ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಧುರಂಧರ್‌ 2ʼ ಚಿತ್ರಕ್ಕಿಂತಲೂ ʻಟಾಕ್ಸಿಕ್‌ʼ ಮೇಲೆ ಡಬಲ್‌ ನಿರೀಕ್ಷೆ; ಯಶ್‌ ಸಿನಿಮಾದ ಮುಂದೆ ಎಲ್ಲರೂ ಡಲ್ಲೋ ಡಲ್ಲು!

Toxic Movie: ಭಾರತೀಯ ಚಿತ್ರರಂಗದ ಅತ್ಯಂತ ಬಹುನಿರೀಕ್ಷಿತ ಸಿನಿಮಾವಾಗಿ ಟಾಕ್ಸಿಕ್‌ ಹೊರಹೊಮ್ಮಿದೆ. ಐಎಂಡಿಬಿ ಬಿಡುಗಡೆ ಮಾಡಿದ ಹೊಸ ಪಟ್ಟಿಯಲ್ಲಿ ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಶೇ. 42.3 ರಷ್ಟು ಮತಗಳೊಂದಿಗೆ ಅಗ್ರಸ್ಥಾನ ಪಡೆದಿದೆ.

IMDb ಲಿಸ್ಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್‌ಗೆ ನಂ.1 ಪಟ್ಟ

-

Avinash GR
Avinash GR Feb 13, 2026 6:59 PM

ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಡಿಬಿ (IMDb), ಭಾರತದ ಅತ್ಯಂತ ಬಹುನಿರೀಕ್ಷಿತ ಹೊಸ ಸಿನಿಮಾಗಳು ಮತ್ತು ಶೋಗಳ ಪಟ್ಟಿಯನ್ನು (Most Anticipated New Indian Movies and Shows) ಬಿಡುಗಡೆ ಮಾಡಿದೆ. ಜನಪ್ರಿಯತೆಯನ್ನು ಆಧರಿಸಿ ಸಿದ್ಧಪಡಿಸಲಾದ ಈ ಪಟ್ಟಿಯಲ್ಲಿ, ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಕ್ಕೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಅಗ್ರಸ್ಥಾನದಲ್ಲಿ ಯಶ್‌

ವಿಶ್ವಾದ್ಯಂತ ಇರುವ ಸಿನಿಪ್ರಿಯರು ಶೇ. 42.3 ರಷ್ಟು ಮತಗಳನ್ನು 'ಟಾಕ್ಸಿಕ್' ಸಿನಿಮಾಕ್ಕೆ ನೀಡಿದ್ದಾರೆ. ಆ ಮೂಲಕ ಟಾಪ್‌ 10ರ ಪಟ್ಟಿಯಲ್ಲಿ ಸಿಂಹಪಾಲನ್ನು ಟಾಕ್ಸಿಕ್ ಪಡೆದುಕೊಂಡಿದ್ದರೆ, ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದ ರಿವೆಂಜ್' ಶೇ. 23.6 ರಷ್ಟು ಜನಪ್ರಿಯತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದ ಸಿನಿಮಾಗಳು ಒಂದಂಕಿ ಅಥವಾ ಅದಕ್ಕಿಂತ ಕಡಿಮೆ ಶೇಕಡಾವಾರು ಪಾಲನ್ನು ಪಡೆದಿವೆ. ಇದು ಯಶ್‌ ನಟನೆಯ ಟಾಕ್ಸಿಕ್ ಸಿನಿಮಾದ ಮೇಲಿರುವ ಪ್ರೇಕ್ಷಕರಿಗಿರುವ ಭಾರೀ ಕ್ರೇಜ್‌ ಎಂಥದ್ದು ಎಂಬುದನ್ನು ಎತ್ತಿ ತೋರಿಸುತ್ತದೆ.

Toxic Movie: ಟಾಕ್ಸಿಕ್‌ ಸಿನಿಮಾಗೆ ಮತ್ತೊಂದು ಸಂಕಷ್ಟ, ಸಿಡಿದೆದ್ದ ಕ್ರೈಸ್ತರ ಒಕ್ಕೂಟ

ಐಎಂಡಿಬಿ ಟಾಪ್ 10 ಪಟ್ಟಿ ಇಲ್ಲಿದೆ

ಟಾಕ್ಸಿಕ್ - 42.3%

ಧುರಂಧರ್: ದ ರಿವೆಂಜ್ - 23.6%

ಅಸ್ಸಿ - 8.8%

ಎಲ್ಐಕೆ: ಲವ್ ಇನ್ಶೂರೆನ್ಸ್ ಕಂಪನಿ - 5.1%

ದ ಕೇರಳ ಸ್ಟೋರಿ 2 - 4.4%

ಸೀತಾ ಪಯಣಂ - 4.4%

ಯೂತ್ - 3.5%

ಕೆನಡಿ - 3%

ದೋ ದಿವಾನೆ ಸೆಹರ್ ಮೇ - 2.5%

ಕಪಲ್ ಫ್ರೆಂಡ್ಲಿ - 2.4%

ಟಾಕ್ಸಿಕ್‌ ಮುಂದೆ ಎಲ್ಲರೂ ಡಲ್

ಯಶ್‌ ಅವರ ಟಾಕ್ಸಿಕ್‌ ಸಿನಿಮಾಗೆ 42.3% ವೋಟ್‌ಗಳು ಸಿಕ್ಕಿದ್ದರೆ, ಧುರಂಧರ್‌ 2 ಸಿನಿಮಾಗೆ ಅಂದಾಜು ಅದರ ಅರ್ಧದಷ್ಟು (23.6%) ವೋಟ್‌ ಸಿಕ್ಕಿದೆ. ಅಚ್ಚರಿ ಎಂದರೆ, ಉಳಿದ 8 ಸಿನಿಮಾಗಳ ವೋಟಿಂಗ್‌ ಪರ್ಸೆಂಟೇಜ್‌ ಎರಡಂಕಿ ಕೂಡ ದಾಟಿಲ್ಲ! ಹಾಗಾಗಿ, ಸಿನಿಪ್ರಿಯರ ಗಮನವೆಲ್ಲಾ ಬರೀ ಮಾರ್ಚ್‌ 19ರ ಮೇಲಿದೆ. ಅಂದು ಒಟ್ಟೊಟ್ಟಿಗೆ ತೆರೆಗೆ ಬರಲಿರುವ ಟಾಕ್ಸಿಕ್‌ ಮತ್ತು ಧುರಂಧರ್‌ 2 ಸಿನಿಮಾಗಳ ಕ್ಲ್ಯಾಶ ಯಾವ ರೀತಿ ಇರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.

Yash Toxic teaser: ಯಶ್ ಟಾಕ್ಸಿಕ್‌ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ

ಸದ್ಯದ ಕ್ರೇಜ್‌ ಗಮನಿಸಿದರೆ, ಯಶ್‌ ಟಾಕ್ಸಿಕ್‌ ಸಿನಿಮಾಕ್ಕೆ ಧುರಂಧರ್: ದ ರಿವೆಂಜ್ ಚಿತ್ರಕ್ಕಿಂತ ದೊಡ್ಡ ಪ್ರಮಾಣದ ಓಪನಿಂಗ್‌ ಸಿಗಲಿದೆ ಎಂಬ ನಿರೀಕ್ಷೆ ಇದೆ.