ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: 'ಟಾಕ್ಸಿಕ್' ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಭಾರಿ ಬೇಡಿಕೆ; ಒಟಿಟಿ ರೈಟ್ಸ್‌ಗಾಗಿ ನೆಟ್‌ಫ್ಲಿಕ್ಸ್‌ - ಪ್ರೈಮ್‌ ನಡುವೆ ಪೈಪೋಟಿ

Toxic Movie Digital Rights: ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಒಟಿಟಿ ಹಕ್ಕುಗಳಿಗಾಗಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ. ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದ ಡಿಜಿಟಲ್‌ ಹಕ್ಕುಗಳು ಇನ್ನೂ ಕೂಡ ಮಾರಾಟವಾಗಿಲ್ಲ. ಹಾಗಾಗಿ, ಯಾರಿಗೆ ಈ ಚಿತ್ರದ ಹಕ್ಕುಗಳು ಸೇರಲಿವೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.

'ಟಾಕ್ಸಿಕ್' ಡಿಜಿಟಲ್ ಹಕ್ಕುಗಳಿಗಾಗಿ ನೆಟ್‌ಫ್ಲಿಕ್ಸ್-ಪ್ರೈಮ್ ನಡುವೆ ಪೈಪೋಟಿ

-

Avinash GR
Avinash GR Apr 22, 2026 4:00 PM

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ ʻಟಾಕ್ಸಿಕ್ʼ‌ ಸಿನಿಮಾವು ದೊಡ್ಡಮಟ್ಟದ ಹೈಪ್‌ ಕ್ರಿಯೆಟ್‌ ಮಾಡುತ್ತಿದೆ. ಜೂನ್‌ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿರುವ ಈ ಸಿನಿಮಾವು ಹಾಲಿವುಡ್‌ ಮಟ್ಟದಲ್ಲೂ ಬಿಡುಗಡೆ ಆಗುತ್ತಿರುವುದು ವಿಶೇಷ. ಅದಕ್ಕೆಂದೇ ಇಂಗ್ಲಿಷ್‌ ವರ್ಷನ್‌ ಕೂಡ ರೆಡಿ ಮಾಡಿಕೊಂಡಿದೆ ಚಿತ್ರತಂಡ. ಈ ನಡುವೆ ಟಾಕ್ಸಿಕ್‌ ಸಿನಿಮಾದ ಡಿಜಿಟಲ್‌ ಹಕ್ಕುಗಳಿಗೆ ಭರ್ಜರಿ ಬೇಡಿಕೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ನಡುವೆ ಪೈಪೋಟಿ

ಹೌದು, 'ಟಾಕ್ಸಿಕ್' ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳ ಮಾರಾಟದ ಮಾತುಕತೆಯು ಇನ್ನೂ ನಡೆಯುತ್ತಿದೆ. ಸಾಮಾನ್ಯವಾಗಿ ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆಗೆ ಬಹಳ ಮುಂಚಿತವಾಗಿಯೇ ಒಟಿಟಿ (OTT) ಹಕ್ಕುಗಳ ಮಾರಾಟವನ್ನು ಮಾಡಿಕೊಳ್ಳುತ್ತವೆ. ಆದರೆ, ಟಾಕ್ಸಿಕ್ ಚಿತ್ರದ ಒಟಿಟಿ ರೈಟ್ಸ್‌ ಇನ್ನೂ ಮಾರಾಟವಾಗಿಲ್ಲ. ಆದರೆ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ತೀವ್ರ ಪೈಪೋಟಿ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಚಿತ್ರದ ಹಕ್ಕುಗಳನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆಯಂತೆ.

ಸಿನಿಮಾಕಾನ್ ವೇದಿಕೆಯಲ್ಲಿ 'ಟಾಕ್ಸಿಕ್' ಚಿತ್ರದ 9 ನಿಮಿಷಗಳ ಪ್ರಿವ್ಯೂ ಪ್ರದರ್ಶನ; ಹಾಲಿವುಡ್ ಮಟ್ಟದಲ್ಲಿ ಯಶ್ ಸಿನಿಮಾ ಹವಾ!

ಇದು ಯಶ್ ಅವರ ಜನಪ್ರಿಯತೆ, ಟಾಕ್ಸಿಕ್‌ ಮೇಲಿನ ನಿರೀಕ್ಷೆ ಎಂಥದ್ದು ಎಂಬುದನ್ನು ಸಾಬೀತು ಮಾಡಿವೆ. ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸದ್ಯಕ್ಕೆ ಯಾವುದೇ ಅಂತಿಮ ಒಪ್ಪಂದಕ್ಕೆ ಬಂದಿಲ್ಲ. ಭಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿರುವುದರಿಂದ, ಚಿತ್ರತಂಡವು ಇನ್ನೂ ಹೆಚ್ಚಿನ ಲಾಭದಾಯಕ ಒಟಿಟಿ ಆಫರ್ ಅನ್ನು ನಿರೀಕ್ಷಿಸುತ್ತಿದೆ. ಉತ್ತಮ ಆರ್ಥಿಕ ಲಾಭ ಅಥವಾ ಅನುಕೂಲಕರ ಒಪ್ಪಂದದ ಷರತ್ತುಗಳನ್ನು ಮಾಡಿಕೊಳ್ಳುವುದು ಕೆವಿಎನ್ ಪ್ರೊಡಕ್ಷನ್ಸ್ ಪ್ಲ್ಯಾನ್‌ ಎನ್ನಲಾಗಿದೆ. ಈಚೆಗಷ್ಟೇ ಪ್ರೈಮ್‌ ವಿಡಿಯೋ ಜೈಲರ್‌ 2 ಹಕ್ಕುಗಳನ್ನು 160 ಕೋಟಿ ರೂ.ಗಳಿಗೆ ಖರೀದಿ ಮಾಡಿತ್ತು. ಈಗ ಟಾಕ್ಸಿಕ್‌ ಸಿನಿಮಾದ ಡಿಜಿಟಲ್‌ ಹಕ್ಕುಗಳು ಎಷ್ಟು ಕೋಟಿಗೆ ಸೇಲ್‌ ಆಗಬಹುದು ಎಂಬ ಕುತೂಹಲ ಎಲ್ಲರದ್ದು.‌

Yash Toxic movie : ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಲು ರಿಲೀಸ್ ದಿನಾಂಕ ಚೇಂಜ್‌; ಯಾವುದು ಆ ಬಾಲಿವುಡ್ ಸ್ಟಾರ್ ಸಿನಿಮಾ ?

ಹಾಲಿವುಡ್‌ನಲ್ಲಿ ಪ್ರಚಾರ ಮಾಡುತ್ತಿರುವ ಯಶ್

ಸದ್ಯಕ್ಕೆ ಈ ಚಿತ್ರದ ಪ್ರಚಾರ ಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ. ಇತ್ತೀಚೆಗೆ ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ 2026 (CinemaCon) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್, ಟಾಕ್ಸಿಕ್‌ ಗ್ಯಾಂಗ್‌ಸ್ಟರ್ ಶೈಲಿಯ ಚಿತ್ರಗಳಿಗೆ ಹೊಸ ವ್ಯಾಖ್ಯಾನ ನೀಡಲಿದೆ ಎಂದು ಬಣ್ಣಿಸಿದ್ದರು. ಈ ಚಿತ್ರದಲ್ಲಿ ಯಶ್ ಅವರ ಪಾತ್ರವು ಹಲವು ಆಯಾಮಗಳನ್ನು ಹೊಂದಿದ್ದು, ಮೊದಲ ಬಾರಿಗೆ ಅವರಿಲ್ಲಿ ದ್ವಿಪಾತ್ರ ಮಾಡಿರುವುದು ವಿಶೇಷ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ದ್ವಿಭಾಷಾ ಚಿತ್ರವು, ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಮುಂತಾದ ಕಲಾವಿದರು ನಟಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ 1940 ರಿಂದ 1970ರ ಕಾಲಘಟ್ಟದ ಕಥೆಯನ್ನು ಒಳಗೊಂಡಿದ್ದು, ಗೋವಾದಲ್ಲಿ ನಡೆಯಲಿದೆ.