ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actor Jaggesh: ಕೆಟ್ಟ ಅಭ್ಯಾಸ ಬಿಟ್ಟುಬಿಡಿ! ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

Jaggesh: ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಒಂದಲ್ಲ ಒಂದು ಪೋಸ್ಟ್‌ ಶೇರ್‌ ಮಾಡುತ್ತಲೇ ಇರುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಗುಣ, ಉತ್ತಮ ಚಿಂತನೆ, ಉತ್ತಮ ಪರಿಸರ, ಉತ್ತಮ ಸ್ನೇಹ, ಉತ್ತಮ ಆಹಾರ, ಉತ್ತಮ ಆರೋಗ್ಯ, ಉತ್ತಮ ಮಾತು, ಉತ್ತಮ ಆಯ್ಕೆ ಹಾಗೂ ಉತ್ತಮ ಸಂಗಾತಿ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.

ಕೆಟ್ಟ ಅಭ್ಯಾಸ ಬಿಟ್ಟುಬಿಡಿ!  ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

ಜಗ್ಗೇಶ್‌ ಸಿನಿಮಾ -

Yashaswi Devadiga
Yashaswi Devadiga Jul 15, 2026 8:58 PM

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ (Jaggesh) ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಒಂದಲ್ಲ ಒಂದು ಪೋಸ್ಟ್‌ ಶೇರ್‌ ಮಾಡುತ್ತಲೇ ಇರುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಪೋಸ್ಟ್‌ನಲ್ಲಿ ಏನಿದೆ?

ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಬರಹ ಹಂಚಿಕೊಂಡಿರುವ ಜಗ್ಗೇಶ್, ಚಾಣಕ್ಯ ನೀತಿ ಹಾಗೂ ಶ್ರೀಕೃಷ್ಣ-ಅರ್ಜುನ ಸಂವಾದವನ್ನು ಉಲ್ಲೇಖಿಸಿ ಯಶಸ್ಸಿನ ಮೂಲ ಮಂತ್ರವನ್ನು ವಿವರಿಸಿದ್ದಾರೆ. "ಶ್ರೀಕೃಷ್ಣ ಅರ್ಜುನನಿಗೆ 'ಅಭ್ಯಾಸೇನ ಕೌಂತೇಯ' ಎಂದು ಹೇಳಿದ್ದು, ಯಾವುದೇ ಕೆಲಸವನ್ನು ನಿರಂತರ ಅಭ್ಯಾಸ ಮಾಡಿದರೆ ಅದು ಜೀವನದ ಭಾಗವಾಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.

ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಗುಣ, ಉತ್ತಮ ಚಿಂತನೆ, ಉತ್ತಮ ಪರಿಸರ, ಉತ್ತಮ ಸ್ನೇಹ, ಉತ್ತಮ ಆಹಾರ, ಉತ್ತಮ ಆರೋಗ್ಯ, ಉತ್ತಮ ಮಾತು, ಉತ್ತಮ ಆಯ್ಕೆ ಹಾಗೂ ಉತ್ತಮ ಸಂಗಾತಿ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Uma Shankari: ‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್! ಭಾವನಾತ್ಮಕ ಪೋಸ್ಟ್ ವೈರಲ್‌

ಇದರ ಜೊತೆಗೆ, "ಜೀವನದಲ್ಲಿ ಗೆಲ್ಲಬೇಕಾದರೆ ಗೆಲುವಿಗೆ ಅಡ್ಡಿಯಾಗುವ ಕೆಟ್ಟ ಅಭ್ಯಾಸಗಳನ್ನು ಯಾವುದೇ ಕರುಣೆ ಇಲ್ಲದೆ ಬಿಟ್ಟುಬಿಡಿ. ಆಗ ನಿಮ್ಮ ಬದುಕಿಗೆ ನೀವೇ ರಾಜ, ನೀವೇ ಮಂತ್ರಿ, ನೀವೇ ಸೈನಿಕ, ನೀವೇ ಸಾಧಕ" ಎಂದು ಪ್ರೇರಣಾದಾಯಕ ಸಂದೇಶ ನೀಡಿದ್ದಾರೆ.

ಈ ಹಿಂದೆ ಕೂಡ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯ ಮತ್ತು ಯೌವನದ ದಿನಗಳಲ್ಲಿ ಆರ್ಥಿಕ ಸಂಕಷ್ಟ, ಹಸಿವು, ಅವಮಾನ, ಅವಕಾಶಗಳ ಕೊರತೆ ಹಾಗೂ ಜೀವನದ ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದಾಗಿ ಜಗ್ಗೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: Samantha Ruth Prabhu: ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ನಟಿ; ಸಮಂತಾ ಫುಲ್ ಖುಷ್‌!

ಕೆಲ ಸಂದರ್ಭಗಳಲ್ಲಿ ತಂದೆ-ತಾಯಿಯ ಮೇಲೆಯೂ ಅಸಮಾಧಾನ ಮೂಡುತ್ತಿತ್ತು. ಆದರೆ ಜೀವನದಲ್ಲಿ ಎಂದಿಗೂ ಕುಗ್ಗದಂತೆ ಮಾಡಿದವರು ತಮ್ಮ ತಾಯಿ ಎಂದು ಅವರು ಭಾವುಕರಾಗಿ ಸ್ಮರಿಸಿದ್ದರು.