ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪ್ಪನ ಹೆಸರನ್ನು ಕೈಬಿಟ್ಟು ವಿಜಯ್‌ಗೆ ಶಾಕ್‌ ನೀಡಿದ್ರಾ ಪುತ್ರ ಜೇಸನ್ ಸಂಜಯ್‌? ತಾಯಿ ಸಂಗೀತ ಪರ ನಿಂತ ದಳಪತಿ ಮಗ

Thalapathy Vijay: ನಟ ವಿಜಯ್ ಅವರ ಕೌಟುಂಬಿಕ ಬದುಕಿನ ಸಮಸ್ಯೆಗಳು ಈಗ ಬೀದಿಗೆ ಬಂದಿವೆ. ಪತ್ನಿ ಸಂಗೀತ ಅವರಿಂದ ದೂರವಿರುವ ಸುದ್ದಿಗಳ ನಡುವೆಯೇ, ಪುತ್ರ ಜೇಸನ್ ಸಂಜಯ್ ತಮ್ಮ ಹೆಸರಿನಲ್ಲಿದ್ದ ತಂದೆಯ ಇನಿಶಿಯಲ್ ‘V’ ತೆಗೆದುಹಾಕಿ, ತಾಯಿ ಹೆಸರಿನ ‘S’ ಸೇರಿಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ʻದಳಪತಿʼ ವಿಜಯ್‌ಗೆ ಪುತ್ರನಿಂದಲೇ ಶಾಕ್? ಜೇಸನ್‌ ಸಂಜಯ್‌ ಮಾಡಿದ್ದೇನು?

-

Avinash GR
Avinash GR Mar 13, 2026 12:13 PM

ತಮಿಳು ನಟ, ಟಿವಿಕೆ ಪಕ್ಷದ ಮುಖ್ಯಸ್ಥ ʻದಳಪತಿʼ ವಿಜಯ್ ಅವರ ಖಾಸಗಿ ಬದುಕಿನಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ತಮ್ಮ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ವಿಜಯ್, ತಮಿಳುನಾಡು ಮುಖ್ಯಮಂತ್ರಿ ಆಗುವ ಉಮೇದಿನಲ್ಲಿ ಇದ್ದಾರೆ. ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಪರವಾಗಿ ಭಾರಿ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆಯೇ ಅವರ ಕೌಟುಂಬಿಕ ಬದುಕಿನ ಸಮಸ್ಯೆಗಳು ಬೀದಿಗೆ ಬಿದ್ದಿವೆ. ಈಗಾಗಲೇ ಪತ್ನಿ - ಮಕ್ಕಳಿಂದ ವಿಜಯ್‌ ದೂರವಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅತ್ತ ಪುತ್ರ ಕೂಡ ತಂದೆಯಿಂದ ಬಹಳವೇ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಟಾಕ್‌ ಕೇಳಿಬಂದಿದೆ.

ಹೆಸರು ಬದಲಿಸಿಕೊಂಡ್ರಾ ಪುತ್ರ ಜೇಸನ್?

ನಟ ವಿಜಯ್‌ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನದ ಸುತ್ತಲಿನ ವಿವಾದಗಳು ಹೆಚ್ಚಾಗುತ್ತಿವೆ. ವಿಚ್ಛೇದನದ ಕೋರಿ ಪತ್ನಿ ಸಂಗೀತ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದು ತಮಿಳು ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ವಿಜಯ್ ಪುತ್ರ ಜೇಸನ್ ಸಂಜಯ್ ಇತ್ತೀಚೆಗೆ ತಮ್ಮ ಹೆಸರಿನಲ್ಲಿದ್ದ ಇನಿಶಿಯಲ್ (Initial) ಅನ್ನು ಬದಲಿಸಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ʻದಳಪತಿʼ ವಿಜಯ್‌ - ತ್ರಿಷಾ ಒಟ್ಟಿಗೆ ಯಾವ್ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ? ಇವರಿಬ್ಬರ ಫ್ರೆಂಡ್‌ಶಿಪ್‌ಗೆ ಎಷ್ಟು ವರ್ಷ?

ಸಾಮಾನ್ಯವಾಗಿ ಮಕ್ಕಳು ತಮ್ಮ ತಂದೆಯ ಹೆಸರಿನ ಮೊದಲ ಅಕ್ಷರವನ್ನು ಇನಿಶಿಯಲ್ ಆಗಿ ಬಳಸುವ ಸಂಪ್ರದಾಯವಿದೆ. ಆದರೆ, ಜೇಸನ್ ಸಂಜಯ್ ತಮ್ಮ ತಂದೆ ವಿಜಯ್ ಅವರ ಹೆಸರಿನ ‘ವಿ’ (V) ಅಕ್ಷರವನ್ನು ತೆಗೆದುಹಾಕಿ, ತಾಯಿ ಸಂಗೀತ ಅವರ ಹೆಸರಿನ ‘ಎಸ್’ (S) ಅಕ್ಷರವನ್ನು ಸೇರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೂ ಈ ಬಗ್ಗೆ ಜೇಸನ್‌ ಸಂಜಯ್‌ ಅವರು ಎಲ್ಲಿಯೂ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಈ ರೀತಿ ಇನಿಶಿಯಲ್ ಬದಲಿಸಿದ್ದರ ಬಗ್ಗೆ ಯಾವುದೇ ದಾಖಲೆಗಳು ಕೂಡ ಸಿಕ್ಕಿಲ್ಲ.

ಲಂಡನ್ ಮೂಲದ ಸಂಗೀತಾ ಜೊತೆಗೆ ನಟ ವಿಜಯ್‌ ಮದುವೆ ಫಿಕ್ಸ್‌ ಆಗಿದ್ದೇಗೆ? ಅಸಲಿ ವಿಚಾರವನ್ನ ಬಾಯಿಬಿಟ್ಟಿದ್ದ ʻದಳಪತಿʼ

ನಟನೆ ಬದಲು ನಿರ್ದೇಶನದ ಮೇಲೆ ಆಸಕ್ತಿ

‌ಜೇಸನ್ ಸಂಜಯ್ ಅವರು ಪ್ರಸ್ತುತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಂದೆಯಂತೆ ನಟರಾಗುವ ಬದಲು, ತಾತ ಚಂದ್ರಶೇಖರ್‌ ಅವರಂತೆ ನಿರ್ದೇಶಕರಾಗುವ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಜೇಸನ್.‌ ಈಗಾಗಲೇ ಅವರು ‘ಸಿಗ್ಮಾ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಂದೀಪ್‌ ಕಿಶನ್‌ ಇದರ ಹೀರೋ ಆಗಿದ್ದಾರೆ.

ವೈಯಕ್ತಿಕ ಬದುಕಿನ ಬಗ್ಗೆ ವಿಜಯ್‌ ಪ್ರತಿಕ್ರಿಯೆ ಏನು?

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳ ಬಗ್ಗೆ ವಿಜಯ್, "ನನ್ನ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ನೀವು ತಲೆಕೆಡಿಸಿಕೊಳ್ಳುವಷ್ಟು ಅವು ವರ್ತ್‌ ಅಲ್ಲ, ಅವೆಲ್ಲವನ್ನೂ ನಾನೇ ಬಗೆಹರಿಸಿಕೊಳ್ಳುಳ್ಳುತ್ತೇನೆ" ಎಂದು ಹೇಳಿದ್ದರು.