ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada New Movie: ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌; ಕಣ್ಮನ ಸೆಳೆದ ತಪಸ್ವಿನಿ ಪೂಣಚ್ಚ–ಶ್ರೀರಾಮ್ !

Kannada New Movie:ಪ್ರೀತಿಯಲ್ಲಿ ಬೀಳುವ ಸುಂದರ ಭಾವನೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಈ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನದಲ್ಲಿ ನಿನಾದ ನಾಯಕ್ ಮತ್ತು ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಾಯಕ ಶ್ರೀರಾಮ್ (ಸಂತೋಷ್) ಹಾಗೂ ನಟಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಜೋಡಿಯಾಗಿ ಕಣ್ಮನ ಸೆಳೆದಿದ್ದು, ತಪಸ್ವಿನಿ ಅವರ ಮುದ್ದಾದ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌

ಪ್ರೇಮದ ಊರಲಿ ಸಿನಿಮಾ -

Yashaswi Devadiga
Yashaswi Devadiga Aug 20, 2026 10:35 AM

‘ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಸ್ಯಾಂಡಲ್‌ವುಡ್‌ನಲ್ಲಿ (Sandalalwood) ಗಮನ ಸೆಳೆದಿದ್ದ ನಿರ್ದೇಶಕ ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪ್ರೇಮದ ಊರಲಿ’ (Premada Urali) ಚಿತ್ರದ ಟೈಟಲ್‌ ಟ್ರ್ಯಾಕ್‌ ಸೇರಿದಂತೆ ಎಲ್ಲಾ ಹಾಡುಗಳು ಈಗಾಗಲೇ ದೊಡ್ಡ ಹಿಟ್‌ ಆಗಿವೆ. ಇದೀಗ ಈ ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ.

"ಬಾನಲಿ ಜಾರಿದ..." ಎಂಬ ಈ ಸುಮಧುರ ಪ್ರಣಯ ಯುಗಳ ಗೀತೆಯಲ್ಲಿ ನಾಯಕ ಶ್ರೀರಾಮ್ (ಸಂತೋಷ್) ಹಾಗೂ ನಟಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಜೋಡಿಯಾಗಿ ಕಣ್ಮನ ಸೆಳೆದಿದ್ದು, ತಪಸ್ವಿನಿ ಅವರ ಮುದ್ದಾದ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ

ಪ್ರೀತಿಯಲ್ಲಿ ಬೀಳುವ ಸುಂದರ ಭಾವನೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಈ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನದಲ್ಲಿ ನಿನಾದ ನಾಯಕ್ ಮತ್ತು ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ: Kurmaavatar Title: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

ಈ ಮುಂಚೆ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, "ರಂಗಾಯಣ ರಘು ಸರ್ ಈ ಸಿನಿಮಾಗೆ ಹಾಗೂ ನನಗೆ ಬೆಳಕು. ಅವರ ಅಭಿನಯದ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ಅವರು ಒಂದು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಾಸನದ ಸದಾ ಮಳೆ ಬರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಹೀರೋ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ನಾಯಕಿರು ಅದ್ಭುತವಾಗಿ ನಟಿಸಿದ್ದಾರೆ. ನನಗೆ ಈ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು.



ಚಿತ್ರಕ್ಕೆ ಏನು ಬೇಕೋ ಎಲ್ಲವನ್ನೂ ನೀಡಿದ್ದಾರೆ. ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. 'ಪ್ರೇಮದ ಊರಲಿ' ಸಿನಿಮಾ ಮ್ಯೂಸಿಕಲ್ ಲವ್ ಸ್ಟೋರಿ. ಚಿತ್ರದ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಟೀಸರ್ ನೋಡಿದ್ರೆ ಗೊತ್ತಾಗುತ್ತದೆ. ಇದು‌ ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ಸಾವಿರ ಮನೆ, ನೂರು ಮನೆ ಇರಬೇಕು ಎಂಬುದು‌ ಇಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ನಮಗೆ ದೊಡ್ಡ ಊರು. ಅದೇ ಪ್ರೇಮದ‌ ಊರಲಿ" ಎಂದು‌ ಹೇಳಿದ್ದರು.

ಚಿತ್ರದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ಅವರಿಗೆ ನಾಯಕಿಯರಾಗಿ ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಸಾಥ್ ನೀಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರು ನಾಯಕನ ತಂದೆಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್‌ !

ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಮತಾ ದೇವೇಂದ್ರ ಎಂ, ಪ್ರಶಾಂತ ಡಿ.ಎಸ್ ಮತ್ತು ರಮೇಶ ಎನ್ ಈ ಚಿತ್ರವನ್ನು ನಿರ್ಮಿಸಿದ್ದು, ರಾಜಕಾಂತ್ ಎಸ್.ಕೆ ಅವರ ಛಾಯಾಗ್ರಹಣ ಮತ್ತು ಹರ್ಷಿತ್ ಪ್ರಭು ಅವರ ಸಂಕಲನವಿರುವ ಈ ಸಿನಿಮಾ ಸದ್ಯದಲ್ಲೇ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.