Samantha: ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ
Samantha Ruth Prabhu: ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಅಪರೂಪದ ಸ್ವಯಂ ನಿರೋಧಕ ಕಾಯಿಲೆಯೊಂದಿಗೆ ಬದುಕಿದ ಅನುಭವದ ಬಗ್ಗೆ ಆಗಾಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದು ಸುಮಾರು ಎರಡು ವರ್ಷಗಳ ಕಾಲ ಚಲನಚಿತ್ರಗಳಿಂದ ದೂರ ಸರಿಯುವಂತೆ ಮಾಡಿತು. ಈ ಬಾರಿ ಅವರು ತಮ್ಮ ಸಿನಿಮಾದಿಂದಷ್ಟೇ ಅಲ್ಲ, ತಮ್ಮ ಆರೋಗ್ಯದ ಬಗ್ಗೆ ಅವರು ಹಂಚಿಕೊಂಡಿರುವ ನೋವಿನ ಸಂಗತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಸಮಂತಾ -
ನಟಿ ಸಮಂತಾ ರುತ್ ಪ್ರಭು (Samantha) ಅವರು ಮಯೋಸಿಟಿಸ್ ಎಂಬ ಅಪರೂಪದ ಸ್ವಯಂ ನಿರೋಧಕ ಕಾಯಿಲೆಯೊಂದಿಗೆ ಬದುಕಿದ ಅನುಭವದ ಬಗ್ಗೆ ಆಗಾಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದು ಸುಮಾರು ಎರಡು ವರ್ಷಗಳ ಕಾಲ ಚಲನಚಿತ್ರಗಳಿಂದ (Cinema) ದೂರ ಸರಿಯುವಂತೆ ಮಾಡಿತು. ಈ ಬಾರಿ ಅವರು ತಮ್ಮ ಸಿನಿಮಾದಿಂದಷ್ಟೇ ಅಲ್ಲ, ತಮ್ಮ ಆರೋಗ್ಯದ ಬಗ್ಗೆ ಅವರು ಹಂಚಿಕೊಂಡಿರುವ ನೋವಿನ ಸಂಗತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ಕೆಲವು ಸಮಯದಿಂದ ಸಮಂತಾ ವಿಪರೀತವಾಗಿ ತೂಕ ಇಳಿಸಿಕೊಂಡಿರುವುದು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದರು. "ಯಾಕಿಷ್ಟು ಸಣ್ಣಗಾಗಿದ್ದೀರಿ?" ಎಂಬ ಪ್ರಶ್ನೆಗೆ ಈಗ ಸಮಂತಾ ಖಡಕ್ ಮತ್ತು ಭಾವುಕ ಉತ್ತರ ನೀಡಿದ್ದಾರೆ.
ಅತ್ಯಂತ ಸಪ್ಪೆ
"ನಾನು ವಿರಾಮದಲ್ಲಿದ್ದ ಆ ಎರಡು ವರ್ಷಗಳಲ್ಲಿ, ಆಹಾರವು ಪ್ರಚೋದಕವಾಗಿತ್ತು. ನನ್ನ ಜೀರ್ಣಾಂಗವ್ಯೂಹಕ್ಕೆ (Gut) ಸಣ್ಣ ತೊಂದರೆಯಾದರೂ ನನ್ನ ಮಯೋಸಿಟಿಸ್ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ನನ್ನ ಆಹಾರವು ತುಂಬಾ ಸೀಮಿತ ಮತ್ತು ಅತ್ಯಂತ ಸಪ್ಪೆಯಾಯಿತು. ನಾನು ಎರಡು ವರ್ಷಗಳ ಕಾಲ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅದೇ ಆಹಾರವನ್ನು ತಿನ್ನುತ್ತಿದ್ದೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? ಹೇಗಿರಲಿದೆ ಮೂವಿ?
ಆಹಾರದ ಮೇಲೆ ವಿಪರೀತ ನಿರ್ಬಂಧಗಳಿದ್ದ ಸಮಯದಲ್ಲಿ, ವೈದ್ಯರು ಸಮಂತಾ ಅವರಿಗೆ ಸಕ್ಕರೆ ಮತ್ತು ಹಾಲಿನ ಅಂಶವಿಲ್ಲದ 'ಜೆಲಾಟೊ' ಐಸ್‌ಕ್ರೀಮ್ ತಿನ್ನಲು ಅನುಮತಿ ನೀಡಿದ್ದರಂತೆ. ವರ್ಷಗಳ ನಂತರ ಅವರು ತಿಂದ ಮೊದಲ ಸ್ವಾದಿಷ್ಟ ಆಹಾರ ಇದಾಗಿತ್ತು. ಆ ಕ್ಷಣದ ನೆನಪಿಗಾಗಿ ಅವರು ತಮ್ಮ ಬೆಕ್ಕಿಗೆ ಜೆಲಾಟೊ ಎಂದು ಹೆಸರಿಟ್ಟಿದ್ದಾರೆ.
"ಈಗ, ನಾನು ಆರಾಮವಾಗಿ ತಿನ್ನಬಹುದಾದ ಉತ್ತಮ ಸ್ಥಳದಲ್ಲಿದ್ದೇನೆ. ಅತಿಯಾಗಿ ಅಲ್ಲ, ಆದರೆ ತಿನ್ನಿರಿ. ನನ್ನನ್ನು ಯಾವಾಗಲೂ ಕೇಳಲಾಗುತ್ತದೆ, 'ನೀವು ಯಾಕೆ ಇಷ್ಟೊಂದು ತೂಕ ಇಳಿಸಿಕೊಂಡಿದ್ದೀರಿ?' ಯಾರೊಂದಿಗಾದರೂ ಏನಾಗುತ್ತಿದೆ ಎಂದು ಜನರಿಗೆ ನಿಜವಾಗಿಯೂ ತಿಳಿದಿರುವುದಿಲ್ಲ. ನನಗೆ ತಿನ್ನಲು ಇಷ್ಟವಿಲ್ಲ ಅಂತಲ್ಲ, ತಿನ್ನಲು ಆಗುತ್ತಿಲ್ಲ
2022 ರಲ್ಲಿ 'ಯಶೋದಾ' ಚಿತ್ರದ ಪ್ರಚಾರದ ವೇಳೆ ತಮಗೆ ಮಯೋಸಿಟಿಸ್ ಇರುವುದನ್ನು ಸಮಂತಾ ಬಹಿರಂಗಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ಧೈರ್ಯದಿಂದ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದು, ಆಲ್‌ಮೋಸ್ಟ್ ಸುಧಾರಿಸಿದೆ ಎನ್ನಲಾಗಿದೆ.
ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು (ಜೂನ್ 19) ಬಿಡುಗಡೆಯಾಗಿದೆ. ಇದೊಂದು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿ ಸಾಗುವ ಪಕ್ಕಾ ಫ್ಯಾಮಿಲಿ ಕಥೆ. ಕುಟುಂಬಕ್ಕಾಗಿ ಏನನ್ನಾದರೂ ಮಾಡಲು ಸಿದ್ಧಳಾಗಿರುವ ಸೊಸೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ನಡೆಯುವ ದೈನಂದಿನ ಫ್ಯಾಮಿಲಿ ಡ್ರಾಮಾ, ಹಾಸ್ಯ, ಎಮೋಷನ್ಸ್ ಜೊತೆಗೆ ಅನಿರೀಕ್ಷಿತವಾಗಿ ಬರುವ ಪವರ್‌ಫುಲ್ ಆಕ್ಷನ್ ದೃಶ್ಯಗಳ ಸುತ್ತ ಈ ಕಥೆ ಸುತ್ತುತ್ತದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಆಡಿಷನ್ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ
ಸಮಂತಾ ಅವರೊಂದಿಗೆ ಗುಲ್ಶನ್ ದೇವಯ್ಯ, ದಿಗಂತ್, ಶ್ರೀಮುಖಿ, ಲಕ್ಷ್ಮಿ, ಮಂಜೂಷಾ, ಗೌತಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಂತೋಷ್ ನಾರಾಯಣನ್ ಸಂಗೀತ ಹಾಗೂ ಓಂ ಪ್ರಕಾಶ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ.