Toxic: ಯಶ್ ತೆಗೆದುಕೊಂಡ ಒಂದು ನಿರ್ಧಾರದಿಂದ ಚಿತ್ರರಂಗದ ಲೆಕ್ಕಾಚಾರಗಳೇ ಬುಡಮೇಲು! ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಡೇಟ್ ಕೂಡ ಚೇಂಜ್!
Toxic Effect on Film Releases: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟಿದ್ದು, ಮಾರ್ಚ್ 19ರಂದು ಸಿಕ್ಕಿರುವ ಖಾಲಿ ಜಾಗವನ್ನು ಬಳಸಿಕೊಳ್ಳಲು ಟಾಲಿವುಡ್‌ನ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಸಜ್ಜಾಗಿದ್ದಾರೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅವರ ಟಾಕ್ಸಿಕ್ ಸಿನಿಮಾದ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಮಾರ್ಚ್ 19ರಂದು ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿತ್ತು. ಆದರೆ ರಿಲೀಸ್‌ಗೆ 15 ದಿನ ಬಾಕಿ ಇರುವಾಗಲೇ ದಿನಾಂಕವನ್ನು ಯಶ್ ಬದಲಿಸಿಬಿಟ್ಟರು. ಈ ದೊಡ್ಡ ಬೆಳವಣಿಗೆಯಿಂದ ವಿವಿಧ ಚಿತ್ರರಂಗಗಳ ಹಲವು ಲೆಕ್ಕಾಚಾರಗಳು ಬುಡಮೇಲಾಗಿವೆ. ಅದು ಹೇಗೆ? ಮುಂದೆ ಓದಿ.
ಸಿನಿಮಾಗಳು ಪೋಸ್ಟ್‌ಪೋನ್
ಮಾ.27ರಂದು ತೆರೆಗೆ ಬರಬೇಕಿದ್ದ ಪೆದ್ದಿ ಮತ್ತು ಪ್ಯಾರಡೈಸ್ ಸಿನಿಮಾಗಳು ಮಾ.19ರ ಧುರಂಧರ್ 2 ವರ್ಸಸ್ ಟಾಕ್ಸಿಕ್ ಫೈಟ್‌ನಿಂದಾಗಿ ಪೋಸ್ಟ್ ಆಗಿದ್ದವು. ಆನಂತರ ಮಾ.27ರ ಸ್ಲಾಟ್ ಅನ್ನು ಪವನ್ ಕಲ್ಯಾಣ್ ಉಸ್ತಾದ್ ಭಗತ್ ಸಿಂಗ್ ಆಕ್ರಮಿಸಿಕೊಂಡಿತ್ತು. ಆದರೆ ಟಾಕ್ಸಿಕ್ ಚಿತ್ರವೇ ಪೋಸ್ಟ್‌ಪೋನ್ ಆಗಿದ್ದರಿಂದ ಬೇರೆ ಸಿನಿಮಾಗಳ ರಿಲೀಸ್ ಲೆಕ್ಕಾಚಾರಗಳು ಬದಲಾಗಿವೆ.
Yash: 'ಟಾಕ್ಸಿಕ್' ಜಾಗಕ್ಕೆ 'ಲವ್ ಮಾಕ್‌ಟೇಲ್ 3' ಎಂಟ್ರಿ; ಯುಗಾದಿ ರಜೆಗಳ ಮೇಲೆ ಕಣ್ಣಿಟ್ಟ ʻಡಾರ್ಲಿಂಗ್ʼ ಕೃಷ್ಣ!
ಒಂದು ವಾರ ಪ್ರೀ-ಪೋನ್ ಮಾಡಿಕೊಂಡ ಪವನ್ ಕಲ್ಯಾಣ್
ಆಂಧ್ರ ಪ್ರದೇಶ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವು ಹರೀಶ್ ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿದೆ. ಮೊದಲು ಈ ಚಿತ್ರವನ್ನು ಮಾರ್ಚ್ 26 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯಗಳೂ ನಡೆಯುತ್ತಿದ್ದವು. ಆದರೆ ಈಗ ದಿಢೀರ್ ಆಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ. ಇದೀಗ ಈ ಸಿನಿಮಾವು ಮಾರ್ಚ್ 19ರಂದೇ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
Toxic Movie: 'ಟಾಕ್ಸಿಕ್' ಪೋಸ್ಟ್‌ಪೋನ್; ಕನ್ನಡದಲ್ಲೇ ಬಹಿರಂಗ ಪತ್ರ ಬರೆದ ಪೂಜಾ ಗಾಂಧಿ
ಮಾರ್ಚ್ 19 ರಂದು ಬಿಡುಗಡೆಯಾಗಬೇಕಿದ್ದ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮುಂದೂಡಲ್ಪಟ್ಟಿದ್ದರಿಂದ ಸಿಕ್ಕಿರುವ ಈ ಖಾಲಿ ಸ್ಲಾಟ್ ಅನ್ನು ಬಳಸಿಕೊಳ್ಳಲು ಪವನ್ ಕಲ್ಯಾಣ್ ಅವರ ಸಿನಿಮಾವನ್ನು ಮುಂಚಿತವಾಗಿಯೇ ಬಿಡುಗಡೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅದೇ ರೀತಿ ಕನ್ನಡದ ಲವ್ ಮಾಕ್‌ಟೇಲ್ 3 ಸಿನಿಮಾವು ಏಪ್ರಿಲ್ 10ರಂದು ರಿಲೀಸ್ ಆಗಬೇಕಿತ್ತು. ಆದರೆ ಅದು ಕೂಡ 20 ದಿನ ಹಿಂದಕ್ಕೆ ಬಂದಿದ್ದು, ಮಾ.19ರಂದೇ ರಿಲೀಸ್ ಆಗುತ್ತಿದೆ. ಈ ಎಲ್ಲಾ ಬದಲಾವಣೆಗೆ ಯಶ್ ಅವರ ಒಂದು ನಿರ್ಧಾರ ಕಾರಣವಾಗಿವೆ.
ಹೊಸ ರಿಲೀಸ್ ಡೇಟ್ ಕುರಿತ ಟ್ವೀಟ್
ఈ ఉగాదికి ఉస్తాద్ ఊచకోత 🔥🔥
— Mythri Movie Makers (@MythriOfficial) March 5, 2026
Our USTAAD arrives a week early to spark Massive celebrations at the box office 💥#UstaadBhagatSingh GRAND RELEASE WORLDWIDE ON 19th MARCH, 2026.#UBSOnMarch19th
POWER STAR @PawanKalyan @harish2you @sreeleela14 #RaashiiKhanna @ThisIsDSP… pic.twitter.com/G6AoBLqxVq
‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಬಗ್ಗೆ..
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಲೀಲಾ ಮತ್ತು ರಾಶಿ ಖನ್ನಾ ನಾಯಕಿಯರಾಗಿ ನಟಿಸಿದ್ದಾರೆ. ಪಾರ್ಥಿಬನ್, ಕೆ. ಎಸ್. ರವಿಕುಮಾರ್, ರಾವ್ ರಮೇಶ್, ರಾಂಕಿ ಮತ್ತು ಕೆಜಿಎಫ್ ಖ್ಯಾತಿಯ ಅವಿನಾಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವಿಶ್ರೀ ಪ್ರಸಾದ್ ಹಾಡುಗಳಿಗೆ ಸಂಗೀತ ನೀಡಿದ್ದರೆ, ಎಸ್. ಥಮನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.