Nandamuri Balakrishna: ಜೈಲರ್ -2 ಚಿತ್ರಕ್ಕೆ ಬರೋಬ್ಬರಿ 50 ಕೋಟಿ ರೂ. ಸಂಭಾವನೆ ಕೇಳಿದ ನಟ ಬಾಲಯ್ಯ
2023ರಲ್ಲಿ ಸೂಪರ್ ಹಿಟ್ ಆಗಿದ್ದ ರಜಿನಿಕಾಂತ್ ʼಜೈಲರ್ʼ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದರ ಸೀಕ್ವೆಲ್ ಬರುತ್ತಿರುವುದನ್ನು ಕಂಡು ಅಭಿಮಾನಿಗಳು ಬಹಳಷ್ಟು ಥ್ರಿಲ್ ಆಗಿದ್ದರು. ಇದೀಗ ಜೈಲರ್ -2ʼ ಶೂಟಿಂಗ್ ಗಾಗಿ ಸಿದ್ದತೆ ನಡೆಯುತ್ತಿದ್ದು ಹೈ ಬಜೆಟ್ ಮೂಲಕ ಜೈಲರ್ 2 ಚಿತ್ರ ಮೂಡಿ ಬರಲಿದೆ. ಜೈಲರ್ -2ನಲ್ಲೂ ಮಲ್ಟಿ ಸ್ಟಾರ್ಸ್ ಇರಲಿದ್ದಾರೆ. ಅದರಂತೆ ಬಾಲಯ್ಯ ಅವರಿಗೆ ಈ ಜೈಲರ್ 2 ನಲ್ಲಿ ಆಫರ್ ನೀಡಲಾಗಿದೆ.ಇದಕ್ಕಾಗಿ ಬರೋಬ್ಬರಿ 20 ದಿನಗಳ ಕಾಲ ಚಿತ್ರದ ಶೂಟ್ಗೆ ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ ಬಾಲಯ್ಯ ತೆಗೆದು ಕೊಳ್ಳುತ್ತಿರುವುದು 50 ಕೋಟಿ ರೂಪಾಯಿ ಎನ್ನಲಾಗಿದೆ.


ನವದೆಹಲಿ: ನಂದಮೂರಿ ಬಾಲಕೃಷ್ಣ (Nandamuri Balakrishna) ಜೈಲರ್ - 2 ಚಿತ್ರ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಎರಡು ವರ್ಷಗಳ ಹಿಂದೆ ಬಿಡುಗಡೆ ಯಾಗಿದ್ದ 'ಜೈಲರ್' ಸಿನಿಮಾ ಅಭಿಮಾನಿಗಳ ಮನ ಗೆದ್ದಿತ್ತು. ಜೈಲರ್ 2 ಬಗ್ಗೆ ಈಗಾಗಲೇ ಹಲವು ಕುತೂಹಲಕರ ವಿಚಾರಗಳು ಸುದ್ದಿಯಾಗುತ್ತಿದ್ದು ನಟ ಬಾಲಯ್ಯ ಕೂಡ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಚರ್ಚೆ ಶುರುವಾಗಿತ್ತು. ಇದೀಗ ಅಧಿಕೃತವಾಗಿ ಈ ಚಿತ್ರದಲ್ಲಿ ನಟಿಸೋಕೆ ಬಾಲಕೃಷ್ಣ 50 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು ಇದಕ್ಕೆ ನಿರ್ಮಾಪಕರು ಒಪ್ಪಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ. ಬಾಲಯ್ಯ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದು ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ನಿಜವಾಗಿಯು ಪಡೆಯಲಿದ್ದರಾ?
2023ರಲ್ಲಿ ಸೂಪರ್ ಹಿಟ್ ಆಗಿದ್ದ ರಜಿನಿಕಾಂತ್ ಜೈಲರ್ʼ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದರ ಸೀಕ್ವೆಲ್ ಬರುತ್ತಿರುವು ದನ್ನು ಕಂಡು ಅಭಿಮಾನಿಗಳು ಬಹಳಷ್ಟು ಥ್ರಿಲ್ ಆಗಿದ್ದರು. ಇದೀಗ ಜೈಲರ್-2 ಶೂಟಿಂಗ್‌ಗಾಗಿ ಸಿದ್ದತೆ ನಡೆಯುತ್ತಿದ್ದು ಹೈ ಬಜೆಟ್ ಮೂಲಕ ಜೈಲರ್ 2 ʼ ಚಿತ್ರ ಮೂಡಿ ಬರಲಿದೆ. ಜೈಲರ್ -2ʼನಲ್ಲೂ ಮಲ್ಟಿ ಸ್ಟಾರ್ಸ್ ಇರಲಿದ್ದಾರೆ. ಅದರಂತೆ ಬಾಲಯ್ಯ ಅವರಿಗೆ ಈ ಜೈಲರ್ 2 ನಲ್ಲಿ ಆಫರ್ ನೀಡಲಾಗಿದೆ. ಇದಕ್ಕಾಗಿ ಬರೋಬ್ಬರಿ 20 ದಿನಗಳ ಕಾಲ ಚಿತ್ರದ ಶೂಟ್ಗೆ ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ ಬಾಲಯ್ಯ ತೆಗೆದುಕೊಳ್ಳುತ್ತಿರುವುದು 50 ಕೋಟಿ ರೂಪಾಯಿ ಎನ್ನಲಾಗಿದೆ.
ಜೈಲರ್ -2 ಬಗ್ಗೆ ಕಾಲಿವುಡ್‌ನಲ್ಲಿ ನಿರೀಕ್ಷೆ ದುಪ್ಪಟ್ಟು ಆಗಿದೆ. ಬಾಕ್ಸ್ ಆಫೀಸ್ನಲ್ಲಿ ರಜಿನಿಕಾಂತ್ ಮತ್ತೊಮ್ಮೆ ಮೋಡಿ ಮಾಡುವ ಮೂಲಕ ಅಭಿಮಾಮಿಗಳನ್ನು ಮನ ರಂಜಿಸಲಿದ್ದಾರೆ. ಇನ್ನು ʼಜೈಲರ್ -2ʼನಲ್ಲಿ ಟಾಲಿವುಡ್ ನಟ ಬಾಲಕೃಷ್ಣ ಇರಲಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲ ದಿನದಿಂದ ಕೇಳಿ ಬರುತ್ತಿದೆ.ಇನ್ನು ಚಿತ್ರದಲ್ಲಿ ಬಾಲಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಪಕ್ಕಾ ಆಗಿದೆ. ತನ್ನ ಪಾತ್ರಕ್ಕಾಗಿ ಬಾಲಯ್ಯ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆಯನ್ನು ಕೇಳಿದ್ದು ಬಾಲಯ್ಯ ಅವರ ದುಬಾರಿ ಸಂಭಾವನೆಯ ಮೊತ್ತಕ್ಕೆ ಸನ್ ಪಿಕ್ಚರ್ಸ್ ಒಪ್ಪಿದ್ದು, ಅದರಂತೆ, 20 ದಿನಗಳ ಶೂಟಿಂಗ್‌ಗೆ ಬಾಲಯ್ಯ ಅವರು 50 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: Pabbar Movie: ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ.. ಧೀರೆನ್-ಸಂದೀಪ್ ಸುಂಕದ್ ಚಿತ್ರಕ್ಕೆ 'ಪಬ್ಬಾರ್' ಟೈಟಲ್ ಫಿಕ್ಸ್;
‘ಜೈಲರ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಚಿತ್ರ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ವಸಂತ ರವಿ, ರಮ್ಯಕೃಷ್ಣ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ವಿನಾಯಕ್ ಮುಂತಾದವರು ನಟಿಸಿದ್ದರು. ಇದೀಗ ಎರಡನೇ ಭಾಗವನ್ನು ಇನ್ನಷ್ಟು ಅದ್ಧೂರಿ ಮಾಡಲು ನಿರ್ದೇಶಕರು ಯೋಜನೆ ಹಾಕಿ ಕೊಂಡಿದ್ದಾರೆ.ಜೈಲರ್’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿತ್ತು. ‘ಜೈಲರ್ 2’ ಸಿನಿಮಾವನ್ನೂ ಅವರೇ ನಿರ್ಮಿಸಲಿದ್ದು, ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ.