Kabir Life: ಸಂತ ಕಬೀರರ ಜೀವನಗಾಥೆ ಈಗ ಬೆಳ್ಳಿತೆರೆಗೆ: ‘ಕಬೀರಾ’ ಚಿತ್ರಕ್ಕೆ ಅಭಿಷೇಕ್ ಶರ್ಮಾ ನಿರ್ದೇಶನ!
Kabir life and poetry : 15ನೇ ಶತಮಾನದ ಪ್ರಸಿದ್ಧ ಕವಿ ಹಾಗೂ ಸಂತ ಸಂತ ಕಬೀರರ ಜೀವನಾಧಾರಿತ ಹೊಸ ಸಿನಿಮಾ ನಿರ್ಮಾಣವಾಗಲಿದೆ. ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದ್ದ ‘ಹನುಮಾನ್ ಅಂಶ್’ (Hanuman ansh) ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿದ್ದ ಮಹಾವೀರ್ ಜೈನ್ ಫಿಲ್ಮ್ಸ್ ಇದೀಗ ‘ಕಬೀರಾ’ (Kabira) ಹೆಸರಿನ ಹೊಸ ಸಿನಿಮಾವನ್ನು ಘೋಷಿಸಿದೆ. ಅಭಿಷೇಕ್ ಶರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, 2027ರಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಮಹಾವೀರ್ ಜೈನ್ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ.
ಕಬೀರ ಸಿನಿಮಾ -
15ನೇ ಶತಮಾನದ ಪ್ರಸಿದ್ಧ ಕವಿ ಹಾಗೂ ಸಂತ ಸಂತ ಕಬೀರರ ಜೀವನಾಧಾರಿತ ಹೊಸ ಸಿನಿಮಾ ನಿರ್ಮಾಣವಾಗಲಿದೆ. ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದ್ದ ‘ಹನುಮಾನ್ ಅಂಶ್’ (Hanuman ansh) ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿದ್ದ ಮಹಾವೀರ್ ಜೈನ್ ಫಿಲ್ಮ್ಸ್ ಇದೀಗ ‘ಕಬೀರಾ’ (Kabira) ಹೆಸರಿನ ಹೊಸ ಸಿನಿಮಾವನ್ನು ಘೋಷಿಸಿದೆ. ಅಭಿಷೇಕ್ ಶರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, 2027ರಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಮಹಾವೀರ್ ಜೈನ್ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ.
15ನೇ ಶತಮಾನದ ಕಾಶಿ (ವಾರಣಾಸಿ) ಹಿನ್ನೆಲೆಯಲ್ಲಿರುವ ಈ ಸಿನಿಮಾ ಸಂತ ಕಬೀರರ ಜೀವನ, ತತ್ವಜ್ಞಾನ ಮತ್ತು ಕಾವ್ಯ ಪರಂಪರೆಯನ್ನು ಸಂಗೀತಮಯ ಕಥನದ ಮೂಲಕ ಪ್ರೇಕ್ಷಕರ ಮುಂದೆ ತರಲಿದೆ.
ಯಾರು ಈ ಸಂತ ಕಬೀರರು?
ಭಾರತದ ಭಕ್ತಿ ಚಳವಳಿಯ ಅತ್ಯಂತ ಪ್ರಭಾವಶಾಲಿ ಸಂತರು ಹಾಗೂ ಕವಿಗಳಲ್ಲಿ ಸಂತ ಕಬೀರರು ಪ್ರಮುಖರು. ಅವರು ನೇಕಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ನಂಬಲಾಗಿದೆ.
ತಮ್ಮ ದೋಹೆಗಳು ಮತ್ತು ಕವಿತೆಗಳ ಮೂಲಕ ಸಮಾಜದಲ್ಲಿದ್ದ ಜಾತಿ-ಧರ್ಮದ ಭೇದಭಾವ, ಮೂಢನಂಬಿಕೆ ಹಾಗೂ ಸಂಪ್ರದಾಯಗಳಲ್ಲಿನ ಅಸಮಾನತೆಗಳನ್ನು ಪ್ರಶ್ನಿಸಿದ್ದರು. ಧರ್ಮದ ಗುರುತಿಗಿಂತ ಮಾನವೀಯತೆ ಮತ್ತು ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು.
ಇದನ್ನೂ ಓದಿ: OTT releases: ಈ ವಾರ OTTಯಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್ ಲಿಸ್ಟ್ ಇಲ್ಲಿವೆ!
ಕಬೀರರ ಪ್ರಸಿದ್ಧ ದೋಹೆಗಳಲ್ಲಿ ಒಂದಾದ,“ಜಾತಿ ನಾ ಪೂಛೋ ಸಾಧು ಕೀ, ಪೂಛ್ ಲೀಜಿಯೇ ಜ್ಞಾನ”ಅಂದರೆ, ಒಬ್ಬ ಸಾಧುವಿನ ಜಾತಿಯನ್ನು ಕೇಳಬೇಡಿ, ಅವರ ಜ್ಞಾನವನ್ನು ಕೇಳಿ ಎಂಬ ಸಂದೇಶವನ್ನು ನೀಡುತ್ತದೆ. ಈ ಸಾಲುಗಳು ಜಾತಿ ಆಧಾರಿತ ತಾರತಮ್ಯವನ್ನು ವಿರೋಧಿಸಿದ ಕಬೀರರ ವಿಚಾರಧಾರೆಯನ್ನು ಪ್ರತಿಬಿಂಬಿಸುತ್ತವೆ.
‘ಕಬೀರಾ’ ಸಿನಿಮಾದಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನ
ಈ ಸಿನಿಮಾದಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಲಿದೆ. Variety India ವರದಿಯ ಪ್ರಕಾರ, ಖ್ಯಾತ ಸಂಗೀತ ನಿರ್ದೇಶಕ ತನಿಷ್ಕ್ ಬಾಗ್ಚಿ ಚಿತ್ರದ ಸಂಗೀತ ಸಂಯೋಜನೆ ಮಾಡಲಿದ್ದಾರೆ.ಜಾನಪದ ಸಂಗೀತ, ಸೂಫಿ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಸಂಪ್ರದಾಯಗಳನ್ನು ಆಧರಿಸಿ ವಿಶೇಷ ಆಲ್ಬಂ ಸಿದ್ಧಪಡಿಸಲಾಗುತ್ತದೆ. ಸಂತ ಕಬೀರರ ದೋಹೆಗಳು ಮತ್ತು ಕವಿತೆಗಳೇ ಚಿತ್ರದ ಹಾಡುಗಳಿಗೆ ಪ್ರಮುಖ ಆಧಾರವಾಗಿರಲಿವೆ.
ಅಷ್ಟೇ ಅಲ್ಲದೆ, 15ನೇ ಶತಮಾನದ ಕಾಶಿಯ ವಾತಾವರಣವನ್ನು ಮರುಸೃಷ್ಟಿಸಲು ಚಿತ್ರದ ನಿರ್ಮಾಪಕರು ವಾರಣಾಸಿಯ ಪ್ರಸಿದ್ಧ ಘಾಟ್ಗಳ ಸೆಟ್ಗಳನ್ನು ನಿರ್ಮಿಸಲು ಯೋಜಿಸಿದ್ದಾರೆ. ಇದರಿಂದ ಪ್ರೇಕ್ಷಕರಿಗೆ ಆ ಕಾಲಘಟ್ಟದ ಅನುಭವ ನೀಡುವ ಪ್ರಯತ್ನ ನಡೆಯಲಿದೆ.
ಯಾರೆಲ್ಲ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ?
ಮಹಾವೀರ್ ಜೈನ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಮಹಾವೀರ್ ಜೈನ್, ಅಮಿತ್ ಉಪಾಧ್ಯಾಯ್, ಸರಲ್ ವಲ್ಲಭ್ ಭನ್ಸಾಲಿ ಮತ್ತು ಶ್ರದ್ಧಾ ಸಿಂಗ್ ನಿರ್ಮಿಸುತ್ತಿದ್ದಾರೆ.A Shock and Awe Productions ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಅಭಿಷೇಕ್ ಶರ್ಮಾ ನಿರ್ದೇಶನದ ಪ್ರಮುಖ ಸಿನಿಮಾಗಳು
‘ಕಬೀರಾ’ ಸಿನಿಮಾವನ್ನು ನಿರ್ದೇಶಿಸುತ್ತಿರುವ ಅಭಿಷೇಕ್ ಶರ್ಮಾ ಈಗಾಗಲೇ ಹಲವು ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಈಗ ಸಂತ ಕಬೀರರ ಜೀವನ ಮತ್ತು ತತ್ವಜ್ಞಾನವನ್ನು ಆಧರಿಸಿದ ಸಿನಿಮಾ ನಿರ್ದೇಶಿಸುವ ಜವಾಬ್ದಾರಿ ಅವರ ಹೆಗಲೇರಿದೆ.ತುಳಸಿದಾಸರ ಜೀವನಾಧಾರಿತ ‘ರಂಬೋಲಾ’ ಸಿನಿಮಾವೂ ಘೋಷಣೆ.
ಇದನ್ನೂ ಓದಿ: OTT releases: ಈ ವಾರ OTTಯಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್ ಲಿಸ್ಟ್ ಇಲ್ಲಿವೆ!
ಇದೇ ವರ್ಷ ‘ಹನುಮಾನ್ ಅಂಶ್’ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು 16ನೇ ಶತಮಾನದ ಪ್ರಸಿದ್ಧ ಕವಿ ಹಾಗೂ ಸಂತ ಗೋಸ್ವಾಮಿ ತುಳಸಿದಾಸರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ‘ರಂಬೋಲಾ’ (Rambola) ಸಿನಿಮಾವನ್ನು ಘೋಷಿಸಿದ್ದರು.ಈ ಚಿತ್ರವನ್ನು ವಿಶಾಲ್ ಚತುರ್ವೇದಿ ಅವರೇ ನಿರ್ದೇಶಿಸಲಿದ್ದು, ಮಹಾವೀರ್ ಜೈನ್ ಫಿಲ್ಮ್ಸ್, ಅಮಿತ್ ಉಪಾಧ್ಯಾಯ್ ಮತ್ತು ರಘುವೇಂದ್ರ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ.