Rabia Ahsan: ಖ್ಯಾತ ಟಿವಿ ನಿರೂಪಕಿಯನ್ನು ಗುಂಡಿಕ್ಕಿ ಹತ್ಯೆ; ಪತಿ ಅರೆಸ್ಟ್
Rabia Ahsan: ಪಾಕಿಸ್ತಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಖ್ಯಾತ ಪಾಕಿಸ್ತಾನಿ ಟೆಲಿವಿಷನ್ ನಿರೂಪಕಿ ಹಾಗೂ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ರಬಿಯಾ ಅಹ್ಸಾನ್ (Rabia Ahsan) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾವಲ್ಪಿಂಡಿಯ ಗುಲ್ಶನಾಬಾದ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲೇ ಭಾನುವಾರ ರಬಿಯಾ ಅವರ ಮೃತದೇಹ ಪತ್ತೆಯಾಗಿದೆ.
ನಿರೂಪಕಿ -
ಪಾಕಿಸ್ತಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಖ್ಯಾತ ಪಾಕಿಸ್ತಾನಿ ಟೆಲಿವಿಷನ್ ನಿರೂಪಕಿ ಹಾಗೂ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ರಬಿಯಾ ಅಹ್ಸಾನ್ (Rabia Ahsan) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾವಲ್ಪಿಂಡಿಯ ಗುಲ್ಶನಾಬಾದ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲೇ ಭಾನುವಾರ ರಬಿಯಾ ಅವರ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಅಹ್ಸಾನ್ ತಾಹಿರ್ ಖಾನ್ ಆರಂಭಿಕ ಪೊಲೀಸ್ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಸಮಾ (Samaa) ವರದಿ ಮಾಡಿದೆ.
ಪೊಲೀಸರ ವಶಕ್ಕೆ ಆರೋಪಿ
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ರಬಿಯಾ ಅವರ ಪತಿ ಅಹ್ಸಾನ್ ತಾಹಿರ್ ಖಾನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮಂಜು ಎಂಟ್ರಿಗೆ ಯಶಸ್ ಫುಲ್ ಸೈಲೆಂಟ್! ಇಡೀ ಮನೆ ಅಲ್ಲೋಲ ಕಲ್ಲೋಲ
ಪಂಜಾಬ್ ವಿಧಿವಿಜ್ಞಾನ ವಿಜ್ಞಾನ ಸಂಸ್ಥೆಯ (PFSA) ತಂಡವು ಘಟನಾ ಸ್ಥಳದಿಂದ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಮತ್ತೊಂದೆಡೆ, ರಬಿಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಪತ್ರಕರ್ತರ ವಲಯದಲ್ಲಿ ತೀವ್ರ ಆಕ್ರೋಶ, ದುಃಖ
ರಬಿಯಾ ಅಹ್ಸಾನ್ ಅವರ ಹತ್ಯೆಯ ಸುದ್ದಿ ಪಾಕಿಸ್ತಾನದ ಪತ್ರಕರ್ತರ ಸಮುದಾಯದಲ್ಲಿ ತೀವ್ರ ಆಘಾತ ಹಾಗೂ ದುಃಖಕ್ಕೆ ಕಾರಣವಾಗಿದೆ. ಸಹೋದ್ಯೋಗಿಗಳು, ಗಣ್ಯರು ಹಾಗೂ ಸಾರ್ವಜನಿಕ ವ್ಯಕ್ತಿಗಳು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಪಾಕಿಸ್ತಾನದ ಪ್ರಥಮ ಮಹಿಳೆ ಆಸಿಫಾ ಭುಟ್ಟೋ-ಜರ್ದಾರಿ (Aseefa Bhutto-Zardari) ಕೂಡ ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸತ್ಯಾಂಶ ಹೊರಬರಲು ಸಮಗ್ರ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವ ಮೂಲಕ ನ್ಯಾಯ ದೊರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ರಾವಲ್ಪಿಂಡಿಯಲ್ಲೇ ಡಿಜಿಟಲ್ ಮಾಧ್ಯಮ ಕಾರ್ಯನಿರ್ವಾಹಕಿ ಹಿನಾ ಜಾವೇದ್ ಅವರು ಆಗಸ್ಟ್ ತಿಂಗಳಲ್ಲಿ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದ ಘಟನೆಯನ್ನೂ ಆಸಿಫಾ ಭುಟ್ಟೋ-ಜರ್ದಾರಿ ಪ್ರಸ್ತಾಪಿಸಿದ್ದಾರೆ.
ಒಂದೇ ಪ್ರದೇಶದಲ್ಲಿ ವೃತ್ತಿಪರ ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ಹಿಂಸಾತ್ಮಕ ಘಟನೆಗಳು ಆತಂಕಕಾರಿ ಬೆಳವಣಿಗೆಯಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ತಮ್ಮ ಜೀವದ ಬಗ್ಗೆ ಭಯವಿಲ್ಲದೆ ಬದುಕಲು ಮತ್ತು ಕೆಲಸ ಮಾಡಲು ಸಾಧ್ಯವಾಗುವಂತಹ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್
ಟಿವಿ ನಿರೂಪಕಿ ರಬಿಯಾ ಅಹ್ಸಾನ್ ಅವರ ಹತ್ಯೆ ಪಾಕಿಸ್ತಾನದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ವೃತ್ತಿಪರ ಮಹಿಳೆಯರ ಮೇಲಿನ ಹಿಂಸಾಚಾರದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಸಂಪೂರ್ಣ ತನಿಖೆಯಿಂದ ಹತ್ಯೆಯ ಹಿಂದಿನ ಸತ್ಯಾಂಶ ಹೊರಬರಬೇಕಿದೆ.