ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸಿಂಗರ್‌ ಸೋನು ನಿಗಮ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ

Sonu Nigam fake account: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆಗಳು ಹುಟ್ಟಿಕೊಳ್ಳುವುದು ಹೊಸದೇನಲ್ಲ. ಆದರೆ ಕೆಲವರು ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಅವರ ಅಭಿಮಾನಿಗಳಿಗೆ ವಂಚಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ಸಾಕಷ್ಟು ಮಂದಿ ಮೋಸ ಹೋಗುವುದು ಇದೆ. ಈಗ ಖ್ಯಾತ ಗಾಯಕ ಸೋನು ನಿಗಮ್ ಕೂಡ ಈ ವಂಚನೆಗೆ ಬಲಿಯಾಗಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಸಿಂಗರ್‌ ಸೋನು ನಿಗಮ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆಗಳು (fake account) ಹುಟ್ಟಿಕೊಳ್ಳುವುದು ಹೊಸದೇನಲ್ಲ. ಆದರೆ ಕೆಲವರು ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಅವರ ಅಭಿಮಾನಿಗಳಿಗೆ ವಂಚಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ಸಾಕಷ್ಟು ಮಂದಿ ಮೋಸ ಹೋಗುವುದು ಇದೆ. ಕೆಲವು ದಿನಗಳ ಹಿಂದೆ ಖ್ಯಾತ ಗಾಯಕಿ (singer) ಶ್ರೇಯಾ ಘೋಷಾಲ್ (Shreya Ghosha ) ಈ ರೀತಿ ವಂಚನೆಗೆ ಒಳಗಾಗಿದ್ದು, ಈಗ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಕೂಡ ಈ ವಂಚನೆಗೆ ಬಲಿಯಾಗಿದ್ದಾರೆ.

ತಾವು ಸಾಮಾಜಿಕ ಜಾಲತಾಣದಲ್ಲಿ ವಂಚನೆಗೆ ಒಳಗಾಗಿರುವ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸೋನು ನಿಗಮ್ ಹೇಳಿಕೊಂಡಿದ್ದಾರೆ. ಸುಮಾರು 8 ವರ್ಷಗಳಿಂದ ತಮ್ಮ ಟ್ವಿಟ್ಟರ್ ಖಾತೆ ಸಕ್ರಿಯವಾಗಿಲ್ಲ ಎಂದಿರುವ ಸೋನು ನಿಗಮ್ ಆದರೂ ತಮ್ಮ ಹೆಸರಿನಲ್ಲಿ ಎಕ್ಸ್ ನಲ್ಲಿ ನಕಲಿ ಖಾತೆಗಳಿವೆ. ಇಂತಹ ನಕಲಿ ಖಾತೆಗಳನ್ನು ನಿರ್ಬಂಧಿಸಿ. ಈ ಬಗ್ಗೆ ತಮ್ಮ ಗಮನಕ್ಕೆ ತಂದ ಅಭಿಮಾನಿಗಳ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಗಾಯಕಿ ಶ್ರೇಯಾ ಘೋಷಾಲ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಆದರೆ, ಅನಂತರ ಅದನ್ನು ಮರು ಸ್ಥಾಪನೆ ಮಾಡಲಾಯಿತು. ಬಳಿಕ ಇದೀಗ ಗಾಯಕ ಸೋನು ನಿಗಮ್ ಅವರ ಹೆಸರಿನಲ್ಲಿ ನಕಲಿ ಖಾತೆ ಇರುವುದು ಬೆಳಕಿಗೆ ಬಂದಿದೆ. ತಾವು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದು ನನ್ನ ಹೆಸರಿನಲ್ಲಿ ನಕಲಿ ಖಾತೆ ಇರುವುದಾಗಿ ಅವರು ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಗಮನಕ್ಕೆ ತಂದಿದ್ದಾರೆ.

ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಜಾಗರೂಕರಾಗಿರಲು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿರುವ ಅವರು, ಸುಮಾರು ಎಂಟು ವರ್ಷಗಳಿಂದ ತಾವು ಟ್ವಿಟರ್ ನಲ್ಲಿ ಸಕ್ರಿಯವಾಗಿಲ್ಲ ಎಂದು ತಿಳಿಸಿದ್ದಾರೆ. ನನ್ನ ಹೆಸರಿನಲ್ಲಿ ಪ್ರಸಾರವಾಗುವ ಯಾವುದೇ ದಾರಿ ತಪ್ಪಿಸುವ ಪ್ರೊಫೈಲ್‌ಗಳಿದ್ದರೆ ಅದನ್ನು ಗಮನಕ್ಕೆ ತನ್ನಿ ಮತ್ತು ನಿರ್ಬಂಧಿಸಲು ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: Viral News: ಹೊರಗೆ ಸಿಗು ನೋಡ್ಕೊಳ್ತೇನೆ... ತನ್ನ ವಿರುದ್ಧ ತೀರ್ಪು ನೀಡಿದ ಜಡ್ಜ್‌ಗೆ ಕಟಕಟೆಯಲ್ಲೇ ನಿಂತು ಕಿಡಿಗೇಡಿಯ ಬೆದರಿಕೆ

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ... ಯಾರೋ ನನ್ನ ಗುರುತನ್ನು ಆನ್‌ಲೈನ್‌ನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ದಯವಿಟ್ಟು ಗಮನಿಸಿ, ನನ್ನ ತಂಡದ ಯಾರೂ ಯಾವುದೇ ಕಾರಣಕ್ಕೂ ನನ್ನ ಪರವಾಗಿ ಯಾರನ್ನೂ ಸಂಪರ್ಕಿಸಿಲ್ಲ. ಯಾರಾದರೂ ನನ್ನ ಆಡಳಿತ ಮಂಡಳಿಯವರೆಂದು ಹೇಳಿಕೊಂಡು ನಿಮ್ಮನ್ನು ಅನಿರೀಕ್ಷಿತವಾಗಿ ಸಂಪರ್ಕಿಸಿದರೆ ದಯವಿಟ್ಟು ಅದನ್ನು ಎಚ್ಚರಿಕೆಯಿಂದ ಪರಿಗಣಿಸಿ”

ನಾನು ಕಳೆದ 8 ವರ್ಷಗಳಿಂದ ಟ್ವಿಟರ್ ನಲ್ಲಿ ಇಲ್ಲ. ಜನರು ನನ್ನದು ಎಂದು ನಂಬಬಹುದಾದ ಕೆಲವು ಖಾತೆಗಳನ್ನು ವಾಸ್ತವವಾಗಿ ಬೇರೆಯವರು ನಡೆಸುತ್ತಿದ್ದಾರೆ. ನೀವು ಅಂತಹ ನಕಲಿ ಖಾತೆಗಳು ಅಥವಾ ಸಂದೇಶಗಳನ್ನು ಕಂಡರೆ ದಯವಿಟ್ಟು ವರದಿ ಮಾಡಿ ಮತ್ತು ನಿರ್ಬಂಧಿಸಿ. ಸಮಸ್ಯೆಯನ್ನು ನನಗೆ ತಿಳಿಸಿದವರಿಗೆ ಧನ್ಯವಾದಗಳು ಎಂದು ಸೋನು ನಿಗಮ್ ಹೇಳಿದ್ದಾರೆ.