ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Halli Power: ಹಳ್ಳಿ ಪವರ್ ಸೀಸನ್ 1 ವಿನ್ನರ್ ಆದ ರಗಡ್ ರಶ್ಮಿ; ಟ್ರೋಫಿ ಜೊತೆ ಸಿಕ್ಕ ಹಣ ಎಷ್ಟು?

Ragad Rashmi: ಹಳ್ಳಿ ಪವರ್‌ ಒಂದು ವಿಭಿನ್ನ ಶೋ ಆಗಿದ್ದು ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ನ ತ್ಯಜಿಸಿ ಹಳ್ಳಿಗೆ ಬಂದು ಹಳ್ಳಿ ಜೀವನವನ್ನು ಸಾಗಿಸುವುದು ಈ ಟಾಸ್ಕ್‌. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್‌ ಈ ಶೋ ನ ಮತ್ತೊಂದು ಹೈಲೈಟ್ಆ ಗಿತ್ತು. ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಾ ಇದ್ದ, ‘ಹಳ್ಳಿ ಪವರ್’ ಶೋ ಈಗ ಪೂರ್ಣಗೊಂಡಿದೆ.

ಹಳ್ಳಿ ಪವರ್ ಸೀಸನ್ 1 ವಿನ್ನರ್ ಆದ ರಗಡ್ ರಶ್ಮಿ

ಹಳ್ಳಿ ಪವರ್‌ ಶೋ -

Yashaswi Devadiga
Yashaswi Devadiga Dec 29, 2025 8:09 AM

ಹಳ್ಳಿ ಪವರ್ (Halli Power) ಒಂದು ವಿಭಿನ್ನ ಶೋ ಆಗಿದ್ದು ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ನ ತ್ಯಜಿಸಿ ಹಳ್ಳಿಗೆ ಬಂದು ಹಳ್ಳಿ ಜೀವನವನ್ನು ಸಾಗಿಸುವುದು ಈ ಟಾಸ್ಕ್‌. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್‌ ಈ ಶೋ ನ ಮತ್ತೊಂದು ಹೈಲೈಟ್ (Heiglight) ಆಗಿತ್ತು. ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಾ ಇದ್ದ, ‘ಹಳ್ಳಿ ಪವರ್’ ಶೋ (Halli Power) ಈಗ ಪೂರ್ಣಗೊಂಡಿದೆ. ಡಿಸೆಂಬರ್ 28ರಂದು ಶೋನ ಫಿನಾಲೆ (Finale Show) ಪ್ರಸಾರ ಆಗಿದೆ. ಬೆಂಗಳೂರಿನ ರಗಡ್ ರಶ್ಮಿ (Ragad Rashmi) ಅವರು ವಿನ್ನರ್​ ಎಂದು ಘೋಷಿಸಲಾಗಿದೆ.

ರಗಡ್ ರಶ್ಮಿ ವಿನ್ನರ್

ಫಿಕ್ಷನ್ ಶೋ ಗಳು ಹಾಗೂ 'ಹಳ್ಳಿ ಪವರ್' ಎಂಬ ನಾನ್-ಫಿಕ್ಷನ್ ಶೋನಿಂದ ಜೀ ಪವರ್ ವಾಹಿನಿ ಈಗಾಗಲೇ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ 'ಹಳ್ಳಿ ಪವರ್' ಈಗ ವಿಜೇತರನ್ನು ಘೋಷಿಸಿದೆ. ರಗಡ್ ರಶ್ಮಿ ಅವರು ವಿನ್ನರ್ ಆದರೆ, ಘಾಟಿ ಗಾನವಿ ಅವರು ಮೊದಲ ರನ್ನರ್ ಅಪ್ ಆದರು.

ಇದನ್ನೂ ಓದಿ: Bigg Boss Kannada 12: ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ? ಕೊನೆಗೂ ಕ್ಲಾರಿಟಿ ಕೊಟ್ಟ ನಟಿ

ಈ ಶೋನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಸೋನಿಯಾ ಹೊರಹೊಮ್ಮಿದ್ದಾರೆ. ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ. ಸೆಕೆಂಡ್ ರನ್ನರ್ ಅಪ್ ಘಾಟಿ ಗಾನವಿ ಅವರಿಗೆ 7 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇನ್ನು, ವಿನ್ನರ್ ರಗಡ್ ರಶ್ಮಿ ಅವರಿಗೆ ಟ್ರೋಫಿ ಜೊತೆ 10 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ.

ಶೋ ಪ್ರಮುಖ ಹೈಲೈಟ್‌

ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್ಸ್ ಈ ಶೋ ನ ಮತ್ತೊಂದು ಹೈಲೈಟ್ ಆಗಿತ್ತು. ವ್ಯವಸಾಯ, ಜಾನುವಾರುಗಳ ಪೋಷಣೆ, ಪಾಲನೆ, ಹೀಗೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ 'ಹಳ್ಳಿ ಪವರ್' ಸ್ಪರ್ಧಿಗಳಿಗೆ ನೀಡಲಾಗಿತ್ತು.

ಇನ್ನು ಈ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದಿದೆ. ಹಳ್ಳಿ ಸೊಗಡು, ಅಕುಲ್ ಬಾಲಾಜಿ ಅವರ ನಿರೂಪಣೆ, ಸ್ಪರ್ಧಿಗಳ ಛಲ ಇವೆಲ್ಲವೂ 'ಹಳ್ಳಿ ಪವರ್' ಶೋ ಯಶಸ್ವೀ ಆಗಲು ಕಾರಣವಾಯ್ತು ಎಂಬುದು ತಂಡದ ಮಾತು.

ಈ ರಿಯಾಲಿಟಿ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದರು.

ಇದನ್ನೂ ಓದಿ: Bigg Boss Kannada 12: ಅಶ್ವಿನಿಗೆ ಸಖತ್‌ ಕ್ವಾಟ್ಲೆ ಕೊಟ್ಟ ಗಿಲ್ಲಿ; ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತಿನಿ ಅಂತ ಸವಾಲ್‌!

ರಶ್ಮಿ ಮಾತನಾಡಿ ನಾನು ಹರಿಸಿದ ಬೆವರು, ರಕ್ತಕ್ಕೆ ಎಲ್ಲದಕ್ಕೂ ಪ್ರತಿಫಲ ಸಿಕ್ಕಿದೆ. ಅನ್ನ ಹಾಕಿದೀರಿ, ಆಶ್ರಯ ಕೊಟ್ಟಿದೀರಿ. ವೋಟ್ ಹಾಕಿ ಗೆಲ್ಲಿಸಿದ್ದಕ್ಕೆ ಧನ್ಯವಾದ. ಅಕುಲ್ ಅವರೇ ನೀವು ಸಾಕಷ್ಟು ಮೋಟಿವೇಷನ್ ಕೊಟ್ಟಿದೀರಾ. ಈ ಕಲ್ಲು ಶಿಲೆ ಆಗಿದೆ ಎಂದರು. ಡಿಸೆಂಬರ್ 27 ಮತ್ತು 28 ರಂದು ಸಂಜೆ 8.30ರಿಂದ ರಾತ್ರಿ 10.30ರವರೆಗೆ ಜೀ ಪವರ್‌ ನಲ್ಲಿ ಫಿನಾಲೆ ಪ್ರಸಾರ ಕಂಡಿದೆ.