ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌KGF ಶ್ರೀನಿಧಿ ಶೆಟ್ಟಿ ಬಳಿಕ ಕನ್ನಡ ಮತ್ತೋರ್ವ `ಸ್ಟಾರ್‌' ನಟಿ ಜೊತೆಗೆ ಕೈಜೋಡಿಸಿದ ತೆಲುಗು ನಟ ನಾನಿ; ಯಾವ ಸಿನಿಮಾ?

ತೆಲುಗು ನಟ, ನಿರ್ಮಾಪಕ ನಾನಿ ಅವರ ಹೊಸದೊಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. 'ದಂಡೋರ' ಖ್ಯಾತಿಯ ಮುರಳಿಕಾಂತ್ ದೇವಸೋತ್ ನಿರ್ದೇಶಿಸಲಿರುವ ಈ ವಿಶಿಷ್ಟ ಸಿನಿಮಾವನ್ನು ನಾನಿ ತಮ್ಮದೇ 'ವಾಲ್ ಪೋಸ್ಟರ್ ಸಿನಿಮಾ' ಬ್ಯಾನರ್ ಅಡಿಯಲ್ಲಿ ಅತ್ಯಂತ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದು, ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್‌ ನಟಿಯೊಬ್ಬರು ನಾಯಕಿಯಾಗಿ ನಟಿಸುತ್ತಿದ್ದಾರೆ.

KGF ಶ್ರೀನಿಧಿ ಶೆಟ್ಟಿ ಬಳಿಕ ನಾನಿ ಕಣ್ಣಿಗೆ ಬಿದ್ದ ಕನ್ನಡದ ಮತ್ತೋರ್ವ ನಟಿ!

-

Avinash GR
Avinash GR Jun 13, 2026 7:47 PM

ತೆಲುಗು ನಟ. ನಿರ್ಮಾಪಕ ನಾನಿ ಅವರು ಈ ಹಿಂದೆ ʻಹಿಟ್‌ 3ʼ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಜೊತೆ ನಟಿಸಿದ್ದರು. ಆ ಸಿನಿಮಾ ದೊಡ್ಡ ಹಿಟ್‌ ಆಗಿತ್ತು. ಕೆಜಿಎಫ್‌ ಬಳಿಕ ಶ್ರೀನಿಧಿ ಶೆಟ್ಟಿ ಅವರಿಗೂ ಮತ್ತೊಂದು ಯಶಸ್ಸು ಸಿಕ್ಕಿತ್ತು. ಇದೀಗ ಕನ್ನಡದ ಮತ್ತೋರ್ವ ಸ್ಟಾರ್ ನಟಿ ಜೊತೆಗೆ ನಾನಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಯಾರವರು? ʻಸಪ್ತ ಸಾಗರಾದಾಚೆ ಎಲ್ಲೋʼ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್!

‘ದಂಡೋರ’ ನಿರ್ಮಾಪಕರ ಜೊತೆ ಹೊಸ ಸಿನಿಮಾ

ಹೌದು, ನಾನಿ ಅವರು ತಮ್ಮದೇ ವಾಲ್ ಪೋಸ್ಟರ್ ಸಿನಿಮಾ ಎಂಬ ಬ್ಯಾನರ್ ಅಡಿಯಲ್ಲಿ ಒಂದು ಚಿತ್ರವನ್ನು ನಿರ್ಮಿಸಲು ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಮುರಳಿಕಾಂತ್ ದೇವಸೋತ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಪಾಸಿಟಿವ್ ಪ್ರತಿಕ್ರಿಯೆ ಪಡೆದಿದ್ದ ಗ್ರಾಮೀಣ ಹಿನ್ನೆಲೆಯ ‘ದಂಡೋರ’ ಚಿತ್ರವನ್ನು ಮುರಳಿಕಾಂತ್ ನಿರ್ದೇಶಿಸಿದ್ದರು. ಇದೀಗ ನಾನಿ ನಿರ್ಮಾಣದ ಸಿನಿಮಾವೊಂದನ್ನು ನಿರ್ದೇಶಿಸಲು ಮುರಳಿಕಾಂತ್ ರೆಡಿಯಾಗಿದ್ದಾರೆ.

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ ; ಶಾಕಿಂಗ್‌ ವಿಚಾರ ರಿವೀಲ್‌!

ರುಕ್ಮಿಣಿ ವಸಂತ್‌ ಗ್ರೀನ್‌ ಸಿಗ್ನಲ್?

ಈ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡದ ನಟಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಈ ಚಿತ್ರದಲ್ಲಿ ನಟಿಸಲು ರುಕ್ಮಿಣಿ ವಸಂತ್‌ ಒಪ್ಪಿದ್ದು, ಈ ಪ್ರಾಜೆಕ್ಟ್‌ ಬಗ್ಗೆ ತುಂಬಾ ಎಕ್ಸೈಟ್‌ ಆಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಆಸಕ್ತಿಕರ ವಿಚಾರ ಏನೆಂದರೆ, ನಾನಿ ಇದರಲ್ಲಿ ಬರೀ ನಿರ್ಮಾಪಕರಾಗಿ ಕೆಲಸ ಮಾಡಲಿದ್ದು, ನಟಿಸುವುದಿಲ್ಲ ಎನ್ನಲಾಗಿದೆ. ಈ ಹಿಂದೆ ಹೊಸಬರಿಗಾಗಿ ಕೋರ್ಟ್‌ ಎಂಬ ಸಿನಿಮಾವನ್ನು ಮಾಡಿದ್ದ ನಾನಿ, ಭರ್ಜರಿ ಲಾಭ ಕಂಡಿದ್ದರು. ಈಗ ನಟಿ ರುಕ್ಮಿಣಿ ವಸಂತ್‌ ಅವರ ಜೊತೆಗೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದು, ಫ್ಯಾನ್ಸ್‌ ನಿರೀಕ್ಷೆ ಜೋರಾಗಿದೆ. ‌

Rukmini Vasanth: ಬಿಕಿನಿ ವಿಡಿಯೋಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರುಕ್ಮಿಣಿ ವಸಂತ್!

ಆಗಸ್ಟ್‌ನಲ್ಲಿ ಶೂಟಿಂಗ್‌ ಆರಂಭವಾಗುವ ಸಾಧ್ಯತೆ

ಸದ್ಯ ಚಿತ್ರತಂಡವು ಚಿತ್ರಕಥೆ ಮತ್ತು ಇತರೆ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಮೂಲಗಳ ಪ್ರಕಾರ, ಮುರಳಿಕಾಂತ್ ಅವರು ಕಥೆಗೆ ಫೈನಲ್‌ ಟಚ್‌ ನೀಡುತ್ತಿದ್ದು, ಜೊತೆಗೆ ಪೋಷಕ ಕಲಾವಿದರು ಮತ್ತು ತಾಂತ್ರಿಕ ತಂಡವನ್ನು ಅಂತಿಮಗೊಳಿಸುತ್ತಿದ್ದಾರೆ. ಚಿತ್ರಕ್ಕೆ ರುಕ್ಮಿಣಿ ವಸಂತ್‌ ನಾಯಕಿಯಾಗಿ ಸೆಲೆಕ್ಟ್‌ ಆಗಿದ್ದರೂ, ಹೀರೋ ಯಾರು ಎಂಬುದನ್ನು ಇನ್ನೂ ಫಿಕ್ಸ್‌ ಆಗಿಲ್ಲ. ಕಥೆಗೆ ಸೂಕ್ತವಾಗಿ ಹೊಂದುವ ಮತ್ತು ಪಾತ್ರಕ್ಕೆ ಜೀವ ತುಂಬಬಲ್ಲ ನಟನಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ. ಈ ಚಿತ್ರದ ಶೂಟಿಂಗ್ ಬಹುಶಃ ಆಗಸ್ಟ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.