ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Land Lord Movie: ಕಿರುತೆರೆಗೆ ಬಂತು 'ಲ್ಯಾಂಡ್‌ಲಾರ್ಡ್; ದುನಿಯಾ ವಿಜಯ್‌, ರಚಿತಾ ರಾಮ್‌ ಸಿನಿಮಾ ಪ್ರಸಾರ ಯಾವಾಗಿನಿಂದ?

Land Lord Movie: ಈ ಸಿನಿಮಾದಲ್ಲಿ ಉಮಾಶ್ರೀ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೂರಜ್ ಗೌಡ ಹಾಗೂ ಸತ್ಯ ಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದರು. ವಿಜಯ್, ರಚಿತಾ ರಾಮ್, ಉಮಾಶ್ರೀ, ರಾಜ್ ಬಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಊಳಿಗಮಾನ್ಯ ಪದ್ಧತಿ, ಕೆಳವರ್ಗದ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ರೀತಿಯ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿತ್ತು

ಕಿರುತೆರೆಗೆ ಬಂತು 'ಲ್ಯಾಂಡ್‌ಲಾರ್ಡ್;  ಪ್ರಸಾರ ಯಾವಾಗಿನಿಂದ?

ದುನಿಯಾ ವಿಜಯ್‌ -

Yashaswi Devadiga
Yashaswi Devadiga May 22, 2026 1:35 PM

ನಟ ದುನಿಯಾ ವಿಜಯ್‌ (Duniya Vijay) ಅಭಿನಯದ "ಲ್ಯಾಂಡ್ ಲಾರ್ಡ್" (Lanlord Movie) ಸಿನಿಮಾ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದೆ. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ವಿಜಯ್ ಜೊತೆಗೆ ರಚಿತಾ ರಾಮ್ (Rachita Ram) ನಾಯಕಿಯಾಗಿ ನಟಿಸಿದ್ದರು. ರಾಜ್‌. ಬಿ ಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದರು. ಇನ್ನು ವಿಜಯ್ ಪುತ್ರಿ ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು.

ಜೀ಼ ಕನ್ನಡ ವಾಹಿನಿ ಮತ್ತೊಮ್ಮೆ ತನ್ನ ಪ್ರೇಕ್ಷಕರಿಗೆ ಅದ್ಬುತ ಅನುಭವ ನೀಡಲು ಸಜ್ಜಾಗಿದ್ದು, ಇದೇ ಶನಿವಾರ ಸಂಜೆ 4 ಗಂಟೆಗೆ ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನೆಮಾ ಪ್ರಸಾರ ಕಾಣುತ್ತಿದೆ.ʼ

ಇದನ್ನೂ ಓದಿ: Amruthadhaare Serial: ಮಿಂಚು ಸುಳಿವು ಕೇಡಿ ಜೆಡಿಗೆ ಸಿಕ್ಕೇ ಬಿಡುತ್ತಾ? ಶಕುನಿ ಮಾಮ ಕಿಡ್ನಾಪ್‌!

ನಟನೆಗೆ ಭಾರೀ ಮೆಚ್ಚುಗೆ

ಉಮಾಶ್ರೀ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೂರಜ್ ಗೌಡ ಹಾಗೂ ಸತ್ಯ ಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದರು. ವಿಜಯ್, ರಚಿತಾ ರಾಮ್, ಉಮಾಶ್ರೀ, ರಾಜ್ ಬಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಊಳಿಗಮಾನ್ಯ ಪದ್ಧತಿ, ಕೆಳವರ್ಗದ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ರೀತಿಯ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿತ್ತು. ನಾಯಕಿ ಪಾತ್ರದಲ್ಲಿ ನಟಿಸಿದ್ದ ರಚಿತಾ ರಾಮ್ ಸಹ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದು ವಿಶೇಷವಾಗಿತ್ತು.

ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ಸಿರೀಶ್ ಬೈಕಾಡಿ ಸಹ ಈ ಸಿನಿಮಾನಲ್ಲಿ ನಟಿಸಿದ್ದರು. ಸಮಾಜದಲ್ಲಿನ ಜಾತಿ ತಾರತಮ್ಯ, ಅಸಮಾನತೆ ಮತ್ತು ಬಡವರ ಮೇಲಿನ ಸಿರಿವಂತರ ದಬ್ಬಾಳಿಕೆಯನ್ನು ಈ ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. ಸಾಮಾನ್ಯ ಜನರು ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಟ ಮಾಡಿದಾಗ ಏನಾಗುತ್ತದೆ ಎಂಬುದೇ ಕಥೆ.

ಇದನ್ನೂ ಓದಿ: Drishyam 3: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ; ‘ದೃಶ್ಯಂ 3’ ಕಲೆಕ್ಷನ್‌ ಏನು?

ದುನಿಯಾ ವಿಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’, ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿ, ವಿಜಯ್ ಸೇತುಪತಿ ನಟಿಸುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾ, ಅವರದ್ದೇ ನಿರ್ದೇಶನದ ‘ಸಿಟಿಲೈಟ್ಸ್’, ಸೂರಿ ನಿರ್ದೇಶನದ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.