ಜಾನ್ವಿ ಕಪೂರ್ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ವಿಡಿಯೋ ಹಂಚಿಕೊಂಡ ʻಪೆದ್ದಿʼ ಟೀಮ್; ಈ ಚಿತ್ರಕ್ಕಾಗಿ ʻಕಪೂರ್ ಕುಡಿʼ ಪಡೆದ ಸಂಭಾವನೆ ಎಷ್ಟು?
Janhvi Kapoor: ಪೆದ್ದಿ ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ರಾಮ್ ಚರಣ್ ನಟನೆಯ ಈ ಸಿನಿಮಾದಲ್ಲಿ 'ಅಚ್ಚಿಯಮ್ಮ' ಎಂಬ ವಿಭಿನ್ನ ಪಾತ್ರದಲ್ಲಿ ಜಾನ್ವಿ ಕಾಣಿಸಿಕೊಳ್ಳುತ್ತಿದ್ದಾರೆ.
-
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ (Peddi) ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ನಟಿ ಜಾನ್ವಿ ಕಪೂರ್ ನಟಿಸುತ್ತಿರುವುದು ಗೊತ್ತೇ ಇದೆ. ಇದರಲ್ಲಿ ಅವರು 'ಪೆದ್ದಿ'ಯ ಪ್ರೇಯಸಿ 'ಅಚ್ಚಿಯಮ್ಮ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾದ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ.
ಅಷ್ಟೇ ಅಲ್ಲದೆ 'ಚಿಕಿರಿ ಚಿಕಿರಿ' ಹಾಡಿನಲ್ಲಿಯೂ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದು (ಮಾರ್ಚ್ 6) ಜಾನ್ವಿ ಅವರ ಹುಟ್ಟುಹಬ್ಬ. ಹಾಗಾಗಿ, ಅವರಿಗೆ ಶುಭಾಶಯ ಕೋರುತ್ತಾ ಒಂದು ವಿಶೇಷ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. "ಮಾತಿಗೆ ನಿಲುಕದ ಸೌಂದರ್ಯ, ಕಣ್ಣುಗಳಲ್ಲೇ ನಟಿಸಬಲ್ಲ ಸಾಮರ್ಥ್ಯ ಜಾನ್ವಿ ಕಪೂರ್ ಅವರ ಸ್ವತ್ತು" ಎಂದು 'ಪೆದ್ದಿ' ತಂಡ ಶ್ಲಾಘಿಸಿದೆ.
Ram Charan: ಅವಳಿ ಮಕ್ಕಳಿಗೆ ಶಿವರಾಮ್ ಮತ್ತು ಅನ್ವೀರಾ ಅಂತ ನಾಮಕರಣ ಮಾಡಿದ ರಾಮ್ ಚರಣ್ ದಂಪತಿ; ಅರ್ಥವೇನು ಗೊತ್ತಾ?
ನಿರ್ದೇಶಕರು ಹೇಳಿದ್ದೇನು?
"ನಿಮ್ಮೊಂದಿಗೆ ಕೆಲಸ ಮಾಡುವುದು ನನಗೆ ತುಂಬಾ ಇಷ್ಟ. ಅಚ್ಚಿಯಮ್ಮನಾಗಿ ನಿಮ್ಮ ಪವರ್‌ಫುಲ್ ಅವತಾರವನ್ನು ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರಿಗೆ ತೋರಿಸಲು ನಾನಂತೂ ಕಾತರದಿಂದ ಕಾಯುತ್ತಿದ್ದೇನೆ" ಎಂದು ನಿರ್ದೇಶಕ ಬುಚ್ಚಿಬಾಬು ಸನಾ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, "ಕಾಡಿಗೆಯ ಅಗತ್ಯವಿಲ್ಲದ ಆ ಕಣ್ಣುಗಳು.. ಮೂಗುತಿ ಬೇಕಿಲ್ಲದ ಆ ಮೂಗು.. ಅಲಂಕಾರವೇ ಬೇಡದ ಚಿಕಿರಿ.." ಎಂದು ಜಾನ್ವಿ ಪಾತ್ರದ ಬಗ್ಗೆ ಬುಚ್ಚಿಬಾಬು ಬಣ್ಣಿಸಿದ್ದಾರೆ. ಈ ವಿಡಿಯೋದಲ್ಲಿ ಜಾನ್ವಿ ಕಪೂರ್ ಪೆದ್ದಿ ಸೆಟ್‌ನಲ್ಲಿ ಸಂಭ್ರಮದಿಂದ ಓಡಾಡಿಕೊಂಡಿರುವ ದೃಶ್ಯಾವಳಿಗಳು ಇವೆ.
Ram Charan: ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು; ಸಂಭ್ರಮಿಸಿದ್ದು ಹೀಗೆ
ಈ ಚಿತ್ರಕ್ಕಾಗಿ ಜಾನ್ವಿ ಪಡೆದ ಸಂಭಾವನೆ ಎಷ್ಟು?
ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ ಸುಮಾರು 6 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಜಾನ್ವಿ ತಮ್ಮ ಮೊದಲ ದಕ್ಷಿಣ ಭಾರತದ ಚಿತ್ರ 'ದೇವರ'ಗಾಗಿ 5 ಕೋಟಿ ರೂಪಾಯಿ ಪಡೆದಿದ್ದರು. ಈಗ 'ಪೆದ್ದಿ' ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು 1 ಕೋಟಿ ರೂ. ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಬಾಲಿವುಡ್‌ಗಿಂತ ಸೌತ್‌ನಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ ಅವರು.
ಬುಚ್ಚಿ ಬಾಬ ಸನಾ ಮಾಡಿರುವ ಟ್ವೀಟ್
Wishing you a very Happy Birthday #JanhviKapoor ❤️🥳
— BuchiBabuSana (@BuchiBabuSana) March 6, 2026
Loved working with you and super excited for the world to see your powerful avatar as Achiyamma on screen🔥#Peddi pic.twitter.com/udxd4CvvYR
ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಬಗ್ಗೆ...
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಸತೀಶ್ ಕಿಲಾರು ಭಾರಿ ಬಜೆಟ್‌ನಲ್ಲಿ 'ಪೆದ್ದಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳು ಈ ಚಿತ್ರವನ್ನು ಅರ್ಪಿಸುತ್ತಿವೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸುತ್ತಿರುವ ಈ ಸಿನಿಮಾಗೆ ರತ್ನವೇಲು ಛಾಯಾಗ್ರಹಣ ಮಾಡುತ್ತಿದ್ದಾರೆ. ಏಪ್ರಿಲ್ 30 ರಂದು ಪ್ರಪಂಚದಾದ್ಯಂತ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.