ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಶ್ವಿನಿ, ಧ್ರುವಂತ್‌ ದೂರು! ಕ್ಲಾಸ್ ತೆಗೆದುಕೊಂಡ ಕಿಚ್ಚ

Rajath Bigg Boss: ಈ ವಾರ ಕಿಚ್ಚ ಸುದೀಪ್‌ ಅವರು ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಜತ್‌ ಹಾಗೂ ಚೈತ್ರಾ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಿಂದಿನ ವಾರ ರಜತ್‌ ಅವರು ಆಟ ಆಡುವಾಗ, ಕೆಲವು ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದರು. ಇದನ್ನ ಅಶ್ವಿನಿ ಅವರು ಸುದೀಪ್‌ ಬಳಿ ದೂರು ನೀಡಿದ್ದಾರೆ.ಅಷ್ಟೇ ಅಲ್ಲ ಈ ಬಗ್ಗೆ ಹೇಳುತ್ತ ಭಾವುಕರಾಗಿದ್ದಾರೆ. ಧ್ರುವಂತ್‌ ಕೂಡ ಅಶ್ವಿನಿ ಮಾತುಗಳಿಗೆ ಸಾಥ್‌ ಕೊಟ್ಟರು.

ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಶ್ವಿನಿ, ಧ್ರುವಂತ್‌ ದೂರು!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 14, 2025 7:42 AM

ಈ ವಾರ ಕಿಚ್ಚ ಸುದೀಪ್‌ (Sudeep) ಅವರು ವೈಲ್ಡ್‌ ಕಾರ್ಡ್‌ (Wild Card Entry) ಎಂಟ್ರಿ ಕೊಟ್ಟಿದ್ದ ರಜತ್‌ ಹಾಗೂ ಚೈತ್ರಾ (Rajath Chaithra) ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಿಂದಿನ ವಾರ ರಜತ್‌ ಅವರು ಆಟ ಆಡುವಾಗ, ಕೆಲವು ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದರು. ಇದನ್ನ ಅಶ್ವಿನಿ ಅವರು ಸುದೀಪ್‌ (Ashwini Sudeep) ಬಳಿ ದೂರು ನೀಡಿದ್ದಾರೆ.ಅಷ್ಟೇ ಅಲ್ಲ ಈ ಬಗ್ಗೆ ಹೇಳುತ್ತ ಭಾವುಕರಾಗಿದ್ದಾರೆ. ಧ್ರುವಂತ್‌ ಕೂಡ ಅಶ್ವಿನಿ ಮಾತುಗಳಿಗೆ ಸಾಥ್‌ ಕೊಟ್ಟರು.

ಇವರಷ್ಟು ಕಳಪೆ ಇಲ್ಲ

ಸತತ ಮುಕ್ಕಾಲು ಗಂಟೆಯಾದರೂ ಅಶ್ವಿನಿ ಅವರು ಒಂದೂ ಬಿಡದಂತೆ ಎಲ್ಲವನ್ನು ಪ್ರಸ್ತಾಪಿಸಿದರು. ಮುದುಕಿ, ಸೆಡೆ, ಕಚಡ ಹೀಗೆ ಅನೇಕ ಪದ ಬಳಕೆ ಲಿಸ್ಟ್‌ ನನ್ನಲ್ಲಿದೆ. ರಜತ್‌ ಯಾಕೆ ಇಷ್ಟು ಸ್ಟುಪಿಡ್‌ ಆಗಿ ಮಾತಾಡ್ತಾ ಇದ್ದಾರೆ ಗೊತ್ತಿಲ್ಲ.

ಇದನ್ನೂ ಓದಿ: Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಸುಮ್ಮಸುಮ್ಮನೆ ನನ್ನನ್ನು ಟಾರ್ಗೆಟ್‌ ಮಾಡ್ತಿದ್ದಾರೆ. ರಜತ್‌ ಹಾಗೂ ಚೈತ್ರಾ ಇಬ್ಬರೂ. ನನ್ನ ತಂಟೆಗೆ ಬರಬಾರದು. ಹೇ ಸುಬ್ಬಿ ಆ ಮುದುಕಿಯನ್ನ ಹೊಡೀತಿನಿ ಕಣೋ ಅಂತಾರೆ. ಬಿಗ್‌ ಬಾಸ್‌ ಮನೆಗೆ ಕಂಟೆಸ್ಟ್‌ಗಳನ್ನ ಕರೇಸಿದ್ದೀರಾ ಅಥವಾ ಬೇರೆ ಯಾವುದಾದರೂ ಎಲಿಮೆಂಟ್‌ ಕರೆಸಿದ್ದೀರಾ? ಸೀಸನ್‌12ರಲ್ಲಿ ಯಾರೂ ಇವರಷ್ಟು ಕಳಪೆ ಇಲ್ಲ. ನಾನು ಎದೆ ತಟ್ಟುಕೊಂಡು ಹೇಳ್ತೀನಿ ಎಂದಿದ್ದಾರೆ.

ಆದರೆ ಇದಷ್ಟೂ ಕೇಳಿಕೊಂಡ ಬಳಿಕ ಸುದೀಪ್‌ ಅವರು ಮೊದಲಿಗೆ ಟಾಸ್ಕ್‌ ಬಗ್ಗೆ ಮಾತನಾಡಿದರು. ಚೈತ್ರಾ ಅವರು ಮಾಡಿದ ತಪ್ಪುಗಳನ್ನು ಒಂದೊಂದಾಗಿ ಹೇಳಿದರು. ಕರ್ನಾಟಕ ನೋಡುತ್ತಿದೆ ಎಂದು ಚೈತ್ರಾ ಆಗಾಗ ಹೇಳುತ್ತ ಇದ್ದರು. ನಿಮ್ಮಿಬ್ಬರನ್ನು ಸ್ಪರ್ಧಿಗಳಾಗಿ ಕಳಿಸಿರುವುದಾ ಅಥವಾ ಒಂದು ಯೂನಿಟ್ ಆಗಿ ಕಳಿಸಿ, ಒಟ್ಟಿಗೆ ಆಟ ಆಡಿ ಎಂದಿರುವುದಾ? ಹೊರಗಡೆಯೂ ಸಹ ಜನ ಹೀಗೆಯೇ ಮಾತನಾಡುತ್ತಿದ್ದಾರೆ ಎಂದರು ಸುದೀಪ್.

ರಜತ್ ಅವರಿಗೆ ಸಮಾಧಾನಕರವಾದ ಭಾಷೆಯಲ್ಲಿಯೇ ಅವರ ವರ್ತನೆಯನ್ನು ಟೀಕೆ ಮಾಡಿದರು. ಅವರ ವರ್ತನೆ, ಎದುರಿಗೆ ಇರುವವರಿಗೆ ಎಷ್ಟು ನೋವು ಉಂಟು ಮಾಡಬಹುದು ಎಂಬುದನ್ನು ಬಿಡಿಸಿ ಹೇಳಿದರು. ಗಿಲ್ಲಿಯ ಉದಾಹರಣೆ ಕೂಡ ಕೊಟ್ಟರು. ನೀವು ತಮಾಷೆಗೆ ಗಿಲ್ಲಿಗೆ ಬಾರಿಸಿ ಬಿಡ್ತಿದ್ದೆ ಅಂದ್ರಿ. ಆದರೆ ಅವರು ನಾಮಿನೇಟ್‌ ಮಾಡ್ತಾರೆ. ಅಂದರೆ ಕೆಲವೊಮ್ಮೆ ಕೆಲವು ತಮಾಷೆ ಆಗಿದ್ದರು ಕೆಲವು ಮಾತುಗಳು ನೋವುಂಟು ಮಾಡುತ್ತದೆ ಎಂದು ತಿಳಿ ಹೇಳಿದರು.

ಹಾಗೆ ಮಾತನಾಡುವುದಿಲ್ಲ ಎಂದ ರಜತ್‌!

ಆ ಬಳಿಕ ರಜತ್‌ ಅವರಿಗೆ ಬುದ್ಧಿವಾದ ಹೇಳಿದ್ದಾರೆ ಕಿಚ್ಚ. ನೀವು ಎಂಥೆಥ ಮಾತುಗಳನ್ನು ಆಡಿದ್ದೀರಿ ಎಂದರೆ, ಅದರ ಬಗ್ಗೆ ನಾನು ಮಾತನಾಡಬೇಕು ಎಂದರೆ ನಾನು ಈಗ ಅದೇ ಮಾತುಗಳನ್ನು ಹೇಳಬೇಕಾಗುತ್ತದೆ. ಈಗ ನಾನು ಅವನ್ನು ಹೇಳಬೇಕಾ? ಹೇಳಲು ಸಹ ಆಗದಷ್ಟು ಕೆಟ್ಟ ಭಾಷೆ ಬಳಸಿದ್ದೀರಿ ಎಂದರು ಸುದೀಪ್.

ಇದನ್ನೂ ಓದಿ: Bigg Boss Kannada 12: ವಿಲನ್ ಚಾಲೆಂಜ್​ಗೆ ಗಿರ್ ಅಂತಿದೆ ಕಂಟೆಸ್ಟೆಂಟ್ಸ್ ತಲೆ; ಮಾಳು ಹೊಸ ಲುಕ್ ನೋಡ್ರಪ್ಪ!

ಸೆಡೆ ಎಂಬ ಪದ ಬಂದಿದ್ದಕ್ಕೆ ನಾನು ಸುಧಿ ಅವರನ್ನು ಬೈದಿದ್ದೇನೆ. ಅದಕ್ಕಿಂತಲೂ ಹೆಚ್ಚಿನ ಪದಗಳನ್ನು ಬಳಸಿದ್ದೀರಿ. ಉದ್ದೇಶಪೂರ್ವಕವಾಗಿ ಅದನ್ನು ಕ್ಯಾರಿ ಫಾರ್ವರ್ಡ್ ಮಾಡುತ್ತಿದ್ದೀರಿ’ ಎಂದರು ಸುದೀಪ್. ಇನ್ನು ಮುಂದೆ ನಾನು ಹಾಗೆ ಮಾತನಾಡುವುದಿಲ್ಲ ಅಂತ ಅಂದಿದ್ದಾರೆ ರಜತ್‌.