ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕಿರಿಕ್‌ ಪಾರ್ಟಿʼ ಖ್ಯಾತಿಯ ಸಂಯುಕ್ತಾ ಹೆಗಡೆಗೆ ಸಿಕ್ತು ಭರ್ಜರಿ ಚಾನ್ಸ್‌; ಸಣ್ಣ ಗ್ಯಾಪ್‌ನ ನಂತರ ತಮಿಳು ನಟ ವಿಕ್ರಮ್‌ ಸಿನಿಮಾದಲ್ಲಿ ಮಿಂಚಿಂಗ್!‌

ತಮಿಳು ನಟ ವಿಕ್ರಮ್‌ ಅವರ 'ಚಿಯಾನ್ 63' ಚಿತ್ರಕ್ಕೆ 'ಕಿರಿಕ್ ಪಾರ್ಟಿ' ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಆಯ್ಕೆ ಆಗಿದ್ದಾರೆ. 'ವೀರ ಧೀರ ಶೂರನ್ 2' ಬಳಿಕ ಒಂದು ವರ್ಷ ಬ್ರೇಕ್ ತಗೊಂಡಿದ್ದ ವಿಕ್ರಮ್ ಈ ಚಿತ್ರದಲ್ಲಿ ಶೆಫ್ ಪಾತ್ರ ಮಾಡುತ್ತಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಡಿ ಈ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಶೂಟಿಂಗ್‌ನಲ್ಲಿ ಸಂಯುಕ್ತಾ ಹೆಗಡೆ ಆಗಲೇ ಭಾಗಿಯಾಗಿದ್ದಾರೆ.

ಸಂಯುಕ್ತಾ ಹೆಗಡೆಗೆ ನಟ ವಿಕ್ರಮ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದೇಗೆ?

-

Avinash GR
Avinash GR Jun 13, 2026 8:40 PM

ಕನ್ನಡದ ʻಕಿರಿಕ್‌ ಪಾರ್ಟಿʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತಗೊಂಡ ನಟಿ ಸಂಯುಕ್ತಾ ಹೆಗಡೆ, ಆನಂತರ ತಮಿಳಿಗೂ ಕಾಲಿಟ್ಟರು. 2022ರವರೆಗೂ ಸಖತ್‌ ಬ್ಯುಸಿ ಆಗಿದ್ದ ಈ ನಟಿ, ಆನಂತರ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. 2024ರಲ್ಲಿ ಅವರ ಕ್ರೀಮ್‌ ಅನ್ನೋ ಸಿನಿಮಾ ತೆರೆಗೆಬಂದಿದ್ದು ಬಿಟ್ಟರೆ, ಕಳೆದ ನಾಲ್ಕು ವರ್ಷಗಳಲ್ಲಿ ಅವರ ಬೇರಾವ ಸಿನಿಮಾವೂ ರಿಲೀಸ್‌ ಆಗಿಲ್ಲ. ಈ ನಡುವೆ ಅವರಿಗೆ ಬಂಪರ್‌ ಅವಕಾಶವೊಂದು ಹುಡುಕಿಕೊಂಡು ಬಂದಿದೆ.

ಆನಂದ್ ಶಂಕರ್ ನಿರ್ದೇಶನದ ಸಿನಿಮಾ

ತಮಿಳು ನಟ ವಿಕ್ರಮ್‌ ಅವರ ಮುಂದಿನ ಸಿನಿಮಾಗೆ (Chiyaan 63) ಮುಹೂರ್ತ ನೆರವೇರಿದ್ದು, ಈ ಸಿನಿಮಾದಲ್ಲಿ ರಿಯಾ ಶಿಬು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರ ಜತೆಗೆ ಸಂಯುಕ್ತಾ ಹೆಗಡೆಗೂ ಈ ಸಿನಿಮಾದಲ್ಲಿ ನಟಿಸುವ ಚಾನ್ಸ್‌ ಸಿಕ್ಕಿದೆ. ಆನಂದ್ ಶಂಕರ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದಲ್ಲೂ ಸಂಯುಕ್ತಾ ಹೆಗಡೆ ಭಾಗಿಯಾಗಿದ್ದಾರೆ. 'ಇರು ಮುಗನ್', 'ಅರಿಮಾ ನಂಬಿ', 'ನೋಟಾ', 'ಎನಿಮಿ'ಯಂತಹ ಚಿತ್ರಗಳನ್ನು ನಿರ್ದೇಶಿಸಿರುವ ಆನಂದ್ ಶಂಕರ್, ಈ ಬಾರಿ ವಿಭಿನ್ನ ಬಗೆಯ ಸ್ಕ್ರಿಪ್ಟ್‌ ಅನ್ನು ಕೈಗೆತ್ತಿಕೊಂಡಿದ್ದಾರಂತೆ. ಅಂದಹಾಗೆ, ಸಂಯುಕ್ತಾ ಹೆಗಡೆ ಅವರು ಸೀರೆ ಧರಿಸಿ, ಪುಶ್-ಅಪ್ಸ್ (Push-ups) ಮಾಡುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ ನಿರ್ದೇಶಕರು ಸಂಯುಕ್ತಾಗೆ ಚಾನ್ಸ್‌ ನೀಡಿದ್ದಾರೆ.

BIFFes: ಕಾರ್ಯಕ್ರಮಕ್ಕೆ ನನ್ನನ್ನ ಕರೆದಿದ್ದು ದೊಡ್ಡ ಗೌರವ! ಸಿನಿಮೋತ್ಸವ ಉದ್ಘಾಟನೆ ವೇಳೆ ರುಕ್ಮಿಣಿ ವಸಂತ್ ಮಾತು

ವಿಕ್ರಮ್‌ ಸರ್‌ ಸರಳತೆ ನನಗಿಷ್ಟ

"ಇತ್ತೀಚೆಗಷ್ಟೇ ನಾವು ಚಿಯಾನ್‌ 63 ಸಿನಿಮಾದ ಚಿತ್ರೀಕರಣವನ್ನು ಶುರು ಮಾಡಿದ್ದೇವೆ. ಮೊದಲ ದಿನವೇ ನಾನು ವಿಕ್ರಮ್ ಅವರನ್ನು ಭೇಟಿಯಾದೆ. ಅಂದು ಅವರಿಗೆ ಶೂಟಿಂಗ್ ಇರಲಿಲ್ಲ. ಆದರೂ ಸಹ ಸೆಟ್‌ಗೆ ಆಗಮಿಸಿದ್ದರು. ಅವರ ಸರಳತೆ ಮತ್ತು ಎಲ್ಲರನ್ನೂ ಮಾತನಾಡಿಸುವ ರೀತಿಗೆ ನಾನು ಮರುಳಾದೆ. ತನ್ನ ಸಾಮರ್ಥ್ಯವನ್ನು ಗುರುತಿಸಿ, ತಮಿಳು ಚಿತ್ರರಂಗ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡಿದೆ" ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸಂಯುಕ್ತಾ ಹೇಳಿಕೊಂಡಿದ್ದಾರೆ.

1‌ ವರ್ಷದ ನಂತರ ಸಿನಿಮಾದ ಶುರು ಮಾಡಿದ ವಿಕ್ರಮ್

ನಟ ವಿಕ್ರಮ್ ಕೊನೆಯದಾಗಿ 2025ರ ಮಾರ್ಚ್ ನಲ್ಲಿ ತೆರೆಕಂಡ 'ವೀರ ಧೀರ ಶೂರನ್: ಪಾರ್ಟ್ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಕೊನೆಯ ಚಿತ್ರ ಬಿಡುಗಡೆಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ವಿಕ್ರಮ್ ಈಗ ಮತ್ತೆ ಶೂಟಿಂಗ್ ಸೆಟ್‌ಗೆ ಮರಳಿದ್ದು, ‘ಚಿಯಾನ್ 63’ ಚಿತ್ರದ ಚಿತ್ರೀಕರಣ ಆರಂಭವಾಗಿದೆ.‌

ಚಿಯಾನ್‌ 63 ಸಿನಿಮಾ ಕುರಿತ ಪೋಸ್ಟ್‌



ವಿಕ್ರಮ್ ಮತ್ತು ಆನಂದ್ ಶಂಕರ್ 10 ವರ್ಷಗಳ ಹಿಂದೆ 'ಇರು ಮುಗನ್' ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ವಿಕ್ರಮ್ ಈ ಸಿನಿಮಾದಲ್ಲಿ ಶೆಫ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸುದೀಪ್‌ ಜೊತೆ ʻಮಾರ್ಕ್‌ʼ ಸಿನಿಮಾ ಮಾಡಿದ್ದ ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕ್ರಮ್‌ ಅವರ ಈ ಹೊಸ ಸಿನಿಮಾ ನಿರ್ಮಾಣವಾಗುತ್ತಿದೆ.