ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್‌ !

Bigg Boss Kannada 13: ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆ (Agniparikshe) ಶುರು ಆಗಿದೆ. ಅಗ್ನಿಪರೀಕ್ಷೆ ಅಲ್ಲಿ 60 ಜನ ಬಂದಿದ್ದರು. ಇವರಿಗೆ ಇಲ್ಲಿ ಟಫ್ ಟಾಸ್ಕ್‌ಗಳನ್ನೆ ಕೊಟ್ಟಿದ್ದಾರೆ. ಇದನ್ನ ಸ್ವೀಕರಿಸದೇ ಸ್ಟೇಜ್ ಬಿಟ್ಟು ಹೋಗಿರೋರು ಇದ್ದಾರೆ. ಇದೀಗ ಲಿಖಿತ್‌ ಗೊಂಡಿ, ರಾಜೀವ್‌ ಗೊಂಡಿ, ಪ್ರಿಯಾಂಕ , ದೀಪಕ್‌ ರಾಜ್‌ ಸೆಲೆಕ್ಟ್‌ ಆಗಿದ್ದಾರೆ. ಮುಂದಿನ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ತೀರ್ಪುಗಾರರೇ ಕಣ್ಣೀರಿಟ್ಟಿದ್ದಾರೆ.

ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್‌ !

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 20, 2026 9:37 AM

ಬಿಗ್ ಬಾಸ್ ಸೀಸನ್-13 (Bigg Boss Season-13) ರ ಅಗ್ನಿಪರೀಕ್ಷೆ (Agniparikshe) ಶುರು ಆಗಿದೆ. ಅಗ್ನಿಪರೀಕ್ಷೆ ಅಲ್ಲಿ 60 ಜನ ಬಂದಿದ್ದರು. ಇವರಿಗೆ ಇಲ್ಲಿ ಟಫ್ ಟಾಸ್ಕ್‌ಗಳನ್ನೆ ಕೊಟ್ಟಿದ್ದಾರೆ. ಇದನ್ನ ಸ್ವೀಕರಿಸದೇ ಸ್ಟೇಜ್ ಬಿಟ್ಟು ಹೋಗಿರೋರು ಇದ್ದಾರೆ. ಇದೀಗ ಲಿಖಿತ್‌ ಗೊಂಡಿ, ರಾಜೀವ್‌ ಗೊಂಡಿ, ಪ್ರಿಯಾಂಕ , ದೀಪಕ್‌ ರಾಜ್‌ ಸೆಲೆಕ್ಟ್‌ ಆಗಿದ್ದಾರೆ. ಮುಂದಿನ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ (new Promo) ಔಟ್‌ ಆಗಿದೆ. ತೀರ್ಪುಗಾರರೇ ಕಣ್ಣೀರಿಟ್ಟಿದ್ದಾರೆ.

ತರೇಹವಾರಿ ಟಾಸ್ಕ್‌

ಹೌದು ಬಿಗ್‌ ಬಾಸ್‌ ಅಗ್ನಿ ಪರೀಕ್ಷೆಯಲ್ಲಿ ತರೇಹವಾರಿ ಟಾಸ್ಕ್‌ಗಳನ್ನು ನೀಡಿ ಆಡಿಸಲಾಗುತ್ತಿದೆ. ಅದರಲ್ಲಿ ಈಗ ಫೋನ್‌ನಲ್ಲಿ ತಮ್ಮ ಮನಸಿನಲ್ಲಿರೋ ಬೇಸರವನ್ನು ಆಚೆ ಹಾಕಬೇಕಿತ್ತು. ಒಬ್ಬ ಸ್ಪರ್ಧಿ ತಂದೆಯ ಕುರಿತು ಮಾತನಾಡಿ ಎಲ್ಲರನ್ನೂ ಭಾವುಕರನ್ನಾಗಿಸಿದರು.

ಇದನ್ನೂ ಓದಿ: Vishnuvardhan: ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

ಅಪ್ಪ ನೀವು ಇದ್ದೂ ಕೂಡ ಅಮ್ಮ ಸಿಂಗಲ್‌ ಪೇರೆಂಟ್‌ ಆಗಿ ನೋಡಿಕೊಂಡಳು. ನನ್ನತ್ರ ನಗಾಡಿಕೊಂಡು ಮಾತನಾಡಿದ್ದು ನನಗೆ ನೆನಪೇ ಇಲ್ಲ. ನನಗೆ ಎಮೋಷನ್ಸ್‌ ಇಲ್ಲದ ಹಾಗೇ ಮಾಡಿಬಿಟ್ಟೆ ನೀನು ಅಪ್ಪ. ಬೇರೆಯವರಿಗಾದರೂ ಎಮೋಷನ್ಸ್‌ ಅಂದರೆ ಏನು ಅನ್ನೋದು ಹೇಳಿಕೊಡು. ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಎಂದಿದ್ದಾರೆ.

ತೀರ್ಪುಗಾರರು ಸೇರಿದಂತೆ ಅಲ್ಲಿ ಇದ್ದ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ. ಸದ್ಯ ಕಿರುತೆರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಲು 'ಅಗ್ನಿಪರೀಕ್ಷೆ' ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಅಗ್ನಿಪರೀಕ್ಷೆ ಸಂಚಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಈ ಅಗ್ನಿಪರೀಕ್ಷೆ ಮುಗಿದ ಬೆನ್ನಲ್ಲೇ, ಅಂದರೆ ಮುಂದಿನ ತಿಂಗಳು ಬಿಗ್ ಬಾಸ್ ಸೀಸನ್-13 ಅದ್ಧೂರಿಯಾಗಿ ಲಾಂಚ್ ಆಗಲಿದೆ. ದಿನಾಂಕ ಇನ್ನೂ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ, ಅಕ್ಟೋಬರ್ ಮೊದಲ ವಾರದಲ್ಲೇ ಶೋ ಶುರುವಾಗಬಹುದು ಎನ್ನಲಾಗುತ್ತಿದೆ. ಇನ್ನೂ ಮೊದಲ ಸಂಚಿಕೆಯಲ್ಲಿ ಜಿ.ಕೆ. ಪೂರ್ಣಿಮಾ, ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್ ಮಂಜು ಭಾಗವಹಿಸಿದ್ದರು.

ಇದನ್ನೂ ಓದಿ: Kurmaavatar Title: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

“30 ಸೆಕೆಂಡ್ ಟೈಯರ್ ಎತ್ತುವ ಸವಾಲನ್ನು 45 ಸೆಕೆಂಡ್ ನಿರ್ವಹಿಸಿ, ನಟನಾ ಟಾಸ್ಕ್‌ನಲ್ಲಿ ನಾಲ್ಕೂ ಜ್ಯೂರಿಗಳ ಮನಗೆದ್ದ ಮಂಡ್ಯದ KSRTC ಮೆಕ್ಯಾನಿಕ್ ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’ ಆಗಿ ಹೊರಹೊಮ್ಮಿದ್ದರು.