Bigg Boss Kannada 12: ಮಕ್ಕಳಿಗೂ ಮಾಳು ಸ್ಟೈಲ್ನಲ್ಲೇ ಹೇರ್ಸ್ಟೈಲ್! ಫ್ಯಾಮಿಲಿ ಸರ್ಪ್ರೈಸ್‌ಗೆ ಕಣ್ಣೀರಾದ ರಘು
Raghu: ಬಿಗ್ ಬಾಸ್ ಮನೆಯಲ್ಲೀಗ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಅದರಲ್ಲೂ ಗಿಲ್ಲಿಗಂತೂ ಮನೆಯ ಯಾವುದೇ ಸದಸ್ಯರ ಮನೆಯವರು ಬಂದರೂ ಇಷ್ಟ ಎನ್ನುತ್ತಿದ್ದಾರೆ. ಈಗಾಗಲೇ ಗಿಲ್ಲಿ, ಕಾವ್ಯ, ರಕ್ಷಿತಾ, ಧನುಷ್, ಸೂರಜ್, ರಾಶಿಕಾ ಮನೆಯವರು ಬಂದು ಹೋಗಿದ್ದಾರೆ. ಇದೀಗ ಮಾಳು, ಹಾಗೂ ರಘು ಸರದಿ. ವಿಶೇಷ ಅಂದರೆ ಮಾಳು ಮಕ್ಕಳು ಅಪ್ಪನ ರೀತಿಯೇ ಹೇರ್‌ಸೈಟಲ್ ಮಾಡಿಸಿಕೊಂಡು ಕ್ಯೂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಕಡೆ ರಘು ಅವರ ಫ್ಯಾಮಿಲಿ ಸರ್‌ಪ್ರೈಸ್ ಆಗಿ ಎಂಟ್ರಿ ಕೊಟ್ಟಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲೀಗ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಅದರಲ್ಲೂ ಗಿಲ್ಲಿಗಂತೂ ಮನೆಯ ಯಾವುದೇ ಸದಸ್ಯರ ಮನೆಯವರು ಬಂದರೂ ಇಷ್ಟ ಎನ್ನುತ್ತಿದ್ದಾರೆ. ಈಗಾಗಲೇ ಗಿಲ್ಲಿ, ಕಾವ್ಯ, ರಕ್ಷಿತಾ, ಧನುಷ್, ಸೂರಜ್, ರಾಶಿಕಾ ಮನೆಯವರು ಬಂದು ಹೋಗಿದ್ದಾರೆ. ಇದೀಗ ಮಾಳು, ಹಾಗೂ ರಘು ಸರದಿ. ವಿಶೇಷ ಅಂದರೆ ಮಾಳು ಮಕ್ಕಳು (malu nipanal Family) ಅಪ್ಪನ ರೀತಿಯೇ ಹೇರ್‌ಸೈಟಲ್ ಮಾಡಿಸಿಕೊಂಡು ಕ್ಯೂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಕಡೆ ರಘು (mutant raghu Family) ಅವರ ಫ್ಯಾಮಿಲಿ ಸರ್‌ಪ್ರೈಸ್ ಆಗಿ ಎಂಟ್ರಿ ಕೊಟ್ಟಿದೆ.
ಮಾಳು ಪತ್ನಿ ಭಾವುಕ
ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಚಾಲೆಂಜ್ ವೇಳೆ ಮಾಳುಗೆ ಭಿನ್ನ ಹೇರ್ಸ್ಟೈಲ್ ಮಾಡಲಾಗಿದೆ. ತಲೆಯ ಮಧ್ಯದಲ್ಲಿ ಮಾತ್ರ ಕೂದಲನ್ನು ಇಡಲಾಗಿದೆ. ಈಗ ಮಾಳು ಮಕ್ಕಳಿಗೂ ಅದೇ ರೀತಿಯ ಹೇರ್ಸ್ಟೈಲ್ ಮಾಡಲಾಗಿದೆ. ಇನ್ನು ಮಾಳು ಅವರ ಪತ್ನಿ ಕೂಡ ಭಾವುಕರಾಗಿದ್ದಾರೆ. ಹಿತಲಕ ಕರಿಬೇಡ ಮಾವ ಅಂತ ಪತಿ ಜೊತೆ ಹಾಡಿದ್ದಾರೆ. ಗಿಲ್ಲಿ ಸೇರಿದಂತೆ ಮನೆಯ ಉಳಿದ ಸದಸ್ಯರು ಮಕ್ಕಳನ್ನು ಮುದ್ದಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಗಿಲ್ಲಿ! ಕಾವು ಉತ್ತರ ಏನು?
ರಘು ಪತ್ನಿ ಬರ್ತ್‌ಡೇ
ರಘು ಅವರ ಪತ್ನಿ ಬರ್ತ್‌ಡೇ ಇದ್ದ ಕಾರಣ , ಕೇಕ್ ಕಟ್ ಮಾಡಿಸಿದ್ದಾರೆ ಬಿಗ್ ಬಾಸ್. ಅಷ್ಟೇ ಅಲ್ಲ ಫ್ಯಾಮಿಲಿ ಕಂಡು ರಘು ಅವರು ಭಾವುಕರಾಗಿದ್ದಾರೆ. ಇದು ನನ್ನ ಮರೆಯಲಾರದ ಬರ್ತ್‌ಡೇ ಅಂತ ಬಿಗ್ ಬಾಸ್‌ಗೆ ಧನ್ಯವಾದ ಹೇಳಿದ್ರು ರಘು.
ಒಟ್ಟಾರೆಯಾಗಿ ಈ ವಾರ ತಮ್ಮ ಮನೆಯವರನ್ನು ನೋಡಿ ಕಣ್ತುಂಬಿಸಿಕೊಂಡಿದ್ದಾರೆ ಸ್ಪರ್ಧಿಗಳು. ವೀಕ್ಷಕರು ಕೂಡ ಫುಲ್ ಖುಷ್ ಆಗಿದ್ದಾರೆ. ಇದರ ಜೊತೆಗೆ ಒಂದು ಟಾಸ್ಕ್ ಕೂಡ ಬಿಗ್ ಬಾಸ್ ನೀಡಿದೆ. ಮನೆಯ ಮುಂದಿನ ಕ್ಯಾಪ್ಟನ್ ಯಾರಾಗಬೇಕು ಎಂಬ ನಿರ್ಧಾರ ಕೂಡ ಈ ಕುಟುಂಬ ಸದಸ್ಯರ ಆಯ್ಕೆಯ ಮೇಲಿದೆ.
ಹಾಗಾಗಿ, ಬಹುತೇಕ ಆಯ್ಕೆ ಗಿಲ್ಲಿ ನಟ ಅವರೇ ಆಗಿದ್ದಾರೆ.ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿಯನ್ನ ಸೆಲೆಕ್ಟ್ ಮಾಡಿ, "ಗಿಲ್ಲಿ ಈ ಮನೆಯ ಕ್ಯಾಪ್ಟನ್ ಆಗಿ ಏನೆಲ್ಲಾ ಕೆಲಸ ಮಾಡಿಸುತ್ತಾನೆ? ಹೇಗೆಲ್ಲಾ ಮ್ಯಾನೇಜ್ ಮಾಡುತ್ತಾನೆ ಎಂಬುದನ್ನು ನೋಡಬೇಕು, ಅದಕ್ಕಾಗಿ ಗಿಲ್ಲಿಯನ್ನು ಸೆಲೆಕ್ಟ್ ಮಾಡುತ್ತೇನೆ" ಎಂದಿದ್ದಾರೆ.
ಗಿಲ್ಲಿ ಕ್ಯಾಪ್ಟನ್?
ಇನ್ನು ಮಾಳು ಅವರ ಪತ್ನಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. , ರಕ್ಷಿತಾ ಅವರ ತಾಯಿ ಕೂಡ ಗಿಲ್ಲಿಗೆ ತಮ್ಮ ಮತವನ್ನು ಹಾಕಿದ್ದಾರೆ. ಧನುಷ್ ತಾಯಿ ವೋಟ್ ಕೂಡ ಗಿಲ್ಲಿಗೆ ಸಿಕ್ಕಿದೆ. "ನನಗೆ ಅಶ್ವಿನಿ ಗೌಡ ಕೂಡ ಇಷ್ಟ. ಆದರೆ, ಗಿಲ್ಲಿ ಸ್ವಲ್ಪ ಜಾಸ್ತಿನೇ ಇಷ್ಟ. ಅವರ ಕಾಮಿಡಿ ನನಗೆ ತುಂಬಾ ಇಷ್ಟ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್ ಹೊಸ ತಂತ್ರ? ಸೂರಜ್ ಆರೋಪ
ಗಿಲ್ಲಿ ಕ್ಯಾಪ್ಟನ್ ಆಗಲಿ” ಎಂದಿದ್ದಾರೆ ಧನುಷ್ ತಾಯಿ.ಧ್ರುವಂತ್ ಅವರ ಕುಟುಂಬದವರು ಕೂಡ ಗಿಲ್ಲಿ ಫೋಟೋವನ್ನ ಆಯ್ಕೆ ಮಾಡಿ, ಬೋರ್ಡ್‌ನಲ್ಲಿ ಇರಿಸಿದ್ದಾರೆ. ಇಲ್ಲಿ ಹೆಚ್ಚು ಗಿಲ್ಲಿ ಅವರ ಫೋಟೋಗಳೇ ಇರುವುದರಿಂದ, ಅವರೇ ಕ್ಯಾಪ್ಟನ್ ಆಗುವ ಸಾಧ್ಯತೆ ಇದೆ.