ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss: ಬಿಗ್ ​​ಬಾಸ್ ಮನೆಯಲ್ಲಿ ಲವ್; ಶೋ ಬಿಟ್ಟು ಬರುವಂತೆ ಮಗಳು ನೇಹಾ ಫಾತಿಮಾ ಬಳಿ ಕಣ್ಣೀರಿಟ್ಟ ಪೋಷಕರು

Bigg Boss:ಬಿಗ್ ಬಾಸ್ ಮಲಯಾಳಂ ಸೀಸನ್ 8 (Bigg Boss Malayalam) ರಿಯಾಲಿಟಿ ಶೋನಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಸ್ಪರ್ಧಿ ನೇಹಾ ಫಾತಿಮಾ ಅವರನ್ನು ಶೋನಿಂದ ಹೊರಬರುವಂತೆ ಅವರ ಪೋಷಕರೇ ಮನವಿ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ವೀಕ್ ಆರಂಭಕ್ಕೂ ಮುನ್ನವೇ ನೇಹಾ ಅವರನ್ನು ಭೇಟಿಯಾಗಲು ಅವರ ತಂದೆ-ತಾಯಿ ವೇದಿಕೆಗೆ ಬಂದಿದ್ದು, ಈ ವೇಳೆ ನಡೆದ ಭಾವುಕ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

Bigg Boss ಬಿಟ್ಟು ಬರುವಂತೆ ಮಗಳ  ಬಳಿ ಕಣ್ಣೀರಿಟ್ಟ ಪೋಷಕರು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 1, 2026 7:48 PM

ಬಿಗ್ ಬಾಸ್ ಮಲಯಾಳಂ ಸೀಸನ್ 8 (Bigg Boss Malayalam) ರಿಯಾಲಿಟಿ ಶೋನಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಸ್ಪರ್ಧಿ ನೇಹಾ ಫಾತಿಮಾ ಅವರನ್ನು ಶೋನಿಂದ ಹೊರಬರುವಂತೆ ಅವರ ಪೋಷಕರೇ ಮನವಿ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ವೀಕ್ ಆರಂಭಕ್ಕೂ ಮುನ್ನವೇ ನೇಹಾ ಅವರನ್ನು ಭೇಟಿಯಾಗಲು ಅವರ ತಂದೆ-ತಾಯಿ ವೇದಿಕೆಗೆ ಬಂದಿದ್ದು, ಈ ವೇಳೆ ನಡೆದ ಭಾವುಕ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಶೋನ ನಿರೂಪಕ, ನಟ ಮೋಹನ್‌ಲಾಲ್ ಅವರು ನೇಹಾ ಅವರಿಗೆ ಅವರ ಪೋಷಕರು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದಾಗ ಅವರು ಅಚ್ಚರಿಯ ಜೊತೆಗೆ ಸಂತೋಷಗೊಂಡರು. ಆದರೆ, ಬಹಳ ದಿನಗಳ ಬಳಿಕ ತಂದೆ-ತಾಯಿಯನ್ನು ನೋಡಿದ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಏಕೆಂದರೆ, ಅವರ ಪೋಷಕರು ನೇಹಾ ಅವರಿಗೆ ಶೋ ಬಿಟ್ಟು ಹೊರಬರುವಂತೆ ಮನವಿ ಮಾಡಿದರು.

ಮಗಳ ಆಟದ ಬಗ್ಗೆ ಪೋಷಕರ ಅಸಮಾಧಾನ

ವಾರಾಂತ್ಯದ ಸಂಚಿಕೆಯ ಪ್ರೋಮೋದಲ್ಲಿ ನೇಹಾ ಅವರ ತಾಯಿ ಕಣ್ಣೀರಿಡುತ್ತಾ ಮಗಳೊಂದಿಗೆ ಮಾತನಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ವೇಳೆ ನೇಹಾ ಅವರ ತಂದೆ, "ನೇಹಾ, ನಿನಗೆ ನಾವು ನೆನಪಿದ್ದೇವಾ? ನಿನಗೆ ನಮ್ಮ ನೆನಪೇ ಇಲ್ಲ ಎಂದು ನಮಗೆ ಅನಿಸುತ್ತಿದೆ" ಎಂದು ಭಾವುಕವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸಮುದಾಯವೊಂದನ್ನು ಹೀಯಾಳಿಸುವಂತಹ ಪದ ಬಳಕೆ; ಕ್ಷಮೆ ಕೇಳಿದ ಯಶಸ್

ಇನ್ನು ಶೋನಲ್ಲಿ ನೇಹಾ ದಾರಿ ತಪ್ಪುತ್ತಿದ್ದಾರೆ. ಮನೆಯಲ್ಲಿರುವ ಉಳಿದ ಸ್ಪರ್ಧಿಗಳು ತಮ್ಮ ಆಟ ಆಡುತ್ತಿದ್ದರೆ, ನೇಹಾ ಮಾತ್ರ ಭಾವನೆಗಳಲ್ಲಿ ಮುಳುಗಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಅಲ್ಲದೆ, ಇತರ ಸ್ಪರ್ಧಿಗಳು ತಮ್ಮ ಸ್ವಾರ್ಥಕ್ಕಾಗಿ ನೇಹಾ ಅವರ ಭಾವನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.



"ಮನೆಯಲ್ಲಿರುವ ಎಲ್ಲರೂ ಆಟ ಆಡುತ್ತಿದ್ದಾರೆ. ಆದರೆ ನೀನು ಮಾತ್ರ ನಿನ್ನ ಭಾವನೆಗಳಲ್ಲೇ ಸಿಲುಕಿಕೊಂಡಿದ್ದೀಯ. ಇತರರು ತಮ್ಮ ಉದ್ದೇಶಗಳಿಗಾಗಿ ನಿನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಆಡಬೇಡ ಎಂದು ಹೇಳಿದ್ದ ಅದೇ ಆಟವನ್ನು ನೀನು ಆಡುತ್ತಿದ್ದೀಯ. ಇದರಿಂದ ನೋವು ಅನುಭವಿಸುತ್ತಿರುವವರು ನಾವು" ಎಂದು ನೇಹಾ ಅವರ ತಾಯಿ ಕಣ್ಣೀರಿಡುತ್ತಾ ಹೇಳಿದ್ದಾರೆ.

ತಾಶಿ ರಾಜ್ ಮೇಲಿನ ಪ್ರೀತಿಯೇ ಪೋಷಕರ ಅಸಮಾಧಾನಕ್ಕೆ ಕಾರಣವೇ?

ನೇಹಾ ಫಾತಿಮಾ ಅವರ ಪೋಷಕರ ಈ ಮಧ್ಯಪ್ರವೇಶಕ್ಕೆ ಮತ್ತೊಂದು ಪ್ರಮುಖ ಕಾರಣವೂ ಇದೆ. ಶೋನ ಸಹ ಸ್ಪರ್ಧಿ ತಾಶಿ ರಾಜ್ ಅಲಿಯಾಸ್ ಸಂತೋಷ್ ಅವರ ಮೇಲೆ ನೇಹಾ ಪ್ರೀತಿ ವ್ಯಕ್ತಪಡಿಸಿದ್ದರು.

ಇತ್ತೀಚಿನ ಸಂಚಿಕೆಯೊಂದರಲ್ಲಿ ನೇಹಾ ಅವರು ತಾಶಿ ಬಳಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಅಲ್ಲದೆ, ಶೋ ಮುಗಿದ ಬಳಿಕ ತಮ್ಮ ಪೋಷಕರ ಒಪ್ಪಿಗೆಯೊಂದಿಗೆ ಈ ಸಂಬಂಧವನ್ನು ಮುಂದುವರಿಸುವ ಉದ್ದೇಶವಿದೆ ಎಂದೂ ತಿಳಿಸಿದ್ದರು.ತಾಶಿ ಮತ್ತೊಬ್ಬ ಮಹಿಳಾ ಸ್ಪರ್ಧಿ ವೇದಾಂಗಿಯೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ನೇಹಾ ಅಸಮಾಧಾನಗೊಂಡಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ತಾಶಿ ಅವರು ವೇದಾಂಗಿಯ ಬಗ್ಗೆ ಯಾವುದೇ ಪ್ರೀತಿಯ ಭಾವನೆ ಇಲ್ಲ ಎಂದು ನೆಹಾ ಅವರಿಗೆ ಸ್ಪಷ್ಟನೆ ನೀಡಿದ್ದರು.

ಇದಕ್ಕೂ ಮುನ್ನ ತಾಶಿ ಕೂಡ ಮತ್ತೊಬ್ಬ ಸ್ಪರ್ಧಿಯೊಂದಿಗೆ ಮಾತನಾಡುವಾಗ ನೇಹಾ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Bigg Boss Kannada 13: ಮುಚ್ಕೊಂಡು ಕುತ್ಕೋ ಅಂದ್ರೆ ಸುಮ್ಮನಿರಲ್ಲ; ಗಗನ್‌ ಮೇಲೆ ಯಶಸ್‌ ಸಿಟ್ಟು

ಒಂದೆಡೆ ತಾಶಿ ಮೇಲಿನ ಪ್ರೀತಿ, ಮತ್ತೊಂದೆಡೆ ಪೋಷಕರ ಭಾವನಾತ್ಮಕ ಮನವಿ. ಈ ಎರಡರ ನಡುವೆ ನೇಹಾ ಫಾತಿಮಾ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಪೋಷಕರ ಮಾತಿಗೆ ಮಣಿದು ಅವರು ಬಿಗ್ ಬಾಸ್ ಮನೆಯಿಂದ ಹೊರಬರುತ್ತಾರಾ ಅಥವಾ ತಮ್ಮ ಆಟವನ್ನು ಮುಂದುವರಿಸುತ್ತಾರಾ ಎಂಬುದು ಸಂಚಿಕೆಯಲ್ಲಿ ತಿಳಿಯಲಿದೆ.