Ram Charan: ʻಪೆದ್ದಿʼ ಸಿನಿಮಾದ ಮೂಲಕ ಫಾರೀನ್ ಮಾರ್ಕೆಟ್‌ಗೆ ಕಾಲಿಟ್ಟ ಕನ್ನಡದ ʻಹೊಂಬಾಳೆ ಫಿಲ್ಮ್ಸ್ʼ
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಈಗ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಮೂಲಕ ಅಂತರರಾಷ್ಟ್ರೀಯ ವಿತರಣಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಉತ್ತರ ಅಮೆರಿಕ ಹಾಗೂ ಯುರೋಪ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ವಿಜಯ್ ಕಿರಗಂದೂರು ಸಜ್ಜಾಗಿದ್ದಾರೆ.
-
ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಈಗ ಅಂತರರಾಷ್ಟ್ರೀಯ ವಿತರಣಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. 'ರಾಜಕುಮಾರ', 'ಕೆಜಿಎಫ್', 'ಕಾಂತಾರ' ಮತ್ತು 'ಸಲಾರ್' ಅಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಸಂಸ್ಥೆಯು, ಇದೀಗ ವಿತರಣೆಯಲ್ಲೂ ತನ್ನ ಅಧಿಪತ್ಯ ವಿಸ್ತರಿಸಲು ಸಜ್ಜಾಗಿದೆ. ಇದಕ್ಕೆ ನಟ ರಾಮ್ ಚರಣ್ ಅವರ ʻಪೆದ್ದಿʼ ಸಿನಿಮಾ ಸಾಥ್ ನೀಡಿದೆ.
ವಿದೇಶದಲ್ಲಿ ಹೊಂಬಾಳೆ ಸದ್ದು
ಇಷ್ಟು ದಿನ ಕೇವಲ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್, ಈಗ ಭಾರತೀಯ ಸಿನಿಮಾಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ನಿರ್ಧರಿಸಿದೆ. 2026ರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ಒಂದಾದ ʻಪೆದ್ದಿʼಯ ವಿದೇಶಿ ವಿತರಣಾ ಹಕ್ಕುಗಳನ್ನು ಸಂಸ್ಥೆ ತನ್ನದಾಗಿಸಿಕೊಂಡಿದೆ. ಉತ್ತರ ಅಮೆರಿಕ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ಈ ಚಿತ್ರವು ಅದ್ದೂರಿಯಾಗಿ ಬಿಡುಗಡೆ ಮಾಡಲು ಹೊಂಬಾಳೆ ರೆಡಿಯಾಗಿದೆ.
Peddi: ರಾಮ್ ಚರಣ್ ಜೊತೆ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಪಡೆದ ಶ್ರುತಿ ಹಾಸನ್
ಪೆದ್ದಿ ಚಿತ್ರದಲ್ಲಿ ಪ್ರತಿಭಾವಂತರ ದಂಡು
'ಉಪ್ಪೇನ' ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬುಚ್ಚಿ ಬಾಬು ಸಾನಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಕ್ರೀಡೆ ಮತ್ತು ರಾ ಆಕ್ಷನ್ ಹಿನ್ನೆಲೆಯುಳ್ಳ ಕಥೆಯಾಗಿದ್ದು, ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಹಿಂದೆಂದೂ ಕಾಣದ ಕಟ್ಟುಮಸ್ತಾದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ತಾಂತ್ರಿಕ ವರ್ಗವು ಅತ್ಯಂತ ಬಲಿಷ್ಠವಾಗಿದ್ದು, ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಸಂಗೀತ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ. ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಇದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಸಖತ್ ಪವರ್‌ಫುಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
Peddi and The Paradise Leaks: ಒಂದೇ ದಿನ ಈ ಎರಡೂ ಸಿನಿಮಾಗಳಿಗೆ ಸಂಕಷ್ಟ; ‘ಪೆದ್ದಿ’,‘ದಿ ಪ್ಯಾರಡೈಸ್’ಗೆ ಲೀಕ್ ಕಾಟ
ಜೂನ್ 4ರಂದು ತೆರೆಗೆ ಬರಲಿರುವ ʻಪೆದ್ದಿʼ
ಹೊಂಬಾಳೆ ಫಿಲ್ಮ್ಸ್ ಅಂತರರಾಷ್ಟ್ರೀಯ ವಿತರಣಾ ಜಾಲವು ʻಪೆದ್ದಿʼ ಸಿನಿಮಾಕ್ಕೆ ದೊಡ್ಡ ಮಟ್ಟದ ಶಕ್ತಿ ತುಂಬಲಿದೆ. ಹೊಂಬಾಳೆಯ ಈ ಸಾಹಸವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಮತ್ತು ರಾಮ್ ಚರಣ್ ಅವರ ಲುಕ್ ಭಾರಿ ಸಂಚಲನ ಮೂಡಿಸಿದ್ದು, ಜೂನ್ 4ರಂದು ವಿಶ್ವದಾದ್ಯಂತ ಪೆದ್ದಿ ದೊಡ್ಡಮಟ್ಟದಲ್ಲಿ ತೆರೆಗೆ ಬರಲಿದೆ.
ಹೊಂಬಾಳೆ ಫಿಲ್ಮ್ಸ್ ಪೋಸ್ಟ್
Stories rooted in our soil.
— Hombale Films (@hombalefilms) May 14, 2026
Emotions meant for the world 🌍✨
With #PEDDI, we at @HombaleFilms proudly begin our journey into Overseas Distribution, taking Indian stories beyond borders and closer to audiences across the globe ❤️🔥
Bringing the world of #PEDDI to cinemas… pic.twitter.com/DzJaJrlweD
ಈಗಾಗಲೇ ನಿರ್ಮಾಣದಲ್ಲಿರುವ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್, ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದೆ. ಈಗ ತೆಲುಗು ಸಿನಿಮಾದ ಮೂಲಕ ವಿದೇಶಿ ಸಿನಿಮಾ ವಿತರಣೆ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ.