ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್‌; ಅಬ್ಬರಿಸಿದ JR NTR

Dragon Glimpse: ಚಿತ್ರದ ಕಥೆ 1967ರಲ್ಲಿ ಸಾಗುತ್ತದೆ. ರುಕ್ಮಿಣಿ ವಸಂತ್ ಅವರನ್ನು ಕೂಡ ಟ್ರೇಲರ್​​ನಲ್ಲಿ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ವಿಲನ್ ರೀತಿ ತೋರಿಸಲಾಗಿದೆ. ‘ಅಫ್ಗನ್ ಟ್ರೇಡಿಂಗ್ ಕಂಪನಿ’ ವಿಲನ್​​ಗಳನ್ನು ತೋರಿಸಲಾಗುತ್ತದೆ. ಕೆಜಿಎಫ್ ರೀತಿಯೇ ಇದರಲ್ಲಿ ಹಲವು ವಿಲನ್​​ಗಳಿದ್ದಾರೆ

Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್‌; ಅಬ್ಬರಿಸಿದ JR NTR

‘ಡ್ರ್ಯಾಗನ್’ ಗ್ಲಿಂಪ್ಸ್ -

Yashaswi Devadiga
Yashaswi Devadiga May 20, 2026 8:32 AM

ಸಲಾರ್ (Salaar) ಮತ್ತು ಕೆಜಿಎಫ್ (KGF) ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel ) ಅವರೊಂದಿಗಿನ ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಚಿತ್ರಕ್ಕೆ ಅಂತಿಮವಾಗಿ ಅಧಿಕೃತ ಶೀರ್ಷಿಕೆ ಸಿಕ್ಕಿದೆ. ಇಲ್ಲಿಯವರೆಗೆ ಎನ್‌ಟಿಆರ್-ನೀಲ್ ಎಂದು ಕರೆಯಲಾಗುತ್ತಿದ್ದ ಈ ಚಿತ್ರದ ಹೆಸರು ಡ್ರ್ಯಾಗನ್ (Dragon glimpse). ಮಂಗಳವಾರ ತಡರಾತ್ರಿ ಲುಕ್‌ ಹಂಚಿಕೊಂಡಿದ್ದಾರೆ. ಜೂ. ಎನ್​​ಟಿಆರ್ ವಿಲನ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, KGF ಶೈಲಿಯ (KGF Movie) ಆಕ್ಷನ್ ನಿರೀಕ್ಷಿಸಲಾಗಿದೆ. 2027ರಲ್ಲಿ ಚಿತ್ರ ತೆರೆಗೆ ಬರಲಿದೆ.

ಮಂಗಳವಾರ ರಾತ್ರಿ 10.52 ಕ್ಕೆ, ಮೈತ್ರಿ ಮೂವಿ ಮೇಕರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅಧಿಕೃತ ಡ್ರ್ಯಾಗನ್ ಗ್ಲಿಂಪ್ ಅನ್ನು ಹಂಚಿಕೊಂಡರು. ನಟ ಮತ್ತು ನಿರ್ದೇಶಕರು ಸಹ ಮರು ಪೋಸ್ಟ್ ಮಾಡಿದ್ದಾರೆ.

ಚಿತ್ರದ ಕಥೆ 1967ರಲ್ಲಿ ಸಾಗುತ್ತದೆ. ರುಕ್ಮಿಣಿ ವಸಂತ್ ಅವರನ್ನು ಕೂಡ ಟ್ರೇಲರ್​​ನಲ್ಲಿ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ವಿಲನ್ ರೀತಿ ತೋರಿಸಲಾಗಿದೆ. ‘ಅಫ್ಗನ್ ಟ್ರೇಡಿಂಗ್ ಕಂಪನಿ’ ವಿಲನ್​​ಗಳನ್ನು ತೋರಿಸಲಾಗುತ್ತದೆ. ಕೆಜಿಎಫ್ ರೀತಿಯೇ ಇದರಲ್ಲಿ ಹಲವು ವಿಲನ್​​ಗಳಿದ್ದಾರೆ.

ಇದನ್ನೂ ಓದಿ: Maryade Ramanna: ಕಿರುತೆರೆಗೆ 'ಮರ್ಯಾದೆ ರಾಮಣ್ಣ' ಎಂಟ್ರಿ ಫಿಕ್ಸ್‌; ಈ ಸೀರಿಯಲ್‌ ಅಂತ್ಯ!

ಎನ್‌ಟಿಆರ್ ಹೊರತಾಗಿ, ಬಿಜು ಮೆನನ್, ರುಕ್ಮಿಣಿ ವಸಂತ್, ಖುಷ್ಬು ಸುಂದರ್, ಗುರು ಸೋಮಸುಂದರಂ, ರಾಜೀವ್ ಕಣಕಾಲ, ಅಶುತೋಷ್ ರಾಣಾ, ಅಂಶುಮಾನ್ ಪುಷ್ಕರ್, ಸಿದ್ದಾಂತ್ ಗುಪ್ತಾ, ಪ್ರಭಾಸ್ ಶ್ರೀನು, ಶತ್ರು, ಶಿವ, ಮತ್ತು ಭೀಮಲ್ ಜೀತ್, ಮುಂತಾದವರ ಫಸ್ಟ್ ಲುಕ್‌ಗಳನ್ನು ಒಳಗೊಂಡಂತೆ ಚಿತ್ರದಲ್ಲಿನ ಹಲವಾರು ಪ್ರಮುಖ ಪಾತ್ರಗಳನ್ನು ಗ್ಲಿಂಪ್ಸ್ ಬಹಿರಂಗಪಡಿಸುತ್ತದೆ.



ಅನೇಕ ಅಭಿಮಾನಿಗಳು ಈ ಚಿತ್ರವು ನಿರ್ದೇಶಕರ ಹಿಂದಿನ ಚಿತ್ರಗಳಿಗೆ ಹೋಲುತ್ತದೆ ಎಂದು ಭಾವಿಸಿದ್ದಾರೆ. "ಈ ಗ್ಲಿಂಪ್ಸ್ ಕೆಜಿಎಫ್ ಮತ್ತು ಸಲಾರ್‌ನ ವೈಬ್ ಅನ್ನು ನೀಡುತ್ತಿದೆ ಎಂದು ನಾನು ಮಾತ್ರ ಭಾವಿಸುತ್ತಿದ್ದೇನೆಯೇ ಅಥವಾ ಬೇರೆ ಯಾರಾದರೂ ಭಾವಿಸುತ್ತಿದ್ದಾರೆಯೇ?" ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ! ಈ ಸಿನಿಮಾ 2027ರ ಜೂನ್ 6ರಂದು ತೆರೆಗೆ ಬರಲಿದೆ.

ಜೂನಿಯರ್ ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ ಚಿತ್ರದ ಗ್ಲಿಂಪ್ಸ್ ನಟನ ಹುಟ್ಟುಹಬ್ಬಕ್ಕೂ ಮುನ್ನ ಬಿಡುಗಡೆಯಾಯಿತು.

ಇದನ್ನೂ ಓದಿ: OTT This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸೌತ್‌ ಸಿನಿಮಾಗಳಿವು!

ಡ್ರಾಗನ್ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಂದಮೂರಿ ಕಲ್ಯಾಣ್ ರಾಮ್, ನವೀನ್ ಯೆರ್ನೇನಿ, ವೈರವಿಶಂಕರ್ ಮತ್ತು ಕೊಸರಾಜು ಹರಿಕೃಷ್ಣ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.