Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!
Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹಾಗೂ ಗೌತಮ್ ಮೇಲೆ ಕಥೆ ಸಾಗುತ್ತಿದೆ. ಮಲ್ಲಿ ಸಿವಿಲ್ ಎಕ್ಸಾಮ್ ವಿಚಾರವಾಗಿ ಭೂಮಿಕಾ ಸಖತ್ ಕೇರ್ ಮಾಡ್ತಿದ್ದಾಳೆ. ಇನ್ನೊಂದು ಕಡೆ ಗೌತಮ್ ಬ್ಯುಸಿನೆಸ್‌ಗೆ ಕೈ ಹಾಕಿದ್ದಾನೆ. ಜೈದೇವ್‌ಗೆ ಇದು ನುಂಗಲಾರದ ತುತ್ತಾಗಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial) ಧಾರಾವಾಹಿಯಲ್ಲಿ ಮಲ್ಲಿ (Malli Gowtham) ಹಾಗೂ ಗೌತಮ್ ಮೇಲೆ ಕಥೆ ಸಾಗುತ್ತಿದೆ. ಮಲ್ಲಿ ಸಿವಿಲ್ ಎಕ್ಸಾಮ್ ವಿಚಾರವಾಗಿ ಭೂಮಿಕಾ ಸಖತ್ ಕೇರ್ ಮಾಡ್ತಿದ್ದಾಳೆ. ಇನ್ನೊಂದು ಕಡೆ ಗೌತಮ್ (Gowtham Business) ಬ್ಯುಸಿನೆಸ್‌ಗೆ ಕೈ ಹಾಕಿದ್ದಾನೆ. ಜೈದೇವ್‌ಗೆ (Jaidev) ಇದು ನುಂಗಲಾರದ ತುತ್ತಾಗಿದೆ.
ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!
ಮಲ್ಲಿಯನ್ನು ಭೂಮಿಕಾ ಹಾಗೂ ಗೌತಮ್ ಮಗಳಂತೆ ನೋಡುತ್ತಿದ್ದಾರೆ. ಮಲ್ಲಿ ಈಗ ಸಿವಿಲ್ ಪರೀಕ್ಷೆಗೆ ತಯಾರಾಗುತ್ತಿದ್ದಾಳೆ. ಅದರಲ್ಲೂ ಭೂಮಿಕಾ ಮಲ್ಲಿ ಏಕ್ಸಾಮ್ ಬಗ್ಗೆ ಮುತುವರ್ಜಿ ವಹಿಸಿಸುತ್ತಿದ್ದಾಳೆ. ಅತ್ತ ಗೌತಮ್ ಕೂಡ ಮಲ್ಲಿ ಜೀವನ ಸರಿ ಹೋಗಬೇಕು ಎಂದು ಜೈದೇವ್ ಡಿವೋರ್ಸ್ ವಿಚಾರವಾಗಿ, ತಂದೆಯ ಸಮಾಧಿಯನ್ನೇ ಜೈದೇವ್‌ಗೆ ಬಿಟ್ಟು ಕೊಟ್ಟಿದ್ದಾನೆ.
ಇದನ್ನೂ ಓದಿ: Trisha Krishnan: ಬಹಿರಂಗ ವೇದಿಕೆಯಲ್ಲೇ ತ್ರಿಷಾ ಬಗ್ಗೆ ಪಾರ್ತಿಬನ್ ವ್ಯಂಗ್ಯ; ಖಡಕ್ ಆಗಿ ತಿರುಗೇಟು ಕೊಟ್ಟ ನಟಿ!
ಈ ಎಲ್ಲ ವಿಚಾರಗಳು ಮಲ್ಲಿ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ ಭೂಮಿಕಾ ಜೊತೆ ಈ ಬಗ್ಗೆ ಬೇಸರ ಕೂಡ ವ್ಯಕ್ತಪಡಿಸಿದ್ದಾಳೆ. ಇನ್ನೊಂದು ಕಡೆ ಭೂಮಿಕಾ ತಾಯಿಯೂ ಕಾಲ್ ಮಾಡಿದಾಗ, ಭೂಮಿಕಾ ಮಲ್ಲಿ ಬಗ್ಗೆಯೇ ಯೋಚನೆ ಮಾಡ್ತಾ ಇದ್ದಾಳೆ.
ಮಲ್ಲಿಗೆ ಪರೀಕ್ಷೆ ಬರೆಯಲು ತೊಂದರೆ
ಗೌತಮ್ ಈಗಾಗಲೇ ಮಲ್ಲಿ ತಂಟೆಗೆ ಬರಬೇಡ ಅಂತ ಜೈದೇವ್‌ಗೆ ವಾರ್ನ್ ಮಾಡಿದ್ದರೂ ಸುಮ್ಮನಾಗುತ್ತಿಲ್ಲ. ಮಲ್ಲಿ ಪರೀಕ್ಷೆ ಬರೆಯದಂತೆ ತೊಂದರೆ ಕೊಡುತ್ತಿದ್ದಾನೆ ಜೈದೇವ್. ಮೊದಲಿಗೆ ಸುನಿಯನ್ನ ಕಳಿಸಿದ್ದರೂ ಆ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಹೀಗಾಗಿ ತಾನೇ ಈಗ ಮಲ್ಲಿ ಏಕ್ಸಾಮ್ ಹಾಳು ಮಾಡಲು ನಿಂತಿದ್ದಾನೆ ಜೈದೇವ್.
ಗೌತಮ್ ಹೊಸ ಹೆಜ್ಜೆ
ಗೌತಮ್ ಈಗ ಬ್ಯುಸಿನೆಸ್ ಮಾಡಲು ನಿರ್ಧಾರ ಮಾಡಿದ್ದಾನೆ. ಬ್ರೋಕರ್ ಆ್ಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯ ಸ್ಟಾರ್ಟ್ಅಪ್. ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ. ಹೊಸ ಆಫೀಸ್ ಕೂಡ ನೋಡಿ ಇಟ್ಟಿದ್ದಾನೆ ಗೌತಮ್. ಸ್ನೇಹಿತ ಆನಂದ್‌ಗೆ ಹೊಸ ಆಫೀಸ್ ಹಾಗೂ ತನ್ನ ಪ್ಲ್ಯಾನ್ ಅನ್ನು ವಿವರಿಸಿದ್ದಾನೆ. ಅಷ್ಟೇ ಅಲ್ಲ ಸ್ನೇಹಿತ ಆನಂದ್‌ನನ್ನು ಬ್ಯುಸಿನೆಸ್ ಪಾರ್ಟನರ್ ಆಗಿ ಮಾಡಿಕೊಂಡಿದ್ದಾನೆ. ಈ ಸಮಯದಲ್ಲಿ ತನ್ನ ಸ್ನೇಹವನ್ನು ಮರೆದಿದ್ದಾನೆ ಗೌತಮ್.
ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಜೈದೇವ್‌ಗೆ ಭಯ ಶುರುವಾಗಿದೆ. ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು. ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ. ಈ ಕಂಪನಿ ಆರಂಭಿಸಿ ಗೌತಮ್ ಎಲ್ಲರಿಗೂ ಸಂದರ್ಶನ ಕೊಡುತ್ತಿದ್ದಾನೆ. ಇದನ್ನು ನೋಡಿ ಜಯದೇವ್ಗೆ ಟೆನ್ಶನ್ ಶುರುವಾಗಿದೆ. ಗೌತಮ್ ಕಂಪನಿ ಆರಂಭಿಸುತ್ತಿದ್ದಂತೆ ಜಯದೇವ್ಗೆ ಟೆನ್ಶನ್ ಶುರುವಾಗಿದೆ.
ಇದನ್ನೂ ಓದಿ: Landlord movie OTT: 'ಲ್ಯಾಂಡ್‌ಲಾರ್ಡ್' ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್ ಎಲ್ಲಿ?
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.