ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sai Durgha Tej: ನಟ ಸಾಯಿ ದುರ್ಗಾ ತೇಜ್‌ಗೆ ನಿಶ್ಚಿತಾರ್ಥ ಸಂಭ್ರಮ: ಡಿಸೆಂಬರ್ 10ಕ್ಕೆ ಅದ್ಧೂರಿ ಕಲ್ಯಾಣ

Sai Durgha Tej: ತೆಲುಗು ಚಿತ್ರರಂಗದ ಖ್ಯಾತ ನಟ ಸಾಯಿ ದುರ್ಗಾ ತೇಜ್ (Sai Durgha Tej) ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬಹುಕಾಲದಿಂದ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಅವರ ಮದುವೆ ವಿಚಾರಕ್ಕೆ ಇದೀಗ ಅಧಿಕೃತವಾಗಿ ಮುನ್ನುಡಿ ಬಿದ್ದಿದೆ. ನವೆಂಬರ್ 5ರ ಗುರುವಾರ ಹೈದರಾಬಾದ್‌ನ (Hydarbad) ಹಿಲ್ಟನ್ ಹೈದರಾಬಾದ್ ಜಿನೋಮ್ ವ್ಯಾಲಿ ರೆಸಾರ್ಟ್‌ನಲ್ಲಿ ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ನಟ ಸಾಯಿ ದುರ್ಗಾ ತೇಜ್‌ಗೆ ನಿಶ್ಚಿತಾರ್ಥ ಸಂಭ್ರಮ

ಸಾಯಿ ದುರ್ಗಾ ತೇಜ್ -

Yashaswi Devadiga
Yashaswi Devadiga Nov 6, 2026 10:32 AM

ತೆಲುಗು ಚಿತ್ರರಂಗದ ಖ್ಯಾತ ನಟ ಸಾಯಿ ದುರ್ಗಾ ತೇಜ್ (Sai Durgha Tej) ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬಹುಕಾಲದಿಂದ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಅವರ ಮದುವೆ ವಿಚಾರಕ್ಕೆ ಇದೀಗ ಅಧಿಕೃತವಾಗಿ ಮುನ್ನುಡಿ ಬಿದ್ದಿದೆ. ನವೆಂಬರ್ 5ರ ಗುರುವಾರ ಹೈದರಾಬಾದ್‌ನ (Hydarbad) ಹಿಲ್ಟನ್ ಹೈದರಾಬಾದ್ ಜಿನೋಮ್ ವ್ಯಾಲಿ ರೆಸಾರ್ಟ್‌ನಲ್ಲಿ ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ತೆಲುಗು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಶುಭ ಸಮಾರಂಭ ನಡೆದಿದೆ. ನಿಶ್ಚಿತಾರ್ಥದ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಬಿಳಿ ಶೆರ್ವಾನಿಯಲ್ಲಿ ಸಾಯಿ ದುರ್ಗಾ ತೇಜ್

ನಿಶ್ಚಿತಾರ್ಥ ಸಮಾರಂಭದಲ್ಲಿ ಸಾಯಿ ದುರ್ಗಾ ತೇಜ್ ಬಿಳಿ ಬಣ್ಣದ ಶೆರ್ವಾನಿ ಧರಿಸಿ ಸುಂದರವಾಗಿ ಕಾಣಿಸಿಕೊಂಡರು. ಇತ್ತ ಕಿರಣ್ ಸಾಂಪ್ರದಾಯಿಕ ಹಸಿರು ಬಣ್ಣದ ಹಾಫ್ ಸೀರೆಯಲ್ಲಿ ಮಿಂಚಿದರು. ಅದಕ್ಕೆ ಹೊಂದಿಕೆಯಾಗುವ ಚಿನ್ನದ ಆಭರಣಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ಕೊನಿಡೆಲಾ ಹಾಗೂ ಅಲ್ಲು ಕುಟುಂಬದ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ಜೋಡಿಯ ಸಂತೋಷದಲ್ಲಿ ಭಾಗಿಯಾಗಿದ್ದು, ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲೋದು ಯಾರು?

ಸಾಯಿ ದುರ್ಗಾ ತೇಜ್ ಅವರ ನಿಶ್ಚಿತಾರ್ಥಕ್ಕೆ ಕುಟುಂಬದ ಹಲವು ಪ್ರಮುಖರು ಆಗಮಿಸಿದ್ದರು. ನಟನ ತಂದೆ ಡಾ. ಶಿವಪ್ರಸಾದ್, ತಾಯಿ ವಿಜಯ ದುರ್ಗಾ ಹಾಗೂ ಸಹೋದರ ವೈಷ್ಣವ್ ತೇಜ್ ಉಪಸ್ಥಿತರಿದ್ದರು.ಇದರ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸುರೇಖಾ ಕೊನಿಡೆಲಾ, ರಾಮ್ ಚರಣ್, ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.ಅಲ್ಲು ಬಾಬಿ ಮತ್ತು ನೀಲಾ ಶಾ, ವರುಣ್ ತೇಜ್, ಲಾವಣ್ಯ ತ್ರಿಪಾಠಿ ಹಾಗೂ ವಾಯುವ್ ತೇಜ್ ಕೂಡ ನಿಶ್ಚಿತಾರ್ಥದ ಸಂಭ್ರಮಕ್ಕೆ ಸಾಕ್ಷಿಯಾದರು.

ಕುಟುಂಬದ ಇತರ ಸದಸ್ಯರಾದ ನಾಗಬಾಬು ಮತ್ತು ಪದ್ಮಜಾ, ನಿಹಾರಿಕಾ ಕೊನಿಡೆಲಾ, ಅಲ್ಲು ಅರವಿಂದ್ ಮತ್ತು ಅಲ್ಲು ನಿರ್ಮಲಾ, ಅಲ್ಲು ಸಿರೀಶ್ ಹಾಗೂ ನಯನಿಕಾ ರೆಡ್ಡಿ, ಅಖಿರಾ ನಂದನ್ ಮತ್ತು ಆಧ್ಯಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ

ಕುಟುಂಬದವರಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಹಲವು ಸ್ನೇಹಿತರು ಮತ್ತು ಗಣ್ಯರು ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.ಮಂಚು ಮನೋಜ್ ಮತ್ತು ಭೂಮಾ ಮೌನಿಕಾ ರೆಡ್ಡಿ, ನವೀನ್ ವಿಜಯ್ ಕೃಷ್ಣ, ಹರ್ಷ ಚೆಮುಡು, ನಿರ್ದೇಶಕ ವೆಂಕಿ ಕುಡುಮುಲ, ನವದೀಪ್ ಹಾಗೂ ನಿರ್ಮಾಪಕ ಹರ್ಷಿತ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು.



ಡಿಸೆಂಬರ್ 10ಕ್ಕೆ ಹಸೆಮಣೆ ಏರಲಿರುವ ಜೋಡಿ!

ಸಾಯಿ ದುರ್ಗಾ ತೇಜ್ ಹಾಗೂ ಕಿರಣ್ ಅವರ ವಿವಾಹವು 2026ರ ಡಿಸೆಂಬರ್ 10ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ನಿಶ್ಚಿತಾರ್ಥದ ಬಳಿಕ ಇದೀಗ ಅಭಿಮಾನಿಗಳ ಗಮನ ಜೋಡಿಯ ವಿವಾಹ ಸಮಾರಂಭದತ್ತ ನೆಟ್ಟಿದೆ.ಸಿನಿಮಾ ವಿಚಾರಕ್ಕೆ ಬಂದರೆ, ಸಾಯಿ ದುರ್ಗಾ ತೇಜ್ ಸದ್ಯ ತಮ್ಮ ಮುಂದಿನ ತೆಲುಗು ಆಕ್ಷನ್ ಡ್ರಾಮಾ ‘ಸಂಬರಾಲ ಯೇಟಿ ಗಟ್ಟು’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Ramayana box office: ‘ಆದಿಪುರುಷ್’ ದಾಖಲೆ ಹಿಂದಿಕ್ಕಲು ವಿಫಲ! ‘ರಾಮಾಯಣ’ ಕಲೆಕ್ಷನ್ ಎಷ್ಟು?

ಈ ಸಿನಿಮಾ 2027ರ ಜನವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ವೈಯಕ್ತಿಕ ಜೀವನದಲ್ಲಿ ಹೊಸ ಪಯಣ ಆರಂಭಿಸಿರುವ ನಟ, ವೃತ್ತಿಜೀವನದಲ್ಲೂ ಹೊಸ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.