ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rishab Shetty: ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ! ಡಿವೈನ್ ಸ್ಟಾರ್ ಕನಸು ನನಸು

Rishab Shetty: ರಿಷಬ್ ಶೆಟ್ಟಿ ಅವರಿಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಬಂದಿವೆ. ಈ ವೇಳೆ 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಯು 'ಕಾಂತಾರ ಅಧ್ಯಾಯ 1' ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಗತ ವೈಭವ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಪಡೆದರು. ಮೂರು ಟ್ರೋಫಿಗಳಿಗೆ ಡಿವೈನ್ ಸ್ಟಾರ್ ರಿಷಬ್ ಮುತ್ತಿಟ್ಟಿದ್ದು ವಿಶೇಷವಾಗಿತ್ತು. ಈ ವೇಳೆ ಕೆರಾಡಿಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ!

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Mar 31, 2026 8:36 AM

ರಿಷಬ್ ಶೆಟ್ಟಿ ಅವರಿಗೆ (Rishab Shetty) ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ (Chandanavana Critic Film Awards) ಬಂದಿವೆ. ಈ ವೇಳೆ 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಯು 'ಕಾಂತಾರ ಅಧ್ಯಾಯ 1' ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಗತ ವೈಭವ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಪಡೆದರು. ಮೂರು ಟ್ರೋಫಿಗಳಿಗೆ ಡಿವೈನ್ ಸ್ಟಾರ್ ರಿಷಬ್ ಮುತ್ತಿಟ್ಟಿದ್ದು ವಿಶೇಷವಾಗಿತ್ತು. ಈ ವೇಳೆ ಕೆರಾಡಿಯಲ್ಲಿ (Keradi) ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಕುಂದಾಪುರದ ಕೆರಾಡಿಯಲ್ಲೇ ಫಿಲ್ಮ್​ ಸಿಟಿ

ಸಾಮಾನ್ಯವಾಗಿ ಸಿನಿಮಾ ನಿರ್ಮಾಣ ಮಾಡುವಾಗ ದೊಡ್ಡ ದೊಡ್ಡ ಫಿಲ್ಮ್​ ಸಿಟಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿಯಲ್ಲೇ ‘ಕಾಂತಾರ 2’ ಚಿತ್ರದ ಸೆಟ್ ನಿರ್ಮಾಣ ಮಾಡಿದರು. ‘ಕಾಂತಾರದ ಬಳಿಕ ಕುಂದಾಪುರ, ಬೈಂದೂರು ಭಾಗ ಫಿಲ್ಮ್ ಸಿಟಿಯಾಗಿ ಬದಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಸಿನಿಮಾ ಶೂಟ್ ಆಗುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ಸಿನಿಮಾದ ಮೇಲಿನ ಗೌರವ ಹೆಚ್ಚಾಗಿದೆ’ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Bhagyalakshmi Serial Kannada: ಕನ್ನಿಕಾ ಅಸಲಿ ಮುಖ ರಿವೀಲ್‌! ಆದಿ ಮುಂದಿನ ನಿರ್ಧಾರ ಏನು?

ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ಅಪಾರ ಪ್ರಕೃತಿ ಸೌಂದರ್ಯವಿದೆ. ಇದನ್ನು ಕೆಲವು ಸಿನಿಮಾಗಳಲ್ಲಿ ಸೆರೆ ಹಿಡಿಯಲಾಗಿದೆ. ಆದರೆ, ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ರಿಷಬ್ ಶೆಟ್ಟಿ ಈ ವೇಳೆ ಹೇಳಿದರು. ಕೆರಾಡಿ ಫಿಲ್ಮ್ ಸಿಟಿಯಲ್ಲಿ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಡೆಯುತ್ತಿವೆ. ಇದನ್ನ ನೋಡಿದಾಗ ತುಂಬಾನೆ ಖುಷಿ ಆಗುತ್ತದೆ ಅಂತಲೂ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಯಾರೆಲ್ಲ ಭಾಗಿ?

ಇದೆ ವೇಳೆ ಜೊತೆಗೆ ಕನ್ನಡದ ಟಾಕಿ ಚಿತ್ರಗಳ ಪ್ರಥಮ ನಾಯಕ ಸುಬ್ಬಯ್ಯ ನಾಯ್ಡು ಅವರ ಮರಿಮೊಮ್ಮಗ ಸುಕ್ರತ್ ಸೃಜನ್ ಲೋಕೇಶ್ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೀವಮಾನ ಸಾಧನೆಯ ಗೌರವವನ್ನು ಹಿರಿಯ ನಿರ್ದೇಶಕ ರಾಜೇಂದ್ರ್ ಸಿಂಗ್ ಬಾಬು ಅವರಿಗೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ್, ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಖ್ಯಾತ ನಿರ್ದೇಶಕ ಬಿ.ಸುರೇಶ್, ಹಿರಿಯ ನಟಿ ಗಿರಿಜಾ ಲೋಕೇಶ್, ಖ್ಯಾತ ನಟಿ ಪೂಜಾ ಗಾಂಧಿ, ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಖ್ಯಾತ ನಟ ಮಾಸ್ಟರ್ ಮಂಜುನಾಥ್ ಟೈಟಲ್ ಸ್ಪಾನ್ಸರ್ ಅಂಬರ್ಸ್ಟೋನ್ ಪ್ರಾಪರ್ಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಯಶ್ವಂತ್ ಕುಮಾರ್, ಕಿರಣ್ ಕುಮಾರ್, ಕೀರ್ತಿ, ಅಶ್ವಸೂರ್ಯ ರಿಯಾಲಿಟಿಸ್ ಡೈರೆಕ್ಟರ್ ಎಸ್ ರಂಜಿತ್ ಕುಮಾರ್ ಅಲೈನ್ಸ್ ಯೂನಿವರ್ಸಿಟಿಯ ರೆಜಿಸ್ಟರ್ ಸುರೇಖಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

ಇದನ್ನೂ ಓದಿ: Shree Gandhada Gudi Serial: ಮುತ್ತು ಬಾಳಲ್ಲಿ ಹೊಸ ಬೆಳಕಿನ ಸೂಚನೆ? ಎಂಟ್ರಿ ಕೊಟ್ಟ 'ಮಿಸ್ ಉತ್ತರ ಕನ್ನಡ' ದೃಷ್ಟಿ ನಾಯಕ್

ಟೈಟಲ್ ಸ್ಪಾನ್ಸರ್ ಆಗಿ ಅಂಬರ್ಸ್ಟೋನ್ ಪ್ರಾಪರ್ಟೀಸ್ ಹಾಗೂ ಕೋ ಸ್ಪಾನ್ಸರ್ ಆಗಿ ಅಶ್ವಸೂರ್ಯ ರಿಯಾಲಿಟಿಸ್ ಪ್ರಶಸ್ತಿ ಸಮಾರಂಭಕ್ಕೆ ಜೊತೆಯಾಗಿತ್ತು.