ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಅಯ್ಯಯ್ಯೋ, ಸಲ್ಲು ಭಾಯ್‌ಗೆ ಏನಾಗಿಹೋಯ್ತು?ʼ; ಸಲ್ಮಾನ್‌ ಖಾನ್‌ ಲುಕ್‌ ನೋಡಿ ಗಾಬರಿಬಿದ್ದ ಅಭಿಮಾನಿಗಳು!

ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ ಕಚೇರಿಯ ಐಟಿ ಸರ್ವರ್ ರೂಮ್ ಉದ್ಘಾಟನೆ ವೇಳೆ ತೀರಾ ಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಕ್ಲೀನ್ ಶೇವ್ ಹಾಗೂ ಸಿಂಪಲ್ ಶರ್ಟ್ ಧರಿಸಿದ್ದ ಸಲ್ಮಾನ್ ಅವರ ವಯಸ್ಸಾದ ಲುಕ್ ನೋಡಿ ಆತಂಕಗೊಂಡಿರುವ ಅಭಿಮಾನಿಗಳು, ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾಯ್‌ಜಾನ್‌ಗೆ ಏನಾಯ್ತು?; ಸಲ್ಮಾನ್ ಖಾನ್ ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್!

-

Avinash GR
Avinash GR Jul 19, 2026 1:31 PM

ನಟ ಸಲ್ಮಾನ್ ಖಾನ್ ಇತ್ತೀಚೆಗೆ ಸಾರ್ವಜನಿಕವಾಗಿ ತೀರಾ ಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತೆರೆಮೇಲೆ ತಮ್ಮ ಗತ್ತು ಹಾಗೂ ಇಂಟೆನ್ಸ್ ಲುಕ್‌ನಿಂದಲೇ ಗುರುತಿಸಿಕೊಳ್ಳುತ್ತಿದ್ದ 'ಭಾಯ್ ಜಾನ್' ಅವರ ಈ ದಿಢೀರ್ ಬದಲಾವಣೆ ಅಭಿಮಾನಿಗಳಲ್ಲಿ ಗೊಂದಲ ಮತ್ತು ಆತಂಕವನ್ನು ಮೂಡಿಸಿದೆ.

ಎಸ್‌ಆರ್‌ಎ ಕಚೇರಿ ಉದ್ಘಾಟನೆ ವೇಳೆ ಮೂಡಿದ ಅಚ್ಚರಿ

ಕಳೆದ ಶುಕ್ರವಾರ (ಜುಲೈ 17) ರಾತ್ರಿ ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ (SRA) ಕಚೇರಿಗೆ ಭೇಟಿ ನೀಡಿದ್ದ ಸಲ್ಮಾನ್ ಖಾನ್, ಅಲ್ಲಿನ ಅತ್ಯಾಧುನಿಕ ಐಟಿ ಸರ್ವರ್ ರೂಮ್ ಒಳಗೊಂಡ ಹೊಸ 'ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಶನ್ ಸಪೋರ್ಟ್ ಸೆಂಟರ್' ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಯಾವಾಗಲೂ ಸ್ಟೈಲಿಶ್ ಆಗಿ ಮಿಂಚುತ್ತಿದ್ದ ನಟ, ತೀರಾ ಸಿಂಪಲ್ ಶರ್ಟ್ ಧರಿಸಿ ಬಂದಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಸಂಪೂರ್ಣವಾಗಿ ಕ್ಲೀನ್ ಶೇವ್ ಮಾಡಿಕೊಂಡಿದ್ದರಿಂದ, ಮೊದಲ ನೋಟದಲ್ಲಿ ಅವರನ್ನು ಗುರುತಿಸುವುದೇ ಅಭಿಮಾನಿಗಳಿಗೆ ಕಷ್ಟಕರವಾಗಿತ್ತು.

ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅಭಿಮಾನಿಗಳು

ಎಸ್‌ಆರ್‌ಎ ಕಚೇರಿಯ ಈ ಫೋಟೋ ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡಲು ಆರಂಭಿಸುತ್ತಿದ್ದಂತೆಯೇ ಜಾಲತಾಣಗಳು ಕಮೆಂಟ್‌ಗಳಿಂದ ತುಂಬಿಹೋಗಿವೆ. ಸಲ್ಮಾನ್ ಖಾನ್ ಅವರ ಈ ಹಠಾತ್ ಬದಲಾವಣೆಯ ಹಿಂದೆ ಏನಾದರೂ ಬಲವಾದ ಕಾರಣವಿದೆಯೇ ಅಥವಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂದು ಹಲವರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ.‌

ಸಲ್ಮಾನ್‌ ಖಾನ್‌ ಅವರ ಹೊಸ ವಿಡಿಯೋ

ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಏನಂದ್ರು?

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು, "ಭಾಯ್ ಯಾಕೋ ಒಂಥರಾ ಕಾಣುತ್ತಿದ್ದಾರೆ. ಸಮಯ ಯಾರಿಗಾಗಿಯೂ ಕಾಯಲ್ಲ, ಇನ್ಮುಂದೆ ಇವರು ಹೀರೋ ಪಾತ್ರಗಳನ್ನು ಮಾಡುವುದನ್ನು ನಿಲ್ಲಿಸಬೇಕು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, "ಮೊದಲ ನೋಟದಲ್ಲಿ ಇದು ಸಲ್ಮಾನ್ ಖಾನ್ ಎಂದು ನಂಬಲು ಸಾಧ್ಯವಾಗಲಿಲ್ಲ, ಅವರ ಬಾಡಿಗಾರ್ಡ್ ಶೇರಾ ಇರುವುದನ್ನು ನೋಡಿ ಖಚಿತಪಡಿಸಿಕೊಂಡೆ. ಇವರು ಧರ್ಮೇಂದ್ರ ಅವರಂತೆ ವಯಸ್ಸಾಗುತ್ತಾ ಸಾಗುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

Salman Khan: ಆಮೀರ್‌ ಖಾನ್‌ ಕಾಲೆಳೆದ ಸಲ್ಮಾನ್‌ ಖಾನ್‌; ಫುಲ್‌ ವೈರಲ್‌ ಆಗ್ತಿದೆ ಈ ವಿಡಿಯೊ

ಇನ್ನು ಕೆಲವರು ಸಲ್ಮಾನ್ ಅವರ ಕಣ್ಣುಗಳು ತೀರಾ ಸುಸ್ತಾದಂತೆ ಕಾಣುತ್ತಿದ್ದು, ಅವರ ಎಂದಿನ ಗತ್ತು ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದು, "ನನ್ನ ರಾಜನಿಗೆ ಏನಾಗಿದೆ? ಅವರ ಆರೋಗ್ಯ ಎಲ್ಲವೂ ಸರಿಯಾಗಿದೆಯೇ?" ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅವರ ಈ ವಿಭಿನ್ನ ಲುಕ್‌ನ ವಿಡಿಯೋ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.