮಹಿಳಾ ಫುಟ್ಬಾಲ್ ಆಟಗಾರ್ತಿಯರ ಸುತ್ತ ಸಾಗುವ ಸ್ಪೋರ್ಟ್ಸ್ ಡ್ರಾಮಾ ಎಂದು ಹೇಳಿಕೊಳ್ಳಲಾಗಿತ್ತು. ಆದರೆ, ಚಿತ್ರದ ಬಗ್ಗೆ ಕೇಳಿಬಂದ ರಾಜಕೀಯ ಕಾಮೆಂಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಇದಕ್ಕೆ ಬೇರೆಯದೇ ಚಿತ್ರಣ ನೀಡಿದವು.

20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಗಾಯಕಿ ಆಶಾ ಭೋಸ್ಲೆ; ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ʼಪಿಯಾʼ ಸಾಂಗ್‌

ಸಿಂಧ್ ಸಚಿವ ಶರ್ಜೀಲ್ ಮೆಮನ್ ಅವರು ಈ ಚಿತ್ರವನ್ನು "ಭಾರತದ ನಕಾರಾತ್ಮಕ ಪ್ರಚಾರಕ್ಕೆ ನೀಡಿದ ಪ್ರತಿಕ್ರಿಯೆ" ಎಂದು ಬಣ್ಣಿಸಿದ್ದರು. ಅಲ್ಲದೆ, ಲಿಯಾರಿಯ "ಶಾಂತಿ, ಸಮೃದ್ಧಿ ಮತ್ತು ಹೆಮ್ಮೆ"ಯ ನೈಜ ಚಿತ್ರಣವನ್ನು ಈ ಸಿನಿಮಾ ಪ್ರಸ್ತುತಪಡಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯು 'ಧುರಂಧರ್' ಚಿತ್ರಕ್ಕೆ ʻಮೇರಾ ಲಿಯಾರಿʼ ಮೂಲಕ ಪಾಕಿಸ್ತಾನ ನೀಡುತ್ತಿರುವ ಕೌಂಟರ್‌ ಎಂಬ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿತು.

ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು

ಪ್ರಸ್ತುತ ವರದಿಗಳ ಪ್ರಕಾರ 'ಮೇರಾ ಲಿಯಾರಿ' ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿದೆಯಂತೆ. ಪಾಕಿಸ್ತಾನದ 'ಸಿಟಿ ಮ್ಯಾಗಜೀನ್' ಪ್ರಕಾರ, ಈ ಚಿತ್ರದ 22 ಟಿಕೆಟ್‌ಗಳು ಮಾತ್ರ ಚಿತ್ರಮಂದಿರಗಳಲ್ಲಿ ಮಾರಾಟವಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಕಡಿಮೆ ಬಜೆಟ್‌ನ ತಯಾರಿಕೆ ಮತ್ತು ಕಮರ್ಷಿಯಲ್‌ ಎಲಿಮೆಂಟ್ಸ್‌ ಕೊರತೆಯಿಂದಾಗಿ ಈ ಚಿತ್ರವು ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲಾಗುತ್ತಿದೆ.

Dhurandhar 2 script row: ಧುರಂಧರ್ ಚಿತ್ರತಂಡಕ್ಕೆ ಬಿಗ್‌ ರಿಲೀಫ್‌; ಸೆನ್ಸಾರ್ ಪ್ರಮಾಣಪತ್ರ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಮೇರಾ ಲಿಯಾರಿ ಚಿತ್ರತಂಡದ ಸ್ಪಷ್ಟನೆ ಏನು?

ನಿರ್ದೇಶಕ ಅಬು ಅಲಿಹಾ ಅವರು 'ಮೇರಾ ಲಿಯಾರಿ' ಚಿತ್ರವನ್ನು ಧುರಂಧರ್‌ ಸಿನಿಮಾಕ್ಕೆ ಪ್ರತಿಯಾಗಿ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಯನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ್ದ ಅವರು, "'ಧುರಂಧರ್' ಚಿತ್ರದ ಟೀಸರ್ ಬಿಡುಗಡೆಯಾಗುವ ಮೂರು ತಿಂಗಳ ಮೊದಲೇ ನಮ್ಮ 'ಮೇರಾ ಲಿಯಾರಿ' ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದವು" ಎಂದು ಹೇಳಿದ್ದರು.

"ಲಿಯಾರಿ ಮತ್ತು ಅಲ್ಲಿನ ಜನರ ಬಗ್ಗೆ ಒಂದು ಸುಂದರವಾದ ಮತ್ತು ಸ್ಫೂರ್ತಿದಾಯಕ ಕಥೆಯನ್ನು ಹೇಳುವುದು ನಮ್ಮ ಉದ್ದೇಶವಾಗಿತ್ತು. ಇದನ್ನು 300 ಕೋಟಿ ಬಜೆಟ್‌ನಲ್ಲಿ ತಯಾರಾದ ಬಾಲಿವುಡ್ ಆಕ್ಷನ್ ಚಿತ್ರದೊಂದಿಗೆ ಹೋಲಿಸಲು ಸಾಧ್ಯವಿಲ್ಲ" ಎಂದು ಅಬು ಅಲಿಹಾ ಸ್ಪಷ್ಟಪಡಿಸಿದ್ದರು.

ಅಸಲಿ ಮುಖ ತೋರಿಸುತ್ತೇವೆ ಎಂದಿದ್ದ ಸಚಿವ

ನಿರ್ದೇಶಕರೇ ಹೀಗೆ ಹೇಳಿದ್ದರೂ ಸಿಂಧ್ ಸಚಿವ ಶರ್ಜೀಲ್ ಇನಾಮ್ ಮೆಮನ್ ಮಾತ್ರ ಮೇರಾ ಲಿಯಾರಿ ಚಿತ್ರವು ಭಾರತಕ್ಕೆ ನೀಡಿದ ಪ್ರತ್ಯುತ್ತರ ಎಂದು ಪುನರುಚ್ಚರಿಸಿದ್ದರು. ಅಲ್ಲದೇ, "ಧುರಂಧರ್ ಚಿತ್ರವು ಪಾಕಿಸ್ತಾನದ ವಿರುದ್ಧ ಭಾರತೀಯ ಚಿತ್ರರಂಗ ನಡೆಸುತ್ತಿರುವ ನಕಾರಾತ್ಮಕ ಪ್ರಚಾರದ ಮತ್ತೊಂದು ಉದಾಹರಣೆ. ನಾವು 'ಮೇರಾ ಲಿಯಾರಿ' ಮೂಲಕ ಲಿಯಾರಿಯ ನಿಜವಾದ ಮುಖವನ್ನು ತೋರಿಸುತ್ತೇವೆ" ಎಂದು ಅವರು ವಾದಿಸಿದ್ದರು.