ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka Rathna award: ಡಾ. ವಿಷ್ಣುವರ್ಧನ್‌ - ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ; ನವೆಂಬರ್‌ 19ಕ್ಕೆ ಅದ್ಧೂರಿ ಸಮಾರಂಭ, ಅತಿಥಿಯಾಗಿ ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಆಗಮಿಸುವ ಸಾಧ್ಯತೆ!

Karnataka Rathna award: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2026ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿದೆ.ಇನ್ನು ಕನ್ನಡ ಚಿತ್ರರಂಗದ ನಟ ವಿಷ್ಣುವರ್ಧನ್ ಮತ್ತು ನಟಿ ಬಿ ಸರೋಜಾ ದೇವಿ (B Sarojadevi) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕಳೆದ ವರ್ಷವೇ ಘೋಷಣೆ ಮಾಡಿದೆ.

ವಿಷ್ಣುವರ್ಧನ್‌-ಸರೋಜಾದೇವಿಗೆ ಕರ್ನಾಟಕ ರತ್ನ;ರಜನಿಕಾಂತ್‌ ಆಗಮಿಸುವ ಸಾಧ್ಯತೆ

ವಿಷ್ಣುವರ್ಧನ್ -

Yashaswi Devadiga
Yashaswi Devadiga Oct 30, 2026 7:23 PM

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ (Rajyotsava award) ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2026ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿದೆ.ಇನ್ನು ಕನ್ನಡ ಚಿತ್ರರಂಗದ ನಟ ವಿಷ್ಣುವರ್ಧನ್ (Vishnuvardhan) ಮತ್ತು ನಟಿ ಬಿ ಸರೋಜಾ ದೇವಿ (B Sarojadevi) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕಳೆದ ವರ್ಷವೇ ಘೋಷಣೆ ಮಾಡಿದೆ. ನವೆಂಬರ್ 19ರಂದು ಇಬ್ಬರು ಕಲಾವಿದರ ಪರವಾಗಿ ಅವರ ಕುಟುಂಬದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ರಜನೀಕಾಂತ್ ಅತಿಥಿ

ರಜನೀಕಾಂತ್ ಅವರನ್ನು ಅತಿಥಿಯಾಗಿ ಆಹ್ವಾನಿಸುವ ಬಗ್ಗೆಯೂ ಶಿವರಾಜ್ ತಂಗಡಗಿ ಹೇಳಿದ್ದಾರೆ. ತಮಿಳು ರಂಗದ ನಂಬರ್‌ 1 ನಟ, ಹಾಗೇ ಕನ್ನಡಿಗರೇ ಇರೋದರಿಂದ ಅವರನ್ನ ಕರೆಸಬೇಕು ಅಂತ ನಿರ್ಧಾರ ಮಾಡ್ತಾ ಇದ್ದೀನಿ, ಇನ್ನು ಮಹಿಳೆಯರಲ್ಲಿ ಲಕ್ಷ್ಮೀ ಹಾಗು ಸುಹಾಸಿನಿ ಅವರಲ್ಲಿ ಒಬ್ಬರನ್ನ ಆಯ್ಕೆ ಮಾಡಬೇಕು ಅಂದುಕೊಂಡಿದ್ದೇವೆ. ವಿಷ್ಣುವರ್ಧನ್ ಅವರೊಂದಿಗೆ ಇವೆರಲ್ಲ ಸಿನಿಮಾ ಮಾಡಿದ ಕಾರಣ ಕರೆಸಬೇಕು ಅಂತ ಪ್ರಯತ್ನ ಮಾಡುತ್ತಿದ್ದೆವೆ ಎಂದು ಮಾಧ್ಯಮದ ಮುಂದೆ ಹಂಚಿಕೊಂಡರು.

ಇದನ್ನೂ ಓದಿ: Bigg Boss Kannada 13: ಈ ವಾರ ಇವರಿಗೆ ಕಿಚ್ಚನ ಚಪ್ಪಾಳೆ ಆದ್ರೆ, ಈ ಸೀಸನ್‌ ವಿನ್ನರ್‌ ಯಾರು? ವೀಕ್ಷಕರು ಹೇಳೋದೇನು?

ಈ ಬಾರಿಯೂ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಗಣ್ಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಡುವೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಹ್ವಾನಿಸಲಾಗಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Eetha trailer out: ಶ್ರದ್ಧಾ ಕಪೂರ್ ‘ಈಥಾ’ ಚಿತ್ರದ ಟ್ರೇಲರ್ ಬಿಡುಗಡೆ

ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರೂ ಕರ್ನಾಟಕದೊಂದಿಗಿನ ತಮ್ಮ ನಂಟನ್ನು ಹಲವು ಸಂದರ್ಭಗಳಲ್ಲಿ ಸ್ಮರಿಸಿದ್ದಾರೆ. ಕನ್ನಡಿಗರಿಗೂ ಅವರ ಮೇಲೆ ವಿಶೇಷ ಅಭಿಮಾನವಿದೆ.