ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Drishyam 3: ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

Drishyam 3: ಮೋಹನ್ ಲಾಲ್ ನಟಿಸಿದ 2013 ರ ಮಲಯಾಳಂ ದೃಶ್ಯಂ ಮತ್ತು 2022 ರಲ್ಲಿ ಬಿಡುಗಡೆಯಾದ ದೃಶ್ಯಂ 2ನ ಮುಂದುವರಿದ ಭಾಗ ಇದಾಗಿದೆ. ದೃಶ್ಯಂ ಚಿತ್ರವು ಭಾರತೀಯ ಚಲನಚಿತ್ರ ಪ್ರೇಕ್ಷಕರು ವಿವಿಧ ಭಾಷೆಗಳಲ್ಲಿ ಸ್ವೀಕರಿಸಿದ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಬೇರೆ ಯಾವುದೇ ಮಲಯಾಳಂ ಚಿತ್ರವು ಇಷ್ಟೊಂದು ಭಾಷೆಗಳಲ್ಲಿ ರೀಮೇಕ್ ಆಗಿಲ್ಲ. 'ದೃಶ್ಯಂ 3' ಕನ್ನಡ ಮತ್ತು ತೆಲುಗಿನಲ್ಲಿ ಯಾಕೆ ರಿಮೇಕ್ ಆಗುತ್ತಿಲ್ಲ? ಈ ಪ್ರಶ್ನೆಗೆ ನಿರ್ದೇಶಕ ಜೀತು ಜೋಸೆಫ್ ಅವರೇ ಉತ್ತರ ನೀಡಿದ್ದಾರೆ.

ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

ದೃಶ್ಯಂ 3 ಸಿನಿಮಾ -

Yashaswi Devadiga
Yashaswi Devadiga Jun 7, 2026 7:32 PM

ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು ಮೇ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೋಹನ್ ಲಾಲ್ (Mohan Lal) ನಟಿಸಿದ 2013 ರ ಮಲಯಾಳಂ ದೃಶ್ಯಂ (Drishyam) ಮತ್ತು 2022 ರಲ್ಲಿ ಬಿಡುಗಡೆಯಾದ ದೃಶ್ಯಂ 2ನ ಮುಂದುವರಿದ ಭಾಗ ಇದಾಗಿದೆ. ದೃಶ್ಯಂ ಚಿತ್ರವು ಭಾರತೀಯ ಚಲನಚಿತ್ರ ಪ್ರೇಕ್ಷಕರು ವಿವಿಧ ಭಾಷೆಗಳಲ್ಲಿ ಸ್ವೀಕರಿಸಿದ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಬೇರೆ ಯಾವುದೇ ಮಲಯಾಳಂ ಚಿತ್ರವು ಇಷ್ಟೊಂದು ಭಾಷೆಗಳಲ್ಲಿ ರೀಮೇಕ್ (Remake) ಆಗಿಲ್ಲ. 'ದೃಶ್ಯಂ 3' ಕನ್ನಡ ಮತ್ತು ತೆಲುಗಿನಲ್ಲಿ ಯಾಕೆ ರಿಮೇಕ್ ಆಗುತ್ತಿಲ್ಲ? ಈ ಪ್ರಶ್ನೆಗೆ ನಿರ್ದೇಶಕ ಜೀತು ಜೋಸೆಫ್ ಅವರೇ ಉತ್ತರ ನೀಡಿದ್ದಾರೆ.

ದೃಶ್ಯಂ 3 ಹಿಂದಿ ರಿಮೇಕ್‌ಗೆ ಮಾತ್ರ ಸಹಿ

ದೃಶ್ಯಂ ಚಿತ್ರದ ಮೊದಲ ಭಾಗವನ್ನು ಭಾರತದ ಇತರ ನಾಲ್ಕು ಭಾಷೆಗಳಲ್ಲಿ ರೀಮೇಕ್ ಮಾಡಲಾಯಿತು. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ. ಮಲಯಾಳಂ ಮೂಲ ಸಿನಿಮಾ ಬಿಡುಗಡೆಯಾದ ದಿನವೇ ತಮಿಳು, ತೆಲುಗು ಮತ್ತು ಕನ್ನಡಕ್ಕೆ ಡಬ್ ಮಾಡಿದ ಆವೃತ್ತಿಗಳನ್ನು ಆಯಾ ರಾಜ್ಯಗಳಲ್ಲಿ ರಿಲೀಸ್ ಮಾಡಲಾಗಿತ್ತು.

ಇದನ್ನೂ ಓದಿ: Rachita Ram: ಟಾಲಿವುಡ್‌ಗೆ ರಚಿತಾರಾಮ್ ರೀ ಎಂಟ್ರಿ? ಏನಿದು ಅಪ್‌ಡೇಟ್‌?

ದೃಶ್ಯಂ 2 ಬಂದಾಗ, ಚಿತ್ರವನ್ನು ತಮಿಳು ಹೊರತುಪಡಿಸಿ ಇತರ ಮೂರು ಭಾಷೆಗಳಲ್ಲಿ ರೀಮೇಕ್ ಮಾಡಲಾಯಿತು. ಮತ್ತೊಂದೆಡೆ, ಇತ್ತೀಚೆಗೆ ಬಿಡುಗಡೆಯಾದ ದೃಶ್ಯಂ 3 ಹಿಂದಿ ರಿಮೇಕ್‌ಗೆ ಮಾತ್ರ ಸಹಿ ಹಾಕಲಾಗಿದೆ.

ಕನ್ನಡ ಮತ್ತು ತೆಲುಗಿನಲ್ಲಿ ಯಾಕೆ ರಿಮೇಕ್ ಆಗುತ್ತಿಲ್ಲ. 'ದೃಶ್ಯಂ 3' ಕಥೆಯ ಕ್ಲೈಮ್ಯಾಕ್ಸ್ ಬೇರೆ ಭಾಷೆಗಳಿಗೆ, ವಿಶೇಷವಾಗಿ ಅಲ್ಲಿನ ಹೀರೋಗಳ ಇಮೇಜ್‌ಗೆ ಸರಿಹೊಂದುವುದಿಲ್ಲ. ಇದೇ ಕಾರಣಕ್ಕೆ ರಿಮೇಕ್ ಮಾಡುತ್ತಿಲ್ಲ ಎಂದು ಜೀತು ಜೋಸೆಫ್ ಹೇಳಿದ್ದಾರೆ. "'ದೃಶ್ಯಂ 3' ಹಿಂದಿಯಲ್ಲಿ ಮಾತ್ರ ಬರಲಿದೆ. ನಮ್ಮ ಕ್ಲೈಮ್ಯಾಕ್ಸ್ ಬೇರೆ ಭಾಷೆಯವರಿಗೆ ವರ್ಕ್ ಆಗುತ್ತಿಲ್ಲ.

ಅವರ ನಾಯಕರ ಇಮೇಜ್‌ಗೆ ಸಂಬಂಧಿಸಿದಂತೆ ಕೊನೆಯಲ್ಲಿ ಒಂದು ಸಮಸ್ಯೆ ಇದೆ. ಹಿಂದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಮ್ಮನ್ನು ಕೇಳಿದ್ದರು. ಅವರು ನಮ್ಮ ಕಥೆಯ ಹಕ್ಕುಗಳನ್ನು ಖರೀದಿಸಿದರೆ, ಅವರು ಅದನ್ನು ಅವರು ಇಷ್ಟಪಟ್ಟಂತೆ ಬದಲಾಯಿಸಬಹುದು. ಹಿಂದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ”, ಎಂಬುದು ಜೀತು ಜೋಸೆಫ್ ಅವರ ಉತ್ತರವಾಗಿತ್ತು. ನಮ್ಮ ಕಥೆಯ ಹಕ್ಕುಗಳನ್ನು ಖರೀದಿಸಿದ ಮೇಲೆ ಅವರಿಗೆ ಇಷ್ಟಬಂದಂತೆ ಬದಲಾವಣೆ ಮಾಡಿಕೊಳ್ಳಬಹುದು. ಆದರೂ, ಅವರು ಸೌಜನ್ಯಕ್ಕೆ ನಮ್ಮನ್ನು ಕೇಳಿದರು ಎಂದಿದ್ದಾರೆ.

ದೃಶ್ಯಂ 3 ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 225 ಕೋಟಿ ರೂ. ಗಡಿ ದಾಟಿ ಮುನ್ನಡೆಯುತ್ತಿದೆ. ಈ ಚಿತ್ರವು ಮೇ 21 ರಂದು ಮೋಹನ್ ಲಾಲ್ ಅವರ ಜನ್ಮದಿನದಂದು ಜಾಗತಿಕವಾಗಿ ಬಿಡುಗಡೆಯಾಯಿತು. ಈ ಚಿತ್ರವು ಕೇವಲ ಒಂದು ವಾರದಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಕ್ಲಬ್ ಅನ್ನು ಪ್ರವೇಶಿಸಿತು.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ? ಯಾವುದೆಲ್ಲ?

ದೃಶ್ಯಂ ಚಿತ್ರದ ಯಶಸ್ಸು ಮತ್ತು ಮೆಚ್ಚುಗೆಯಿಂದಾಗಿ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ, ಚೈನೀಸ್(ಮ್ಯಾಂಡರಿನ್) ಮತ್ತು ಸಿಂಹಳೀಯರು ಸೇರಿದಂತೆ ಹಲವಾರು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿದೆ.