'ಧುರಂಧರ್' ಚಿತ್ರದ ಶೂಟಿಂಗ್ ಪಾಕಿಸ್ತಾನದಲ್ಲೇ ನಡೆಯಿತಾ? ಅಲ್ಲಿನ ಸರ್ಕಾರ ಕರಾಚಿಯಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡಿತ್ತಾ? ಇಲ್ಲಿದೆ ಅಸಲಿ ವಿಚಾರ
ರಣವೀರ್ ಸಿಂಗ್ ನಟನೆಯ ಬಾಲಿವುಡ್ ಚಿತ್ರ ‘ಧುರಂಧರ್ʼ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಅಡುತ್ತಿದೆ. ಕರಾಚಿಯ ಲ್ಯಾರಿ ಭೂಗತ ಲೋಕದಿಂದ ಪ್ರೇರಿತವಾದ ಮತ್ತು ಗ್ಯಾಂಗ್ ಜಾಲಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹೀಗಾಗಿ ಇದನ್ನು ನೈಜವಾಗಿ ತೋರ್ಪಡಿಸಲು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಸುಮಾರು 6 ಎಕರೆ ವಿಸ್ತೀರ್ಣದಲ್ಲಿ ಪಾಕಿಸ್ತಾನದ ಕರಾಚಿ ಮಾದರಿಯ ದೊಡ್ಡ ಸೆಟ್ ನಿರ್ಮಿಸಲಾಗಿತ್ತು.
'ಧುರಂಧರ್' ಚಿತ್ರದ ದೃಶ್ಯ -
ನವದೆಹಲಿ, ಡಿ.17: ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar Movie) ಬಾಲಿವುಡ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸಿನಿ ಪ್ರಿಯರು, ವಿಮರ್ಶಕರಿಂದ ಪಾಸಿಟಿವ್ ಮಾತು ಕೇಳಿ ಬರುತ್ತಿದ್ದು, ಉತ್ತಮ ಕಲೆಕ್ಷನ್ ಮಾಡಿತ್ತಿದೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು, ಉದ್ವಿಗ್ನ ಪರಿಸ್ಥಿತಿಯನ್ನು ಚಿತ್ರಿಸುತ್ತದೆ. ಚಿತ್ರದಲ್ಲಿ ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತಿತರರು ನಟಿಸಿದ್ದು ಅದ್ಧೂರಿ ಮೇಕಿಂಗ್‌ನಿಂದಲೂ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ನೈಜತೆ ತರಬೇಕು ಎನ್ನುವ ಉದ್ದೇಶದಿಂದ ನಿರ್ದೇಶಕ ಆದಿತ್ಯಧರ್ ಪಾಕಿಸ್ತಾನದ ಕರಾಚಿಯಲ್ಲಿರುವ ಲ್ಯಾರಿ (Lyari) ಎಂಬ ಭೂಗತ ಜಗತ್ತನ್ನು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಮರುಸೃಷ್ಟಿಸಿದ್ದಾರೆ. ಈ ಬೃಹತ್ ಸೆಟ್ ಸದ್ಯ ಗಮನ ಸೆಳೆಯುತ್ತಿದೆ.
‘ಧುರಂಧರ್ ಕರಾಚಿಯ ಲ್ಯಾರಿ ಭೂಗತ ಲೋಕದಿಂದ ಪ್ರೇರಿತವಾದ ಗುಪ್ತಚರ ಕಾರ್ಯಾಚರಣೆಗಳು ಮತ್ತು ಗ್ಯಾಂಗ್ ಜಾಲಗಳ ಸುತ್ತ ಇರುವ ಕಥಾವಸ್ತು ಹೊಂದಿದೆ. ಹಾಗಾಗಿ ಇದನ್ನು ನೈಜವಾಗಿ ತೋರ್ಪಡಿಸಲು ಬ್ಯಾಂಕಾಕ್‌ನಲ್ಲಿ ಸುಮಾರು 6 ಎಕರೆಯಲ್ಲಿ ದೊಡ್ಡ ಸೆಟ್ ನಿರ್ಮಿಸಲಾಗಿತ್ತು. ವಿಶೇಷವೆಂದರೆ ಕೇವಲ 20 ದಿನದಲ್ಲಿ 500ಕ್ಕೂ ಹೆಚ್ಚು ತಂತ್ರಜ್ಞರು ಇಲ್ಲಿ ಕೆಲಸ ಮಾಡಿದ್ದಾರೆ. ಭಾರತ ವಿನ್ಯಾಸಕರು ಮತ್ತು ಥೈಲ್ಯಾಂಡ್‌ನ ಸುಮಾರು 400ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರು ಇದಕ್ಕಾಗಿ ಶ್ರಮ ಪಟ್ಟಿದ್ದಾರೆ.
ವಿಡಿಯೊ ಇಲ್ಲಿದೆ:
ಈ ಬಗ್ಗೆ ಮಾಹಿತಿ ನೀಡಿದ ಸಿನಿಮಾದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್ ಜೊಹ್ರಾ, ʼʼನಮ್ಮಲ್ಲಿರುವ ಕಲಾವಿದರೊಂದಿಗೆ ಮುಂಬೈಯಲ್ಲಿ ಚಿತ್ರೀಕರಿಸುವುದು ಅಸಾಧ್ಯವಾಗಿತ್ತು. ಅಲ್ಲದೆ ರಣವೀರ್ ಸಿಂಗ್ ಅವರಂತಹ ದೊಡ್ಡ ಸೆಲೆಬ್ರಿಟಿಗಳನ್ನು ಇಟ್ಟುಕೊಂಡು ಸಾರ್ವಜನಿಕವಾಗಿ ಶೂಟಿಂಗ್ ನಡೆಸುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ ನಾವು ಬ್ಯಾಂಕಾಕ್ ಆಯ್ಕೆ ಮಾಡಿಕೊಂಡಿದ್ದೆವುʼʼ ಎಂದಿದ್ದಾರೆ.
ʻಡೆವಿಲ್ʼ ದರ್ಶನ್ ದರ್ಬಾರ್! ಸಿನಿಮಾ ರಿಲೀಸ್ ಬೆನ್ನಲ್ಲೇ ಸುಮಲತಾ ಅಂಬರೀಶ್ ಪೋಸ್ಟ್
ಅಕ್ರಮವಾಗಿ ಪಾಕಿಸ್ತಾನದ ಒಳ ನುಸುಳಿ ಅಲ್ಲಿನ ಮಾಫಿಯಾ ಹಾಗೂ ರಾಜಕೀಯದ ರಹಸ್ಯಗಳನ್ನು ಬೇಧಿಸುವ ಭಾರತೀಯ ಸ್ಪೈ ಓರ್ವನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಪಾಕಿಸ್ತಾನದ ಗಲ್ಲಿ, ಅಲ್ಲಿನ ಮನೆಗಳ ಒಳಾಂಗಣ ಚಿತ್ರಿಣ ನೈಜವಾಗಿ ಕಾಣಬೇಕೆಂದು ಸಿನಿ ತಂಡವು ಸಾಕಷ್ಟು ಶ್ರಮವಹಿಸಿದೆ. ಎಲ್ಲಿಯೂ ಮಾಹಿತಿ ದೊರಕದ ಕಾರಣ, ತಂಡವು ಹಳೆಯ ವಿಡಿಯೊಗಳು, ಅಂದಿನ ದಿನಪತ್ರಿಕೆಗಳ ತುಣುಕುಗಳನ್ನು ಅಧ್ಯಯನ ಮಾಡಿ ಈ ಸೆಟ್ ವಿನ್ಯಾಸಗೊಳಿಸಿದೆ. ಬ್ಯಾಂಕಾಕ್ ಮಾತ್ರವಲ್ಲದೆ ಮುಂಬೈಯ ಮಾಧ್ ಐಲ್ಯಾಂಡ್‌ನಲ್ಲೂ ಒಂದು ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ.