ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಕಾಲೇಜ್​ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

ಅಶ್ವಿನಿ ಹಾಗೂ ಜಾನ್ವಿ ಟಾಸ್ಕ್ನಲ್ಲಿ ಎಳೆದುಕೊಂಡು ಆಡುತ್ತಿದ್ದು, ಇದರ ಮಧ್ಯೆ ಪ್ರೀತಿಯ ಕುರಿತು ಇಬ್ಬರೂ ಮಾತನಾಡಿದ್ದಾರೆ. ನಿಸ್ವಾರ್ಥದಿಂದ ನಾವು ಕೊಡುವಂತದ್ದೇ ಒಂದು ಪ್ರೀತಿ. ಎಷ್ಟೋ ಸಂದರ್ಭಗಳಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ಬೆನ್ನ ಹಿಂದೆ ಪಿತೂರಿ ಮಾಡೋ ದುಶ್ಮನ್ಗಳಿರುತ್ತಾರೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

Ashwini and Jhanvi -

Profile Vinay Bhat Oct 28, 2025 3:30 PM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಐದನೇ ವಾರ ನಡೆಯುತ್ತಿದ್ದು, ಸ್ಪರ್ಧಿಗಳು ಸ್ನೇಹ-ಪ್ರೀತಿ ಬಿಟ್ಟು ಇದೀಗ ಅಸಲಿ ಆಟ ಶುರುಹಚ್ಚಿಕೊಂಡಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಅಶ್ವಿನಿ ಗೌಡ-ಜಾನ್ವಿ. ಮೊದಲ ದಿನದಿಂದ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಕ್ಲೋಸ್ ಇದ್ದ ಅಶ್ವಿನಿ ಗೌಡ ಹಾಗೂ ಜಾನ್ವಿ ಸ್ನೇಹದ ಮಧ್ಯೆ ಈಗ ಭಿರುಕು ಮೂಡಿದೆ. ಇಬ್ಬರೂ ಪರಸ್ಪರ ಪರೋಕ್ಷವಾಗಿ ದೂರುತ್ತಿದ್ದಾರೆ. ಬಿಗ್ ಬಾಸ್ ಮನೆಯ ಈ ವಾರದ ಬಿಗ್ ಬಾಸ್ ಸ್ಕೂಲ್ ಟಾಸ್ಕ್​ನಲ್ಲೂ ಇದು ಮುಂದೆವರೆದಿದೆ.

ನಿನ್ನೆ ಜಾನ್ವಿ ಹಾಗೂ ಅಶ್ವಿನಿ ಮಧ್ಯೆ ಬೆಂಕಿ ಹತ್ತಿಕೊಂಡಿತ್ತು. ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಏಕೆ ಯೋಗ್ಯರಲ್ಲ ಎಂದು ಸೂಕ್ತ ಕಾರಣ ನೀಡಿ ಹೇಳಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಇದರಲ್ಲಿ ಅಶ್ವಿನಿ ಗೌಡ ಅವರಿಗೆ ಜಾನ್ವಿ ಎದುರಾಲಿ ಆಗಿದ್ದರು. ಜಾನ್ವಿ ಫ್ರೆಂಡ್​ಶಿಪ್​ನಿಂದ ನನಗೆ ಕಳಪೆ ಬಂದಿದೆ. ನನ್ನನ್ನ ಮುಂದೆ ಬಿಟ್ಟು ಹಿಂದೆಯಿಂದ ನೀವು ತಮಾಷೆ ನೋಡಿ ನನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಅಂತ ಕಾಯ್ತಾ ಇದ್ದೀರ ನೀವು.. ಫ್ರೆಂಡ್​ಶಿಪ್ ಅಂತ ಹೇಳ್ಕೊಂಡು ನನಗೆ ಬಾವಿ ತೋಡ್ತಾ ಇದ್ದೀರಾ ಅಂತ ಗೊತ್ತಿರಲಿಲ್ಲ.. ಆ ತರದ ಒಂದು ಸ್ನೇಹಕ್ಕೆ ನಾವು ಬ್ರೇಕ್ ಕೋಡೋದು ಉತ್ತಮ ಎಂದು ನೇರವಾಗಿ ಹೇಳಿದ್ದರು.

ಅತ್ತ ಜಾನ್ವಿ, ನಿಮ್ಮ ಆಟ ನೀವು ಆಡ್ತಾ ಇದ್ದೀರಾ.. ನನ್ನ ಆಟವನ್ನ ನಾನು ಆಟ ಆಡ್ತಾ ಇದ್ದೀನಿ.. ಕೆಲವರ ಆಟ ತುಂಬಾ ಫಾಸ್ಟ್ ಆಗಿ ಕಾಣಿಸಬಹುದು ಇನ್ನು ಕೆಲವರು ಸ್ಲೋ ಆಗಿ ಹೋಗಿ ಗುರಿ ತಲುಪಬಹುದು. ಅಶ್ವಿನಿ ಅವರು ನನ್ನ ಜೊತೆಗೆ ಇರೋದು ಕೂಡ ಒಂದು ಸ್ಟ್ರಾಟರ್ಜಿ ಎಂದು ಹೇಳಿದ್ದರು. ಇಲ್ಲಿಂದ ಇವರಿಬ್ಬರು ಬೇರೆಬೇರೆ ಆಗಿದ್ದಾರೆ. ಇದು ಎರಡನೇ ದಿನಕ್ಕೂ ಕಾಲಿಟ್ಟಿದೆ. ಕಲರ್ಸ್ ಕನ್ನಡ ಸದ್ಯ ಒಂದು ಪ್ರೋಮೋ ಬಿಟ್ಟಿದ್ದು ಇದಕ್ಕೆ ‘ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಅಂದ್ರೆ?’ ಎಂದು ಟೈಟಲ್ ಕೊಟ್ಟಿದೆ.



ಅಶ್ವಿನಿ ಹಾಗೂ ಜಾನ್ವಿ ಟಾಸ್ಕ್​ನಲ್ಲಿ ಎಳೆದುಕೊಂಡು ಆಡುತ್ತಿದ್ದು, ಇದರ ಮಧ್ಯೆ ಪ್ರೀತಿಯ ಕುರಿತು ಇಬ್ಬರೂ ಮಾತನಾಡಿದ್ದಾರೆ. ನಿಸ್ವಾರ್ಥದಿಂದ ನಾವು ಕೊಡುವಂತದ್ದೇ ಒಂದು ಪ್ರೀತಿ. ಎಷ್ಟೋ ಸಂದರ್ಭಗಳಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ಬೆನ್ನ ಹಿಂದೆ ಪಿತೂರಿ ಮಾಡೋ ದುಶ್ಮನ್​ಗಳಿರುತ್ತಾರೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಅತ್ತ ಜಾನ್ವಿ ಅವರು, ಪ್ರೀತಿಯನ್ನು ಸುಲಭವಾಗಿ ಗಳಿಸಬಹುದು ಆದ್ರೆ ಅದನ್ನ ಉಳಿಸಿಕೊಳ್ಳುವುದು ಬಹಳ ಕಷ್ಟ ಎಂದು ಹೇಳಿದ್ದಾರೆ. ಒಟ್ಟಾರೆ ಇವರಿಬ್ಬರ ಮುಸುಕಿನ ಗುದ್ದಾಟ ಎಲ್ಲಿಗೆ ಮುಟ್ಟುತ್ತೆ ಎಂಬುದು ನೋಡಬೇಕಿದೆ.

BBK 12: ಬಿಗ್ ಬಾಸ್ ತಂಡದಿಂದ ಡಾಗ್ ಸತೀಶ್​ಗೆ ಮೋಸ?