ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actress Ramya: ಕೇಸ್‌ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಫ್ಯಾನ್ಸ್‌! ನಟಿಯ ಖಡಕ್‌ ರಿಪೈ ಇದು

Actress Ramya: ತಮ್ಮನ್ನು ಕ್ಷಮಿಸುವಂತೆ ಆರೋಪಿಗಳು ಹಾಗೂ ಅವರ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡರೂ ಕೂಡ ರಮ್ಯಾ ಅವರು ಮನಸ್ಸು ಬದಲಾಯಿಸಿಲ್ಲ. ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶಗಳನ್ನು ರವಾನಿಸಲಾಗಿತ್ತು.

ಕೇಸ್‌ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಫ್ಯಾನ್ಸ್‌!

ರಮ್ಯಾ ನಟಿ -

Yashaswi Devadiga
Yashaswi Devadiga Sep 6, 2026 11:08 AM

ನಟಿ ರಮ್ಯಾ ಹಾಗೂ ದರ್ಶನ್ (Ramya) ಅಭಿಮಾನಿಗಳ ಕಮೆಂಟ್ ಪ್ರಕರಣ ತಾರಕಕ್ಕೇರಿದೆ. ತಮ್ಮನ್ನು ಕ್ಷಮಿಸುವಂತೆ ಆರೋಪಿಗಳು ಹಾಗೂ ಅವರ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡರೂ ಕೂಡ ರಮ್ಯಾ ಅವರು ಮನಸ್ಸು ಬದಲಾಯಿಸಿಲ್ಲ. ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶಗಳನ್ನು ರವಾನಿಸಲಾಗಿತ್ತು. ರಮ್ಯಾ ದೂರು ನೀಡಿದ್ದರು.ಹಲವು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (Charge sheet) ಸಲ್ಲಿಕೆ ಮಾಡಿದ್ದು, ವಿಚಾರಣೆ ಚುರುಕುಗೊಂಡಿದೆ.

ಕೋರ್ಟ್‌ನಲ್ಲಿ ಮನವಿ

ಆರೋಪಿಗಳು ರಮ್ಯಾ ಕಾಲಿಗೆ ಬಿದ್ದು ಕೇಸ್‌ ವಾಪಸ್‌ ಪಡೆಯುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೊಂದು ಬಾರಿ ಕ್ಷಮಿಸಿ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆರೋಪಿಗಳ ಕುಟುಂಬದವರಿಂದಲೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ‘ಬಿಗ್‌ ಬಾಸ್‌ ಸೀಸನ್‌ 13’ ಎಂಟ್ರಿಗೂ ಮುನ್ನ ನಟಿ ಆಸಿಯಾ ಫಿರ್ದೋಸ್ ಸೀರಿಯಲ್‌ ತಂಡದ ಕುರಿತು ಹೇಳಿದ್ದೇನು?

ಆದರೂ ರಮ್ಯಾ ಮಾತ್ರ ಹಿಂದೆ ಸರಿದಿಲ್ಲ. ಇದೊಂದು ಪಾಠ ಆಗ್ಬೇಕು. ಕೇಸ್‌ ವಾಪಸ್‌ ತೆಗೆದುಕೊಳ್ಳಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ. ರಮ್ಯಾ ತಮ್ಮ ನಿಲುವಿನಲ್ಲಿ ಕೊಂಚವೂ ಸಡಲಿಕೆ ತೋರಿಲ್ಲ. ಕೈಯಲ್ಲಿ ಮೊಬೈಲ್ ಇದೆ, ಇಂಟರ್ನೆಟ್ ಸಿಗುತ್ತದೆ ಎಂಬ ಕಾರಣಕ್ಕೆ ಯಾರ ವಿರುದ್ಧ, ಹೇಗೆ ಬೇಕಾದರೂ ಅಶ್ಲೀಲವಾಗಿ ಕಾಮೆಂಟ್ ಹಾಕಬಹುದಾ? ಎಂದಿದ್ದಾರೆ.

ಇದಕ್ಕೂ ಮುಂಚೆಯೇ ದೂರು ನೀಡಿದ ಬಳಿಕ ಮಾತನಾಡಿರ ರಮ್ಯಾ, ಈ ರೀತಿ ಕೆಟ್ಟ ಕಾಮೆಂಟ್ ಮಾಡುವವರಿಗೆ ತಕ್ಕ ಶಾಸ್ತಿಯಾಗಬೇಕು. ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ ನಿಲ್ಲಬೇಕು ಎಂದು ನಟಿ ರಮ್ಯಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ʻಅಗ್ನಿಪರೀಕ್ಷೆ’ ಇಂದ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟವರು ಇವರೇ?

ಹಲವು ಹೆಣ್ಣುಮಕ್ಕಳು ನನಗೆ ಬೆಂಬಲ ನೀಡಿದ್ದರೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಂತ್ಯವಾಗಬೇಕು ಅನ್ನೋದು ನನ್ನ ಉದ್ದೇಶ. ಬೆದರಿಕೆಗಳು ಬರುತ್ತಿದೆ. ಇಂಡಸ್ಟ್ರಿಯ ಜನ ಧೈರ್ಯವಾಗಿ ಮುಂದೆ ಬರಬೇಕು ಎಂದು ನಟಿ ರಮ್ಯಾ ಕರೆ ನೀಡಿದ್ದರು.