Kannada Serial: ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್, ಧ್ರುವಂತ್!
Kannada Serial: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಧನುಷ್ ಗೌಡ ಮತ್ತು ಧ್ರುವಂತ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಇಬರಿಬ್ಬರಿಗೆ ತಮ್ಮದೇ ಆದ ಫ್ಯಾನ್ಸ್ ವರ್ಗವಿದೆ. ಕಿರುತೆರೆ ಯಾವಾಗ ಕಮ್‌ಬ್ಯಾಕ್ ಮಾಡ್ತಾರೆ ಅಂತ ಅವರ ಫ್ಯಾನ್ಸ್ ತುದಿಗಾಲಲ್ಲಿ ಕಾಯ್ತಾ ಇದ್ದರು. ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.
ಧನುಷ್-ಧ್ರುವಂತ್ -
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಧನುಷ್ ಗೌಡ (Dhanush Gowda) ಮತ್ತು ಧ್ರುವಂತ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಇಬರಿಬ್ಬರಿಗೆ ತಮ್ಮದೇ ಆದ ಫ್ಯಾನ್ಸ್ ವರ್ಗವಿದೆ. ಕಿರುತೆರೆ ಯಾವಾಗ ಕಮ್‌ಬ್ಯಾಕ್ ಮಾಡ್ತಾರೆ ಅಂತ ಅವರ ಫ್ಯಾನ್ಸ್ ತುದಿಗಾಲಲ್ಲಿ ಕಾಯ್ತಾ ಇದ್ದರು. ಧ್ರುವಂತ್ (Dhruvanth) ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ (Serial) ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.
ಧನುಷ್ ಗೌಡ ಗೀತಾ ಧಾರಾವಾಹಿಯಲ್ಲಿ ಅಹಂಕಾರಿ ನಾಯಕ ವಿಜಯ್ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ಧನುಷ್ ಗೌಡ. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಇದು ಮುಗಿಯುತ್ತಿದ್ದಂತೆ, ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಧನುಷ್ ನಟಿಸಿದ್ದರು. ಬಳಿಕ ಆ ಧಾರಾವಾಹಿಯಿಂದ ಅರ್ಧದಲ್ಲಿ ಹೊರ ಬಂದಿದ್ದರು. ಬೆಂಗಳೂರಿನವರಾದ ಇವರು, ನಾಗತಿಹಳ್ಳಿ ಚಂದ್ರಶೇಖರ್ ಅವರ 'ಟೆಂಟ್' ಸಿನಿಮಾದಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ: Actress Simran: ಬಾಲಿವುಡ್ ಸೌತ್ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್
ಧನುಷ್ ಗೌಡ ನಾಯಕನಾಗಿ ಶೀಘ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ಯಾವ ವಾಹಿನಿಯ ಮೂಲಕ ಮತ್ತೆ ಬರುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲ. ಜಗಧಾತ್ರಿ ಧಾರಾವಾಹಿ ಇರಬಹುದು ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಆದರೆ ವಾಹಿನಿ ಆಗಲಿ ನಟ ಆಗಲಿ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಚರಿತ್ ಬಾಳಪ್ಪ, ಧ್ರುವಂತ್, ಮುದ್ದು ಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸಿದ್ದರು. ಧ್ರುವಂತ್ ಪಾತ್ರ ಜನಪ್ರಿಯತೆ ಪಡೆದು, ಅದೇ ಹೆಸರನ್ನು ಧ್ರುವಂತ್ ಆಗಿ ಬದಲಾಯಿಸಿದರು. ಬಳಿಕ ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದರು.
ಶಮಂತ್ ಬ್ರೋ ಗೌಡ ಹಾಗೂ ವರ್ಷಿಣಿ ಗೌಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಧ್ರುವಂತ್ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್ ಮಾಕ್ಟೇಲ್ 3’
ವರದಿಗಳ ಪ್ರಕಾರ ಪೊಲೀಸ್ ಪಾತ್ರ ಮಾಡಿದ್ದಾರೆ. ಇದೊಂದು ಅತಿಥಿ ಪಾತ್ರ. ಪೂರ್ಣ ಪ್ರಮಾಣದಲ್ಲಿ ಧಾರಾವಾಹಿಗೆ ಬಣ್ಣ ಹಚ್ಚಿಲ್ಲ. ಆದರೆ, ವಿಶೇಷವಾಗಿ ಧಾರಾವಾಹಿಯಲ್ಲಿ ಕೆಲ ಸಂಚಿಕೆಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ ನಟ ಕಿಚ್ಚ ಸುದೀಪ್ ಅವರು ಅಭಿನಯಿಸಿದ ಕೆಂಪೇಗೌಡ ಸಿನಿಮಾ ಸೂಪರ್ ಹಿಟ್. ಇದರಲ್ಲಿ ಪೊಲೀಸ್ ಪಾತ್ರದಲ್ಲಿ ಕಿಚ್ಚ ಕಿಚ್ಚು ಹಚ್ಚಿದ್ದರು..