ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ನಟ ರವಿ ತೇಜ; ಈ ಬಾರಿ ಸಂಭಾವನೆಯನ್ನೇ ಮುಟ್ಟದ 'ಮಾಸ್ ಮಹಾರಾಜ', ಕಾರಣವೇನು ಗೊತ್ತಾ?
Ravi Teja: ತೆಲುಗು ನಟ ರವಿ ತೇಜ ಕಳೆದ ಎರಡು ವರ್ಷಗಳಲ್ಲಿ ಐದು ಸಿನಿಮಾಗಳ ಸೋಲನ್ನು ಅನುಭವಿಸಿದ್ದಾರೆ. ಹೀಗಾಗಿ, ಕಿಶೋರ್ ತಿರುಮಲ ನಿರ್ದೇಶನದ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾದ ಗೆಲುವಿಗಾಗಿ ಅವರು ಕಾತರಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಅನ್ನೋದು ವಿಶೇಷ.
-
ತೆಲುಗು ನಟ ರವಿ ತೇಜ ಅವರ ಸಿನಿಮಾಗಳು ಸಾಲಾಗಿ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಕಳೆದ ಎರಡು ವರ್ಷಗಳಲ್ಲಿ ಅವರ 5 ಸಿನಿಮಾಗಳು ತೆರೆಕಂಡಿದ್ದು, ಎಲ್ಲವೂ ಹೇಳಹೆಸರಿಲ್ಲದಂತೆ ನೆಲ ಕಚ್ಚಿವೆ. ಹಾಗಾಗಿ, ಅವರಿಗೆ ಅವಸರವಾಗಿ ಒಂದು ಗೆಲುವಿನ ಅವಶ್ಯಕತೆ ಇದೆ. ಸದ್ಯ ಅವರು ತಮ್ಮ ಗಮನವನ್ನು ಮುಂದಿನ ಸಿನಿಮಾ ʻಭರ್ತ ಮಹಾಶಯುಲಕು ವಿಜ್ಞಪ್ತಿʼ ಮೇಲೆ ನೆಟ್ಟಿದ್ದಾರೆ. ಈ ಚಿತ್ರವು ಜನವರಿ 13ರಂದು ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ. ಕಿಶೋರ್ ತಿರುಮಲ ನಿರ್ದೇಶನದ ಈ ಸಿನಿಮಾಕ್ಕಾಗಿ ರವಿ ತೇಜ ಸಂಭಾವನೆಯನ್ನೇ ಪಡೆದಿಲ್ಲವಂತೆ.
ಸಂಭಾವನೆಯನ್ನೇ ಪಡೆಯದ ರವಿ ತೇಜ
ʻಭರ್ತ ಮಹಾಶಯುಲಕು ವಿಜ್ಞಪ್ತಿʼ ಸಿನಿಮಾವನ್ನು ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಇದನ್ನು ನಿರ್ಮಿಸಿದ್ದಾರೆ. ಈಗಾಗಲೇ ಅನೇಕ ಸೋಲುಗಳನ್ನು ಕಂಡಿರುವ ನಟ ರವಿ ತೇಜ, ಈ ಚಿತ್ರವನ್ನು ಯಾವುದೇ ಸಂಭಾವನೆ ಪಡೆಯದೇ ಮಾಡಿಕೊಟ್ಟಿದ್ದಾರಂತೆ. ಈ ಚಿತ್ರದಿಂದ ಲಾಭ ಬಂದಾಗ ನನಗೆ ಸಂಭಾವನೆ ನೀಡಿ ಎಂದು ನಿರ್ಮಾಪಕರಿಗೆ ಅವರು ಹೇಳಿದ್ದಾರಂತೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ಮತ್ತು ಡಿಂಪಲ್ ಹಯಾತಿ ನಾಯಕಿಯರಾಗಿ ನಟಿಸಿದ್ದಾರೆ.
Bengaluru News: ಪ್ರಿಯಕರನಿಂದ ಲೈಂಗಿಕ ಕಿರುಕುಳ; ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ
ಮಾಸ್ ಮಹಾರಾಜ ಟ್ಯಾಗ್‌ಲೈನ್‌ಗೆ ಕೋಕ್
ಸಾಮಾನ್ಯವಾಗಿ ನಟರರಿಗೆ ಒಂದು 'ಸ್ಟಾರ್' ಟ್ಯಾಗ್ ಇರುತ್ತದೆ. ಅಭಿಮಾನಿಗಳು ತಮ್ಮ ನಾಯಕರನ್ನು ಅವರ ಮೂಲ ಹೆಸರುಗಳಿಗಿಂತ ಹೆಚ್ಚಾಗಿ ಈ ಸ್ಟಾರ್ ಟ್ಯಾಗ್‌ಗಳಿಂದಲೇ ಕರೆಯುತ್ತಾರೆ. ಆ ಟ್ಯಾಗ್ ಅನ್ನು ಚಲನಚಿತ್ರಗಳ ಶೀರ್ಷಿಕೆ ಕಾರ್ಡ್‌ನಲ್ಲಿರುವ ಹೆಸರಿನ ಮೊದಲು ಬಳಸಲಾಗುತ್ತದೆ. ಅದೇ ರೀತಿ, ರವಿತೇಜಗೂ 'ಮಾಸ್ ಮಹಾರಾಜ' ಎಂಬ ಶೀರ್ಷಿಕೆ ಇದೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ಸಿನಿಮಾದಲ್ಲೂ ಅವರಿಗೆ ಈ ಟ್ಯಾಗ್ ನೀಡಲಾಗಿದೆ. ಆದರೆ, ಕಿಶೋರ್ ತಿರುಮಲ ಅವರ ʻಭರ್ತ ಮಹಾಶಯುಲಕು ವಿಜ್ಞಪ್ತಿʼ ಚಿತ್ರಕ್ಕಾಗಿ ಆ ಟ್ಯಾಗ್ ಅನ್ನು ತೆಗೆಯಲಾಗಿದೆಯಂತೆ.
Gatha Vaibhava Movie: ದುಶ್ಯಂತ್-ಆಶಿಕಾ ರಂಗನಾಥ್ ನಟನೆಯ 'ಗತವೈಭವ' ನವೆಂಬರ್ 14ಕ್ಕೆ ರಿಲೀಸ್
"ನಾನು ಕಥೆ ಮತ್ತು ಅದರಲ್ಲಿರುವ ಪಾತ್ರವನ್ನು ಆಧರಿಸಿ ಸಿನಿಮಾ ಮಾಡುತ್ತೇನೆ. ಅದಕ್ಕಾಗಿಯೇ ಈ ಚಿತ್ರದದಲ್ಲಿ 'ಮಾಸ್ ಮಹಾರಾಜ' ಟ್ಯಾಗ್ ಬಳಸಬಾರದು ಎಂದು ರವಿತೇಜ ಎಂದು ಹೇಳಿದ್ದರು. ಸಿನಿಮಾದ ಪೋಸ್ಟರ್‌ಗಳಲ್ಲಿ 'ರವಿ ತೇಜ' ಎಂದಷ್ಟೇ ಬಳಸಬೇಕೆಂದು ಅವರು ಹೇಳಿದ್ದಾರೆ. ಈ ಸಿನಿಮಾ ಪ್ರೇಕ್ಷಕರನ್ನು ಸಂಪೂರ್ಣವಾಗಿ ಮನರಂಜಿಸುವ ಮೂಲಕ ಇದು ಖಂಡಿತವಾಗಿಯೂ ಮೆಚ್ಚಿಸುತ್ತದೆ ಎಂಬ ನಂಬಿಕೆ" ಎಂದು ಕಿಶೋರ್ ತಿರುಮಲ ಹೇಳಿದ್ದಾರೆ.
ಈಗಾಗಲೇ ಈ ಚಿತ್ರದಲ್ಲಿ ರವಿ ತೇಜ ಮತ್ತು ಆಶಿಕಾ ರಂಗನಾಥ್ ಇರುವ ಹಾಡು ಮತ್ತು ಟೀಸರ್ ರಿಲೀಸ್ ಆಗಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಚುಟು ಚುಟು ಬೆಡಗಿ. ಆಶಿಕಾ ಈ ಹಿಂದೆ ನಟಿಸಿದ್ದ ನಾ ಸಾಮಿ ರಂಗ ಚಿತ್ರ ಕೂಡ 2024ರ ಸಂಕ್ರಾಂತಿಗೆ ತೆರೆಕಂಡು ಹಿಟ್ ಆಗಿತ್ತು. ಇದೀಗ 2026ರ ಸಂಕ್ರಾಂತಿಗೆ ಪುನಃ ಆಶಿಕಾ ಅವರು ಎಂಟ್ರಿ ಕೊಡಲಿದ್ದಾರೆ.