ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇ-ಕಲಿಕೆಯಲ್ಲಿ 'ಸ್ಮಾರ್ಟ್' ಆಗದ ಸರಕಾರಿ ಶಾಲೆಗಳು

ಪ್ರೊಜೆಕ್ಟರ್‌ ಬಳಕೆಗೆ ಇನ್ನೂ ತರಬೇತಿ ನೀಡಿರುವುದಿಲ್ಲ ಹಾಗೂ ಈ ಪ್ರೊಜೆಕ್ಟರುಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕು ಎಂಬುದರ ಬಗ್ಗೆ ಅರಿವು ಸಹ ಇಲ್ಲ ಎನ್ನಲಾಗಿದೆ. ಈ ಕುರಿತು ಕ್ರಮ ವಹಿಸಿ ಪರಿಹರಿಸಬೇಕಾಗಿರುವ ಅಧಿಕಾರಿಗಳು ಮಾತ್ರ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸು ತ್ತಿದ್ದಾರೆ.

ಇ-ಕಲಿಕೆಯಲ್ಲಿ 'ಸ್ಮಾರ್ಟ್' ಆಗದ ಸರಕಾರಿ ಶಾಲೆಗಳು

-

Ashok Nayak
Ashok Nayak Dec 29, 2025 9:03 AM

ವೀರೇಶ ಎಸ್ ಕೆಂಭಾವಿ ಯಾದಗಿರಿ

ಮೂಲೆಯಲ್ಲಿ ಧೂಳು ತಿನ್ನುತ್ತಿರುವ ಪ್ರೊಜೆಕ್ಟರ್‌, ಕಂಪ್ಯೂಟರ್‌

ಕೆಲವೆಡೆ ಶಿಕ್ಷಕರಿಗೆ ತರಬೇತಿಯಿಲ್ಲ, ಇನ್ನೊಂದೆಡೆ ಯುಪಿಎಸ್‌ ಸಮಸ್ಯೆ

ಶಾಲೆಗಳಲ್ಲಿ ಇ-ಕಲಿಕೆ ವ್ಯವಸ್ಥೆಯ ಸ್ಥಾಪನೆ ಮೂಲಕ ಪ್ರೊಜೆಕ್ಟರು, ಸ್ಮಾರ್ಟ್ ಹಲಗೆ ಮತ್ತು ಇಜಿ ಸಂಬಂಧಿತ ಉಪಕರಣದ ಮೂಲಕ ಸರಕಾರಿ ಶಾಲೆಗಳಲ್ಲಿ ನಡೆಸಲು ಉದ್ದೇಶಿಸಿರುವ ಸ್ಮಾರ್ಟ್ ಕ್ಲಾಸ್‌ಗಳು ಹಲವು ಸಮಸ್ಯೆಗಳಿಂದ ಸೊರಗಿ ಹೋಗಿವೆ.

ಇದು ರಾಜ್ಯ ಸೇರಿ ಯಾದಗಿರಿ ಜಿಲ್ಲೆಯಲ್ಲೂ ಇಂತಹ ಸಮಸ್ಯೆ ಎದುರಿಸುತ್ತಿದೆ. ಕೆಲ ಜಿಲ್ಲೆಗಳಲ್ಲಿ ಸಿಎಜಿ ಅಧ್ಯಯನ ನಡೆಸಿರುವ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ. ಶಿಕ್ಷಕರು ಕಪ್ಪು ಹಲಗೆಯ ಮೇಲೆ ನಕ್ಷೆ, ಚಿತ್ರಗಳನ್ನು ಬಿಡಿಸಲು ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿದ್ದರು. ಈಗ ಕಣ್ಣ ಮುಂದೆಯೇ ಎಲ್ಲ ಚಿತ್ರಗಳು ಬರುವ ಕಾರಣ ಉಚಿತ ಕಲಿಕೆ ಸಾಧ್ಯವಾಗುತ್ತದೆ.

ಸ್ಮಾರ್ಟ್ ಕ್ಲಾಸ್’ ಸೌಲಭ್ಯ ಕಲ್ಪಿಸುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟು ಸಮರ್ಥವಾಗಿಸಲು ಕೆಲ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳ ಕಲಿಕಾಗುಣ ಮಟ್ಟ ಹೆಚ್ಚಳಕ್ಕಾಗಿ ಗಣಕಯಂತ್ರ, ಪ್ರೊಜೆಕ್ಟರ್, ಟಿವಿ ಸೇರಿದಂತೆ ಇತರರ ಉಪಕರಣಗಳನ್ನು ಸರಕಾರದ ಅನುದಾನ ಮತ್ತು ದಾನಿಗಳು ನೀಡಿದ್ದಾರೆ.

ಇದನ್ನೂ ಓದಿ: Vishweshwar Bhat Column: ಕಿಟಕಿಯ ರಂಧ್ರದ ಮಹತ್ವ

ಆದರೆ, ಅಸಲಿಗೆ ಇದ್ಯಾವುದು ಆಗುತ್ತಿಲ್ಲ. ಇವುಗಳ ನಿರ್ವಹಣೆ, ಜಾಗದ ಕೊರತೆ ಹಾಗೂ ಅದಿಲ್ಲ, ಇದ್ದಿಲ್ಲ ಎನ್ನುವ ಕಾರಣಕ್ಕೆ ಮೊಲೆ ಸೇರಿ ಧೂಳು ತಿನ್ನುತ್ತಿವೆ. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕಂಪ್ಯೂ ಟರ್ ನೀಡಲಾಗಿದ್ದು, ಆದರೆ ಇದನ್ನು ಅಳವಡಿಸಲು ಕೋಣೆ ಇರುವುದಿಲ್ಲ. ಇದ್ದರೂ ಸಹಿತ ಶಿಕ್ಷಕರು ಇಲ್ಲ.

ಪ್ರೊಜೆಕ್ಟರ್‌ ಬಳಕೆಗೆ ಇನ್ನೂ ತರಬೇತಿ ನೀಡಿರುವುದಿಲ್ಲ ಹಾಗೂ ಈ ಪ್ರೊಜೆಕ್ಟರುಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕು ಎಂಬುದರ ಬಗ್ಗೆ ಅರಿವು ಸಹ ಇಲ್ಲ ಎನ್ನಲಾಗಿದೆ. ಈ ಕುರಿತು ಕ್ರಮವಹಿಸಿ ಪರಿಹರಿಸಬೇಕಾಗಿರುವ ಅಧಿಕಾರಿಗಳು ಮಾತ್ರ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಸ್ಮಾರ್ಟ್ ಕ್ಲಾಸ್ ಗೆ ತೊಡಕುಗಳೇನು..?

ಕಂಪ್ಯೂಟರ್‌ ಇಡಲು ಶಾಲೆಗಳಲ್ಲಿ ಕೋಣೆ ಕೊರತೆ

ಪ್ರೊಜೆಕ್ಟರ್ ಬಳಕೆ ಮಾಡುವುದೇ ಶಿಕ್ಷಕರಿಗೆ ಗೊತ್ತಿಲ್ಲ

ತಲೆನೋವಾದ ವಿದ್ಯುತ್, ಯುಪಿಎಸ್ ಸಮಸ್ಯೆ

ನಿರುಪಯುಕ್ತ ವಾದ ಪ್ರಿಂಟರ್‌ಗಳು, ಬದಲಿ ಪ್ರಿಂಟರ್‌ಕಾಟ್ರಿಡ್ಡುಗಳು ದುಬಾರಿ ತೊಡಕು

ಆನ್ ಬಾಕ್ಸ್ ಆಗದ ಟಿವಿ

ಇನ್ನೂ ಸರಕಾರಿ ಶಾಲೆಗಳ ಮಕ್ಕಳ ಭವಿಷ್ಯಕ್ಕೆ ನೆರವಾಗಲಿ ಎನ್ನುವ ಸದುದ್ದೇಶದೊಂದಿಗೆ ಟಿವಿ ನೀಡಲಾಗಿದೆ. ಆದರೆ, ಅದ್ಯಾವುದು ಓಪನ್ ಆಗದೆ ಕೊಟ್ಟ ರೀತಿಯಲ್ಲಿ ಇವೆ ಎನ್ನುತ್ತಾರೆ. ಅದೆ ರೀತಿಯಾಗಿ ಪ್ರೊಜೆಕ್ಟರ್ ಸೇರಿದಂತೆ ಬಹುತೇಕ ಉಪಕರಣಗಳು ನಿರುಯುಕ್ತವಾಗಿದೆ.

*

ಮಕ್ಕಳಿಗೆ ಅನುಕೂಲವಾಗಲಿ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪೂರಕವಾಗಿ ಶಿಕ್ಷಣ ದೊರೆ ಯಲ್ಲಿ ಎನ್ನುವ ಕಾರಣಕ್ಕೆ ನಮ್ಮ- ಸಂಘಟನೆಯಿಂದ ಶಾಲೆಯೊಂದಕ್ಕೆ ಟಿವಿ ನೀಡಲಾಗಿದೆ. ಆದರೆ, ದುರದೃಷ್ಟವಶಾತ್ ಅದು ಇನ್ನೂ ಬಳಕೆಯಾಗಿಲ್ಲ.

-ಹೆಸರು ಹೇಳಲು ಇಚ್ಛಿಸದ ದಾನಿ