ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ʻನೀನು ಸುಳ್ಳಿʼ ಎಂದು ಚೈತ್ರಾಗೆ ನೇರವಾಗಿ ಹೇಳಿದ ರಜತ್‌!

Rajath: ಬಿಗ್‌ ಬಾಸ್‌ ಮನೆಯಲ್ಲಿ ಈಗ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ಚೈತ್ರಾ ಕುಂದಾಪುರ ಹಾಗೂ ರಜತ್‌ ಅವರು ಬೇರೆ ಬೇರೆ ಟೀಂನಲ್ಲಿ ಆಡುತ್ತಿದ್ದಾರೆ. ಇಬ್ಬರ ಮಧ್ಯೆ ವಾರ್‌ ಆಗಿದೆ. ಚೈತ್ರಾ ಕುಂದಾಪುರ ಅವರು ರಜತ್ಅ ವರ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ. ನಿಯಮ ಮುರಿದಿದ್ದೂ ಅಲ್ಲದೇ ಅವರು ಸುಳ್ಳು ಕೂಡ ಹೇಳಿದ್ದಾರೆ ಎಂದು ರಜತ್ ಗರಂ ಆಗಿದ್ದಾರೆ.

ʻನೀನು ಸುಳ್ಳಿʼ ಎಂದು ಚೈತ್ರಾಗೆ ನೇರವಾಗಿ ಹೇಳಿದ ರಜತ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 17, 2025 8:44 AM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಈಗ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ಚೈತ್ರಾ ಕುಂದಾಪುರ (Chaithra Kundapura) ಹಾಗೂ ರಜತ್‌ ಅವರು ಬೇರೆ ಬೇರೆ ಟೀಂನಲ್ಲಿ ಆಡುತ್ತಿದ್ದಾರೆ. ಇಬ್ಬರ ಮಧ್ಯೆ ವಾರ್‌ ಆಗಿದೆ. ಚೈತ್ರಾ ಕುಂದಾಪುರ ಅವರು ರಜತ್ (Rajath) ಅವರ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ. ನಿಯಮ ಮುರಿದಿದ್ದೂ ಅಲ್ಲದೇ ಅವರು ಸುಳ್ಳು ಕೂಡ ಹೇಳಿದ್ದಾರೆ ಎಂದು ರಜತ್ ಗರಂ ಆಗಿದ್ದಾರೆ.

ಈವರೆಗೆ ಬಿಗ್ ಬಾಸ್ ಮನೆಯಲ್ಲಿ ಇಂತಹ ಕೆಟ್ಟ ಆಟ ಆಡುವ ಯಾರೊಬ್ಬ ಸ್ಪರ್ಧೆಯೂ ಇರಲಿಲ್ಲ. ಟಾಸ್ಕ್ ನಲ್ಲಿ ಎಲ್ಲರೂ ನ್ಯಾಯಬದ್ಧವಾಗಿ ಆಟ ಆಡುತ್ತಿದ್ದರು. ಇದೀಗ ಚೈತ್ರ ಬಂದ ನಂತರ ಕ್ಯಾಪ್ಟನ್ ಟಾಸ್ಕ್ ಉಸ್ತುವಾರಿ ಹಾಳು ಮಾಡಿದರು. ಇತ್ತೀಚೆಗೆ ಬಿಗ್ ಬಾಸ್ ನೀಡಿದ ಟಾಸ್ಕ್​​ನಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬೇರೆ ಬೇರೆ ತಂಡದಲ್ಲಿ ಆಟ ಆಡುತ್ತಿದ್ದರು. ಆಗ ಅವರಿಬ್ಬರ ನಡುವೆ ಕ್ಲ್ಯಾಶ್ ಆಗಿದೆ.

ಇದನ್ನೂ ಓದಿ: Bigg Boss Kannada 12: ವೀಕೆಂಡ್‌ನಲ್ಲಿ ಕೆಲವರಿಗೆ ಮಾತ್ರ ಸುದೀಪ್ ಬೈಯೋದ್ಯಾಕೆ? ಕೊಟ್ಟರು ಕಾರಣ

ನೀನು ಸುಳ್ಳಿ ಎಂದು ಚೈತ್ರಾಗೆ ಕೂಗಿದ ರಜತ್‌

ಟಾಸ್ಕ್ ಆಡುವಾಗ ನಿಯಮಗಳನ್ನು ಮುರಿದಿದ್ದಾರೆ ಎಂಬುದು ರಜತ್ ಆರೋಪ. ನೀನು ಸುಳ್ಳಿ ಎಂದು ಚೈತ್ರಾಗೆ ಕೂಗಿದ್ದಾರೆ ರಜತ್‌. ನ್ಯಾಯವಾಗಿ ಆಟ ಆಡೋಕೆ ಚೈತ್ರಾಗೆ ಒಮ್ಮೆಯೂ ಆಗಲ್ಲ. ಸೋಲುವ ಸಮಯದಲ್ಲಿ ಮೋಸ ಮಾಡ್ತಾಳೆ ಎಂದು ರಜತ್‌ ಅವರು ಚೈತ್ರಾ ಬಗ್ಗೆ ಹೇಳಿದ್ದಾರೆ.

ಈ ವೇಳೆ ಚೈತ್ರಾ ಅವರು ಫ್ಯಾಮಿಲಿಯನ್ನು ತಂದು ಕೂಗಾಡಿದರು. ಚೈತ್ರಾ ಅವರು ಫ್ಯಾಮಿಲಿ ಬಗ್ಗೆ ಮಾತನಾಡಿದ್ದಕ್ಕೆ ರಜತ್​​ಗೆ ಕೋಪಬಂದಿದೆ. ಆಟ ಆಡೋಕೆ ಯೋಗ್ಯತೆ ಇಲ್ಲದೇ ಇರುವವಳು ನೀನು ಅಂತ ರಜತ್‌ ಕೂಗಾಡಿದ್ದಾರೆ.

ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್‌

ಇದಕ್ಕೂ ಮುಂಚೆ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್‌ ಆಗಿತ್ತು. ಚೈತ್ರಾ ಮತ್ತು ಅಶ್ವಿನಿ ಗೌಡ ನಡುವೆ ಯಾವ ಲೆವೆಲ್‌ಗೆ ಪೈಪೋಟಿ ಇತ್ತು ಎಂದರೆ, ಅಶ್ವಿನಿಗೆ ಪರಚಿ, ಗಿಲ್ಲಿ, ಉಗಿದು ರಂಪಾ ಮಾಡಿದರೆ, ಚೈತ್ರಾ ಅವರ ಕೈಗೆ ಅಶ್ವಿನಿ ಪಟಪಟ ಅಂತ ಹೊಡೆದೇ ಬಿಟ್ಟಿದ್ದಾರೆ! ತಮ್ಮ ಬಟ್ಟೆಯನ್ನು ಅಶ್ವಿನಿ ಎಳೆದರು ಅಂತ ಚೈತ್ರಾ ಕೂಗಾಡಿದರೆ, ಚೈತ್ರಾ ಕುಂದಾಪುರ ನನ್ನ ಕಾಲನ್ನು ಉಗುರಿನಿಂದ ಪರಚಿದ್ರು ಎಂದು ಅಶ್ವಿನಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಪರಚಿದ ಕೈಗೆ ಅಶ್ವಿನಿ ಹೊಡೆದಿದ್ದೂ ಆಗಿದೆ.

ಕೊನೆಗೆ ಚೈತ್ರಾ ಅವರನ್ನು ರಾಶಿಕಾ ನಾಮಿನೇಟ್‌ ಮಾಡಿದ್ದಾರೆ. ಇದರಿಂದ ಕ್ರೋಧಗೊಂಡ ಚೈತ್ರಾ, ರಾಶಿಕಾಗೆ ಹಿಡಿಶಾಪ ಹಾಕಿದ್ದಾರೆ. "ಆಟ ಬದಲಾಯಿಸೋ ಅಧಿಕಾರ ಉಸ್ತುವಾರಿಗೆ ಇಲ್ಲ. ನೀನು ಯಾವ ಉಸ್ತುವಾರಿ ಹೆಸರಿನಲ್ಲಿ ನನ್ನನ್ನ ನಾಮಿನೇಟ್ ಮಾಡಿದಿಯೋ, ಅದೇ ನಿನಗೆ ಕರ್ಮ ರಿಟರ್ನ್ಸ್ ಅನ್ನುವಂತೆ ನಿನಗೆ ಹೊಡೆಯತ್ತೆ" ಎಂದು ರಾಶಿಕಾಗೆ ಚೈತ್ರಾ ಕುಂದಾಪುರ ಶಾಪ ಹಾಕಿದ್ದಾರೆ. ಅಲ್ಲದೆ, "ತಮಗೆ ಬೇಕಾದವರನ್ನ ಸೇಫ್ ಮಾಡಿಕೊಳ್ಳುವ ಇವರಿಗೆ ತಮ್ಮನ್ನ ಉಸ್ತುವಾರಿ ಅಂತ ಕರೆದುಕೊಳ್ಳಲು ಯಾವ ನೈತಿಕತೆ ಇದೆ" ಎಂದು ಆರೋಪ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ವೀಕೆಂಡ್‌ನಲ್ಲಿ ಕೆಲವರಿಗೆ ಮಾತ್ರ ಸುದೀಪ್ ಬೈಯೋದ್ಯಾಕೆ? ಕೊಟ್ಟರು ಕಾರಣ

ಯಾವಾಗ ರಾಶಿಕಾ ನಾಮಿನೇಟ್‌ ಮಾಡಿದರೋ, ರೊಚ್ಚಿಗೆದ್ದ ಚೈತ್ರಾ ಕುಂದಾಪುರ, "ನಾನು ಈಗ ಜಿದ್ದಿಗೆ ಬಿದ್ದಿದ್ದೇನೆ. ಮೋಸದ ಉಸ್ತುವಾರಿ ಮಾಡಿ, ತಮಗೆ ಬೇಕಾದವರನ್ನ ಉಳಿಸಿಕೊಳ್ಳುತ್ತಿದ್ದಾರೆ. ನಾನು ಸಾಯೋದಾದರೆ ಇದೇ ಗ್ರೌಂಡ್‌ನಲ್ಲಿ ಸಾಯ್ತೀನಿ. ಯಾಕೆಂದರೆ, ನನಗೆ ಜೀವನ ಕೊಟ್ಟಿದ್ದೇ ಈ ಮನೆ. ಸಾಯೋದಾದ್ರೆ ನಾನಿಲ್ಲೇ ಸಾಯ್ತೀನಿ" ಅಂತೆಲ್ಲಾ ಬಡಬಡಾಯಿಸಿದ್ದಾರೆ ಚೈತ್ರಾ!