ಶಿವಮೊಗ್ಗದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಸಮಂತಾ ಹೊಸ ಸಿನಿಮಾ ಶೂಟಿಂಗ್; ಮಲೆನಾಡ ಬಿಸಿಲು ಕಂಡು ʻಬೇಸಿಗೆ ಶುರುವಾಯ್ತುʼ ಎಂದ ಸ್ಯಾಮ್!
Samantha in Shivamogga: ನಟಿ ಸಮಂತಾ ರುತ್ ಪ್ರಭು ಅಭಿನಯಸಿ, ನಿರ್ಮಾಣ ಮಾಡುತ್ತಿರುವ 'ಮಾ ಇಂಟಿ ಬಂಗಾರಂ' ಸಿನಿಮಾದ ಚಿತ್ರೀಕರಣ ಸದ್ಯ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ. ಈ ಶೂಟಿಂಗ್ ಸೆಟ್‌ನಲ್ಲಿಯೇ ಚಿತ್ರತಂಡ ಹೋಳಿ ಹಬ್ಬವನ್ನು ಆಚರಿಸಿಕೊಂಡಿದೆ.
-
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರು ರಾಜ್ ನಿಡಿಮೋರು ಜೊತೆ ವಿವಾಹವಾದ ಮೇಲೆ ಪುನಃ ಸಿನಿಮಾ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ʻಮಾ ಇಂಟಿ ಬಂಗಾರಂʼ ಸಿನಿಮಾಗೆ ನಾಯಕಿಯಾಗಿರುವ ಸಮಂತಾ, ಆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಏನಪ್ಪ ಅಂದರೆ, ಇದರ ಶೂಟಿಂಗ್ ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ.
ನಗರ ಸುತ್ತಮುತ್ತ ಶೂಟಿಂಗ್
ಹೌದು, ʻಮಾ ಇಂಟಿ ಬಂಗಾರಂʼ ಸಿನಿಮಾದ ಶೂಟಿಂಗ್ ಅನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಸುತ್ತಮುತ್ತ ಮಾಡಲಾಗುತ್ತಿದೆ. ಈಚೆಗೆ ಸಿನಿಮಾದ ಸೆಟ್‌ನಲ್ಲಿ ಹೋಳಿ ಹಬ್ಬದ ಆಚರಣೆ ಮಾಡಲಾಗಿದೆ. ಅದರ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿತ್ತು. ವೀಡಿಯೊದಲ್ಲಿ ಸಮಂತಾ ಪಿಚಕಾರಿಯಿಂದ ನೀರು ಹಾರಿಸುವ ಮೂಲಕ ಹೋಳಿ ಆಟದಲ್ಲಿ ಮಿಂದೆದ್ದಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಸಹನಟರು ನೀರಿನ ಬಲೂನ್‌ಗಳನ್ನು ಎಸೆಯುವ ಮೂಲಕ ಇಡೀ ಸೆಟ್ ಅನ್ನು ಕಲರ್‌ಫುಲ್ ಮಾಡಿದ್ದಾರೆ.
Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?
ಅಲ್ಲಿನ ಲೊಕೇಷನ್ ಅನ್ನು ಗಮನಿಸಿದವರಿಗೆ ಇದು ಶಿವಮೊಗ್ಗ ಸುತ್ತಮುತ್ತಲ ಪ್ರದೇಶ ಅನ್ನೋದು ಗೊತ್ತಾಗಿತ್ತು. ಎಷ್ಟು ದಿನ ಶೂಟಿಂಗ್ ನಡೆಯಲಿದೆ? ಕಥೆಯಲ್ಲಿ ಕರ್ನಾಟಕದ ಕನೆಕ್ಷನ್ ಏನಾದರೂ ಇದೆಯಾ? ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
Samantha Ruth Prabhu : ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ? ಸ್ಯಾಮ್ ಕೊಟ್ಟ ಸ್ಪಷ್ಟನೆ ಇದು
ಬಿಸಿಲಿಗೆ ಶಾಕ್ ಆದ ಸಮಂತಾ
ಇನ್ನು, ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೂಟಿಂಗ್ ಸೆಟ್‌ನಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿ, ಹಂಚಿಕೊಂಡಿದ್ದಾರೆ. ಶಿವಮೊಗ್ಗದ ಲೊಕೇಷನ್ ಅನ್ನು ಹಂಚಿಕೊಂಡಿರುವ ಅವರು, ʻಬೇಸಿಗೆ ಶುರುವಾಯ್ತುʼ ಎಂದು ಬರೆದುಕೊಂಡಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ಮಲೆನಾಡ ನಟ ದಿಗಂತ್ ಮಂಚಾಲೆ ನಾಯಕರಾಗಿದ್ದು, ಅವರು ಕೂಡ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
ಈ ಸಿನಿಮಾವನ್ನು ಬಿ. ವಿ. ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇ 15ರಂದು ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ. ಸಮಂತಾ ಪತಿ ರಾಜ್ ನಿಡಿಮೋರು ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದು, ಸಮಂತಾ ಅವರೇ ಇದರ ನಿರ್ಮಾಣ ಮಾಡುತ್ತಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ಸಮಂತಾ ಹೋಳಿ ಸೆಲೆಬ್ರೇಷನ್
ಚಿತ್ರದ ಬಗ್ಗೆ ಸಮಂತಾ ಹೇಳಿದ್ದೇನು?
"ಮಾ ಇಂಟಿ ಬಂಗಾರಂ ಚಿತ್ರವು ಒಬ್ಬ ಮಹಿಳೆಯ ಕಥೆಯನ್ನು ಹೇಳುತ್ತದೆ. ಅವಳ ಧೈರ್ಯದಷ್ಟೇ ಅವಳ ಮೃದುಸ್ವಭಾವವೂ ಅವಳಿಗೆ ಶಕ್ತಿಯಾಗಿರುತ್ತದೆ. ಈ ಪಾತ್ರವನ್ನು ನಿರ್ವಹಿಸುವುದು ಮತ್ತು ನಿರ್ಮಾಪಕಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುವುದು ನನಗೆ ಅತ್ಯಂತ ತೃಪ್ತಿ ನೀಡಿದೆ. ಈ ಚಿತ್ರದ ಕಥೆಯು ಭಾವನಾತ್ಮಕತೆಯಿಂದ ಕೂಡಿದೆ. ಕೌಟುಂಬಿಕ ಅಂಶಗಳಿಗೆ ಆದ್ಯತೆ ನೀಡುತ್ತಾ, ಬದುಕಿನ ಸಹಜ ಕ್ಷಣಗಳನ್ನು ತೋರಿಸುವ ಜೊತೆಗೆ ವಿಭಿನ್ನ ನಿರೂಪಣಾ ಶೈಲಿಯನ್ನು ಈ ಸಿನಿಮಾ ಹೊಂದಿದೆ. ಪ್ರೇಕ್ಷಕರು ಈ ಕಥೆಯೊಂದಿಗೆ ಕನೆಕ್ಟ್ ಆಗುವುದನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ" ಎಂದು ಸಮಂತಾ ಈ ಚಿತ್ರದ ಬಗ್ಗೆ ಹಿಂದೊಮ್ಮೆ ಹೇಳಿದ್ದರು.