ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಈ ಇಬ್ಬರು ಸೀಕ್ರೆಟ್ ರೂಮ್‌ಗೆ ? ಎಲಿಮಿನೇಶನ್‌ ಕಥೆ ಏನು?

Sudeep: ವೀಕೆಂಡ್‌ ಬಂತು ಅಂದರೆ ವೀಕ್ಷಕರಲ್ಲಿ ಒಂದು ಸುದೀಪ್‌ ಪಂಚಾಯ್ತಿ ಬಗ್ಗೆ ಖುಷಿ ಇದ್ರೆ, ಇನ್ನೊಂದು ಯಾರು ಎಲಿಮಿನೇಟ್‌ ಆಗ್ತಾರೆ ಅನ್ನೋ ಕುತೂಹಲ ಇರತ್ತೆ. ಅದು ಅಲ್ಲದೇ ಈ ವಾರ ವೋಟಿಂಗ್‌ ಲೈನ್‌ ಕೂಡ ಓಪನ್‌ ಇರಲಿಲ್ಲ. ಹಿಗಾಗಿ ಈ ವಾರ ನೋ ಎಲಿಮಿನೇಶನ್‌ ಅನ್ನೋದು ಗೊತ್ತೇ ಇದೆ. ಆದರೂ ಒಂದು ಟ್ವಿಸ್ಟ್‌ ಇದೆ ಎನ್ನಲಾಗುತ್ತಿದೆ.

ಈ ಇಬ್ಬರು ಸೀಕ್ರೆಟ್ ರೂಮ್‌ಗೆ ? ಎಲಿಮಿನೇಶನ್‌ ಕಥೆ ಏನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 14, 2025 12:07 PM

ವೀಕೆಂಡ್‌ ಬಂತು ಅಂದರೆ ವೀಕ್ಷಕರಲ್ಲಿ ಒಂದು ಸುದೀಪ್‌ (Sudeep) ಪಂಚಾಯ್ತಿ ಬಗ್ಗೆ ಖುಷಿ ಇದ್ರೆ, ಇನ್ನೊಂದು ಯಾರು ಎಲಿಮಿನೇಟ್‌ ಆಗ್ತಾರೆ ಅನ್ನೋ ಕುತೂಹಲ ಇರತ್ತೆ. ಅದು ಅಲ್ಲದೇ ಈ ವಾರ ವೋಟಿಂಗ್‌ ಲೈನ್‌ (Voting Line) ಕೂಡ ಓಪನ್‌ ಇರಲಿಲ್ಲ. ಹಿಗಾಗಿ ಈ ವಾರ ನೋ ಎಲಿಮಿನೇಶನ್‌ (No Elimination) ಅನ್ನೋದು ಗೊತ್ತೇ ಇದೆ. ಆದರೂ ಒಂದು ಟ್ವಿಸ್ಟ್‌ ಇದೆ ಎನ್ನಲಾಗುತ್ತಿದೆ. ಅತಿಥಿಗಳಾಗಿ ಬಂದಿರುವ ರಜತ್ ಹಾಗೂ ಚೈತ್ರಾ (Rajath Chaithra) ಮನೆಯಿಂದ ನಿರ್ಗಮಿಸುತ್ತಾರೆ ಎಂದು ಭಾವಿಸುತ್ತಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಎಲ್ಲವೂ ಊಹಿಸಿದಂತೆ ನಡೆಯಲ್ಲ.

ಸೀಕ್ರೆಟ್ ರೂಮ್‌?

ಇಬ್ಬರನ್ನು ಎಲಿಮಿನೇಷನ್‌ ಎಂದು ಹೇಳಿ ಸೀಕ್ರೆಟ್ ರೂಮ್‌ಗೆ ಕಳುಹಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಧ್ರುವಂತ್ ಹಾಗೂ ರಕ್ಷಿತಾ ಆ ರೀತಿ ಸೀಕ್ರೆಟ್ ರೂಮ್‌ಗೆ ಹೋಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹೊರತಾಗಿ ಮತ್ತೇನೂ ಅಲ್ಲ.

ನಿನ್ನೆ ಪಂಚಾಯ್ತಿಯಲ್ಲಿ ಅಶ್ವಿನಿ ಹಾಗೂ ಗಿಲ್ಲಿ ಅವರನ್ನು ಕಿಚ್ಚ ಹೊಗಳಿದ್ದಾರೆ. ಸೀಕ್ರೆಟ್ ಟಾಸ್ಕ್‌ಗಳನ್ನು ಗಿಲ್ಲಿ ಹಾಗೂ ಅಶ್ವಿನಿ ಗೌಡ ಚೆನ್ನಾಗಿ ನಿಭಾಯಿಸಿದ್ದಾಗಿ ಸುದೀಪ್ ಮೆಚ್ಚುಗೆ ಸೂಚಿಸಿದರು. ಎಲಿಮಿನೇಷನ್ ವಿಚಾರಕ್ಕೆ ಬಂದರೆ ಶನಿವಾರ ಯಾರೊಬ್ಬರನ್ನು ಸುದೀಪ್ ಸೇವ್ ಮಾಡಲಿಲ್ಲ.



ಇಂದು ಹೊಸ ಪ್ರೋಮೊ ಔಟ್‌ ಆಗಿದೆ. ನಿಮ್ಮ ಪ್ರಕಾರ ಯಾರ ಪಾಪದ ಕೊಡ ತುಂಬಿದೆ? ಅಂತ ಸುದೀಪ್‌ ಪ್ರಶ್ನೆ ಇಟ್ಟರು. ಗಿಲ್ಲಿ ಅವರು ರಜತ್‌ಗೆ ಈ ಮಾತು ಹೇಳಿದರು. ಕಾರಣ ಕೊಟ್ಟಿದ್ದು ಹೀಗೆ. ಮಾತು ಮಾತಿಗೂ ಅರ್ಧ ಜನಕ್ಕೆ ಗೇಮ್‌ ಟಾಸ್ಕ್‌ ಬುಕ್‌ ಅರ್ಥ ಆಗಲ್ಲ ಅನ್ನೋದು ಅಂತಾರೆ ಎಂದಿದ್ದಾರೆ. ಅದಕ್ಕೆ ರಜತ್‌ ಅವರು ನಾನು ಲೆಕ್ಕ ಹಾಕೊಂಡಿಲ್ಲ. ಟಾಸ್ಕ್‌ ಆಡಿ ಗೆಲ್ಲಿರೋದು ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಅದಕ್ಕೆ ಗಿಲ್ಲಿ, ನಾನು 10 ಟಾಸ್ಕ್‌ನಲ್ಲಿ 8 ಟಾಸ್ಕ್‌ ಗೆದ್ದಿದ್ದೇನೆ. ಮೊದಲನೇ ಟಾಸ್ಕ್‌ನಲ್ಲಿ ಒಂದು ಬಾಲ್‌ ಹಾಕದೇ ಸೈಡ್‌ನಲ್ಲಿ ಕುಳಿತುಕೊಂಡಿದ್ರು ಎಂದಿದ್ದಾರೆ. ಆ ಬಳಿಕ ರಜತ್‌ ಇದ್ದವರು, ನಾನು ಇಲ್ಲಿ ಬಂದಿರೋದು ಸೋಲೋ ಆಗಿ. ಯಾರ್ಯಾರು ನಂಗೆ ಈ ಬಿರುದು ಕೊಟ್ಟಿದ್ದಾರೋ, ಮನೆಯಿಂದ ಆಚೆ ಕಳುಹಿಸಿಯೇ ನಾನು ಆಚೆ ಹೋಗೋದು ಎಂದರು.

ಗಿಲ್ಲಿ ಕೂಡ ಈ ಮಾತಿಗೆ, ನಾನು ಈಗ ಒಂದು ಮಾತು ಹೇಳ್ತೀನಿ. ರಜತ್‌ ಅವರನ್ನ ಮನೆಯಿಂದ ಕಳುಹಿಸಿಯೇ ನಾನು ಆಚೆ ಹೋಗೋದು ಎಂದಿದ್ದಾರೆ.