ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

Amruthadhaare Serial: ಅಮೃತಧಾರೆಯಲ್ಲಿ ಗೌತಮ್‌ ಹಾಗೂ ಭೂಮಿ ಮಿಂಚು ವಿಚಾರವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಿಂಚುನೇ ತನ್ನ ಮಗಳು ಅನ್ನೋ ವಿಚಾರ ಭೂಮಿ ಗೌತಮ್‌ಗೆ ಇನ್ನೂ ಗೊತ್ತಿಲ್ಲ. ಹೀಗಿರುವಾಗ ಮಹಿಮಾಳಿಗೆ ದತ್ತು ಕೊಡಲು ಮುಂದಾಗಿದ್ದಾರೆ. ಅಪ್ಪನಾಗಿ ಸೋತೆ ಎಂದಯ ಗೌತಮ್‌ ಭಾವುಕನಾಗಿದ್ದಾನೆ.

ಅಪ್ಪನಾಗಿ ಸೋತೆ ಎಂದು ಭಾವುಕನಾದ ಗೌತಮ್‌; ಮತ್ತೆ ಜೆಡಿ ಅಟ್ಟಹಾಸ ಶುರು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 2, 2026 10:41 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್‌ ಹಾಗೂ ಭೂಮಿ ಮಿಂಚು ವಿಚಾರವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಿಂಚುನೇ ತನ್ನ ಮಗಳು ಅನ್ನೋ ವಿಚಾರ ಭೂಮಿ (Bhoomi Gowtham) ಗೌತಮ್‌ಗೆ ಇನ್ನೂ ಗೊತ್ತಿಲ್ಲ. ಹೀಗಿರುವಾಗ ಮಹಿಮಾಳಿಗೆ ದತ್ತು ಕೊಡಲು ಮುಂದಾಗಿದ್ದಾರೆ. ಅಪ್ಪನಾಗಿ ಸೋತೆ ಎಂದಯ ಗೌತಮ್‌ ಭಾವುಕನಾಗಿದ್ದಾನೆ.

ಕಣ್ಣೀರಿಟ್ಟ ಮಿಂಚು

ಮಿಂಚು ಈಗ ಮಹಿಮಾ ಮನೆಗೆ ಹೋಗಬೇಕಿದೆ. ಗೌತಮ್‌ ಹಾಗೂ ಭೂಮಿ ದತ್ತು ಕೊಡುವ ವಿಚಾರವೂ ಮಿಂಚುಗೆ ಗೊತ್ತು. ಆಕಾಶ್‌ ಬಳಿ, ಇನ್ನು ಎಂದಿಗೂ ಈ ಮನೆಗೆ ವಾಪಸ್‌ ಬರುವುದಿಲ್ಲ ಎಂದಿದ್ದಾಳೆ ಮಿಂಚು. ಆದರೆ ಗೌತಮ್‌ ಹಾಗೂ ಭೂಮಿ, ಕೆಲವೇ ದಿನ ಮಹಿ ಮನೆಯಲ್ಲಿ ಇದ್ದರೆ ಸಾಕು ಎಂದು ಕನ್ವಿನ್ಸ್‌ ಮಾಡಿದ್ದಾರೆ.ಆದರೂ ಮಿಂಚು ಮಾತ್ರ ಇದನ್ನು ನಂಬಿಲ್ಲ.

ಇದನ್ನೂ ಓದಿ: Ravi Mohan: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

ದತ್ತು ಕೊಡಲು ನಿರ್ಧರಿಸಿದ ಗೌತಮ್‌

ಇನ್ನೊಂದು ಕಡೆ ಗೌತಮ್‌ ಪೇಪರ್ಸ್‌ ರೆಡಿ ಮಾಡಿದ್ದಾನೆ. ಇದನ್ನು ನೋಡಿ ಭೂಮಿಕಾ, ಇವತ್ತು ನಾನು ಪೇಪರ್ಸ್‌ ಕೊಡುತ್ತಿದ್ದೀವಾ? ಅಥವಾ ಜೀವನವನ್ನೇ ಕೊಡುತ್ತಿದ್ದೀವಾ? ಎಂದು ಗೌತಮ್‌ ಬಳಿ ಕೇಳಿದ್ದಾಳೆ.

ಅದಕ್ಕೆ ಗೌತಮ್‌, ಜೀವನವನ್ನೇ ಕೊಡುತ್ತಿದ್ದೇವೆ. ಯಾವಾಗಲೂ ಖುಷಿ ಬೇಕು ಅಂದರೆ ಆಗುವುದಿಲ್ಲ. ನಾವು ಕರೆದ ಕಡೆ ಜೀವನ ಬರೋದಿಲ್ಲ. ಜೀವನ ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಅಲ್ಲಿಗೆ ಹೋಗಬೇಕು. ಮಿಂಚು ಬಿಟ್ಟು ಕೊಡಲೇಬೇಕು. ಅಪ್ಪನಾಗಿ ನಾನು ಸೋತೆ. ಮಗಳನ್ನು ಉಳಿಸಿಕೊಳ್ಳಲು ಆಗಿಲ್ಲ ಎಂದು ಭಾವುಕನಾಗಿದ್ದಾನೆ ಗೌತಮ್‌.

ದಿಯಾಳ ಕೊಲೆ ಮಾಡಿದ ಜೈದೇವ್​

ಜೈದೇವ್‌ಗೆ ಮಿಂಚು ಬಗ್ಗೆ ಗೊತ್ತಾಗಿದೆ, ಶಕುನಿ ಮಾಮಾಗೆ ಟಾರ್ಚರ್‌ ಕೊಟ್ಟಿರುವ ಬಗ್ಗೆ ದಿಯಾಗೆ ಗೊತ್ತಾಗಿದೆ. ಅಷ್ಟೇ ಅಲ್ಲ ಜೈದೇವ್‌ಗೆ ಈ ಕುರಿತು ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾಳೆ. ಅತ್ತ ದಿಯಾ ಕೂಡ ಇದೆಲ್ಲ ನೋಡಿ, ಈ ವಿಚಾರವನ್ನು ಗೌತಮ್‌ಗೆ ತಿಳಿಸುವೆ ಎಂದು ಕಾಲ್‌ ಮಾಡಲು ಹೋಗಿದ್ದಾಳೆ.



ಆದರೆ ಅಷ್ಟೊತ್ತಿಗೆ ಆಗಲೇ ಜೈದೇವನಿಗೆ ಮೋಸ ಮಾಡಿದ ಪತ್ನಿ ದಿಯಾಳನ್ನು ಸಾಯಿಸಿಬಿಟ್ಟಿದ್ದಾನೆ ಜೈದೇವ್​. ಅವಳ ಆಸ್ತಿಯ ಬಗ್ಗೆ ತಿಳಿದುಕೊಂಡು ಆಕೆಯನ್ನು ಸಾಯಿಸಲು ಪ್ಲ್ಯಾನ್​​ ಹಾಕಿದ್ದ. ಆದರೆ, ದುಡ್ಡು ಎಲ್ಲಿದೆ ತಿಳಿದುಕೊಳ್ಳುವ ಮೊದಲೇ ಆಕೆಯನ್ನು ಸಾಯಿಸಿಬಿಟ್ಟಿದ್ದಾನೆ.

ಮುಂದೆ ಜೈದೇವ್‌ ಏನು ಮಾಡ್ತಾನೆ? ಮಿಂಚು ಪ್ರಾಣಕ್ಕೆ ಅಪಾಯ ತರ್ತಾನಾ? ಗೌತಮ್‌ಗೆ ಈ ವಿಚಾರ ಗೊತ್ತಾಗೋದು ಹೇಗೆ? ಶಕುನಿ ಮಾಮ ತಪ್ಪಿಸಿಕೊಂಡು ಎಲ್ಲ ವಿಚಾರ ಹೇಳ್ತಾನಾ? ಮಿಂಚುನಿಂದಾಗಿ ಗೌತಮ್‌ ಪ್ರಾಣಕ್ಕೆ ಅಪಾಯ ಇದೆಯಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Kushboo Sundar: ಮೋದಿ ಭೇಟಿ ಆದ ನಟಿ ಖುಷ್ಬೂ ಸುಂದರ್!‌ ಮಗಳ ಮದುವೆಗೆ ಆಹ್ವಾನ

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ