ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nora Fatehi: ʼಸರ್ಸೆʼ ಹಾಡಿನ ವಿರುದ್ಧ ಅಪಪ್ರಚಾರ ಮಾಡಲು ದುಡ್ಡು ಕೊಟ್ಟಿದ್ರಾ? ನೋರಾ ಫತೇಹಿ ಹೇಳಿದ್ದೇನು?

Nora Fatehi: ಈ ವರ್ಷ ನೋರಾ ಫತೇಹಿ ಸಾಕಷ್ಟು ಸುದ್ದಿಯಲ್ಲಿದ್ದರು. ʻಕೆಡಿ’ ಸಿನಿಮಾದ (KD Movie) ‘ಸರ್ಕೆ ಚುನಾರ್’ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಗಂಭೀರ ಆರೋಪ ಮಾಡಿದ್ದಾರೆ. ಇಡೀ ಹಾಡು ಬಿಡುಗಡೆಯಾಗುವ ಮುನ್ನವೇ ಕೇವಲ ಸಣ್ಣ ತುಣುಕುಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡಲಾಯಿತು’ ಎಂದು ನೋರಾ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಸೆ ಹಾಡಿನ ವಿರುದ್ಧ ಅಪಪ್ರಚಾರ ಮಾಡಲು ದುಡ್ಡು ಕೊಟ್ಟಿದ್ರಾ?

ನೋರಾ ಫತೇಹಿ -

Yashaswi Devadiga
Yashaswi Devadiga Aug 26, 2026 7:10 PM

ಈ ವರ್ಷ ನೋರಾ ಫತೇಹಿ (Nora Fatehi) ಸಾಕಷ್ಟು ಸುದ್ದಿಯಲ್ಲಿದ್ದರು. ʻಕೆಡಿ’ ಸಿನಿಮಾದ (KD Movie) ‘ಸರ್ಕೆ ಚುನಾರ್’ (Sarke Chunar) ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಗಂಭೀರ ಆರೋಪ ಮಾಡಿದ್ದಾರೆ. ಇಡೀ ಹಾಡು ಬಿಡುಗಡೆಯಾಗುವ ಮುನ್ನವೇ ಕೇವಲ ಸಣ್ಣ ತುಣುಕುಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡಲಾಯಿತು’ ಎಂದು ನೋರಾ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಹಾಡನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡಲು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಹಣ ನೀಡಲಾಗಿತ್ತು. ಆ ಹಣ ಕೊಟ್ಟವರು ಯಾರು ಎನ್ನುವುದು ತಮಗೆ ತಿಳಿದಿದೆ ಎಂದು ನೋರಾ ಆರೋಪಿಸಿದ್ದಾರೆ.

ಇದನ್ನೂ ಓದಿ: Toxic Twitter Review: ಯಶ್ ಅಭಿನಯಕ್ಕೆ ಮನಸೋತ ಪ್ರೇಕ್ಷಕರು, ಆದ್ರೆ ನೆಟ್ಟಿಗರ ವಿಮರ್ಶೆಯೇ ಬೇರೆ!

ಸರ್ಕೆ ಚುನಾರ್ ತೇರಿ ಸರ್ಕೆ ವಿವಾದ

ಈ ವರ್ಷ ನೋರಾ ಫತೇಹಿ ಅವರ ಪಾಲಿಗೆ ಸರ್ಕೆ ಚುನಾರ್ ತೇರಿ ಸರ್ಕೆ ವಿವಾದವು ಪ್ರಮುಖ ಚರ್ಚೆಯ ವಿಷಯವಾಯಿತು. ಕೆಡಿ - ದಿ ಡೆವಿಲ್ ಹಾಡಿನ ಹಿಂದಿ ಆವೃತ್ತಿಯು ಅದರ ಸಾಹಿತ್ಯ ಮತ್ತು ದೃಶ್ಯಗಳ ಕಾರಣದಿಂದಾಗಿ ಟೀಕೆಗೆ ಗುರಿಯಾಯಿತು, ಇದರ ಪರಿಣಾಮವಾಗಿ ನೋರಾ ಮೇ 7 ರಂದು ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ವಿಚಾರಣೆಗೆ ಹಾಜರಾಗಬೇಕಾಯಿತು.

ಡ್ರೀಮ್ ವಿತ್ ಡಾ. ಶೀನ್ ಪಾಡ್‌ಕ್ಯಾಸ್ಟ್‌ನಲ್ಲಿನ ವಿವಾದದ ಕುರಿತು ಮಾತನಾಡಿದ ನೋರಾ, ಈ ಪ್ರತಿಕ್ರಿಯೆ ತನಗೆ ಆಶ್ಚರ್ಯವನ್ನುಂಟು ಮಾಡಲಿಲ್ಲ ಎಂದು ಹೇಳಿದರು.

‘ಯಾರು ಹಣ ಕೊಟ್ಟರು ಮತ್ತು ಎಷ್ಟು ಕೊಟ್ಟರು ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ ಎಂದಿದ್ದಾರೆ.

ಅಪಪ್ರಚಾರ ಮಾಡಲಾಯಿತು

ಸಾಲುಗಳು ಮತ್ತು ದೃಶ್ಯಗಳ ವಿಚಾರವಾಗಿ ಇಂಟರ್ನೆಟ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಡೀ ಹಾಡು ಬಿಡುಗಡೆಯಾಗುವ ಮುನ್ನವೇ ಕೇವಲ ಸಣ್ಣ ತುಣುಕುಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡಲಾಯಿತು.

ಕನ್ನಡ ಸಾಲುಗಳು ತಮಗೆ ಅರ್ಥವಾಗಿರಲಿಲ್ಲ. ಹಿಂದಿಗೆ ಡಬ್ ಮಾಡುವಾಗ ತಮ್ಮಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ತಂಡ ಹೇಳಿದ್ದನ್ನಷ್ಟೇ ನಂಬಿದ್ದೇ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಮೇ 7 ರಂದು ನೋರಾ ವಿಚಾರಣೆಗೆ ಹಾಜರಾಗಿದ್ದರು.

ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ನಿರ್ಮಿಸಿ, ಅದೇ ಬ್ಯಾನರ್ ಪ್ರಸ್ತುತಪಡಿಸಿದ ಕೆಡಿ ದಿ ಡೆವಿಲ್ 1970 ರ ದಶಕದ ಬೆಂಗಳೂರಿನ ನೈಜ ಘಟನೆಗಳಿಂದ ಪ್ರೇರಿತವಾದ ಒಂದು ಪಿರಿಯಡ್ ಆಕ್ಷನ್ ಎಂಟರ್‌ಟೈನರ್ ಆಗಿದೆ.

ಇದನ್ನೂ ಓದಿ: Amruthadhaare serial: ಕುಡಿದ ಮತ್ತಿನಲ್ಲಿ ಜೈದೇವ್ ಸತ್ಯ ಬಾಯಿ ಬಿಡ್ತಾನಾ?

ಈ ಚಿತ್ರದಲ್ಲಿ ಧ್ರುವ ಸರ್ಜಾ , ಸಂಜಯ್, ಶಿಲ್ಪಾ ಶೆಟ್ಟಿ ಕುಂದ್ರಾ, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಮತ್ತು ವಿ ರವಿಚಂದ್ರನ್ ಅವರೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.