ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಮಲ್ಲಮ್ಮ: ಕಾರಣ ಇಲ್ಲಿದೆ ನೋಡಿ

Mallamma Bigg Boss Kannada exit: ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ಮಲ್ಲಮ್ಮ ಇದೀಗ ದಿಢೀರ್ ಎಂದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಮಲ್ಲಮ್ಮ

Mallamma -

Profile
Vinay Bhat Oct 29, 2025 7:41 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಎಕ್ಸ್​ಪೆಕ್ಟ್​ ದಿ ಅನ್​ಎಕ್ಸ್​ಪೆಕ್ಟೆಡ್ ಎಂಬ ಟ್ಯಾಗ್​ಲೈನ್​ನೊಂದಿಗೆ ಶುರುವಾಯಿತು. ಇದಕ್ಕೆ ತಕ್ಕಂತೆ ಶೋ ಆರಂಭ ಆದಾಗಿನಿಂದ ಪ್ರತೀ ವಾರ ಒಂದಲ್ಲ ಒಂದು ಟ್ವಿಸ್ಟ್ ಬಿಗ್ ಬಾಸ್ ನೀಡುತ್ತಲೇ ಬರುತ್ತಿದ್ದಾರೆ. ಮೂರನೇ ವಾರಕ್ಕೆ ಒಂದು ಫಿನಾಲೆ ನಡೆದು ಆ ವಾರ ಬರೋಬ್ಬರಿ ಮೂರು ಜನ ಎಲಿಮಿನೇಟ್ ಆದರು. ಇದರ ಬೆನ್ನಲ್ಲೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಒಮ್ಮೆಲೆ ಮನೆಯೊಳಗೆ ಎಂಟ್ರಿ ಕೊಟ್ಟರು. ವೀಕ್ಷಕರ ಊಹೆಗೆ ಮಿಲುಕಿದ ಬಿಬಿಕೆ 12 ನಲ್ಲಿ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ ಮಲ್ಲಮ್ಮ ಬಿಗ್ ಬಾಸ್ ತೊರೆದಿದ್ದಾರೆ.

ಹೌದು, ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ಮಲ್ಲಮ್ಮ ಇದೀಗ ದಿಢೀರ್ ಎಂದು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮಲ್ಲಮ್ಮ ಕುಟುಂಬದವರೊಬ್ಬರಿಗೆ ಮಗು ಜನಿಸಿದೆ ಎನ್ನಲಾಗಿದೆ. ಈ ಖುಷಿಯ ಕ್ಷಣದಲ್ಲಿ ಅವರು ಭಾಗಿ ಆಗಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಅವರು ಆಟ ತೊರೆದು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಗುರುವಾರದ ಎಪಿಸೋಡ್​ನಲ್ಲಿ ಮಲ್ಲಮ್ಮ ಬಿಗ್ ಬಾಸ್ ತೊರೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಸದ್ಯಕ್ಕೆ ಈ ಬಗ್ಗೆ ಬಿಗ್‌ ಬಾಸ್‌ ಅಥವಾ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಯಾವುದೇ ಅಧಿಕೃತ ಅಪ್ಡೇಟ್‌ ನೀಡಿಲ್ಲ. ಮೂಲಗಳ ಪ್ರಕಾರ ಇದು ನಿನ್ನೆ ರಾತ್ರಿ ನಡೆದಿರುವುದು. ಹೀಗಾಗಿ ಈ ಬಗ್ಗೆ ನಾಳಿನ (ಅ.30) ಎಪಿಸೋಡ್‌ನಲ್ಲಿ ಸತ್ಯ ಗೊತ್ತಾಗಲಿದೆ.

ಮಲ್ಲಮ್ಮ ಉತ್ತರ ಕರ್ನಾಟಕದವರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಫ್ಯಾಶನ್ ಡಿಸೈನ್‌ ಶಾಪ್‌ನಲ್ಲಿ ಸಹಾಯಕಿಯಾಗಿ ಮಲ್ಲಮ್ಮ ಕೆಲಸ ಮಾಡುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಇವರು, ರೀಲ್ಸ್‌ ಮೂಲಕ ಇನ್ನೊಸೆಂಟ್‌ ಇನ್‌ಫ್ಲುಯೆನ್ಸರ್‌ ಎಂದು ಫೇಮಸ್. ತಮ್ಮ ಸರಳ ಜೀವನಶೈಲಿ, ಹಾಸ್ಯಮಯ ರೀಲ್ಸ್‌ ಮತ್ತು ಹಳ್ಳಿ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ವಿಡಿಯೋಗಳ ಮೂಲಕ ಫೇಮಸ್‌ ಆದವರು. ಆದರೆ, ದೊಡ್ಮನೆ ಇವರಿಗೆ ಹೇಳಿಮಾಡಿಸಿದಂತಿರಲಿಲ್ಲ.

BBK 12: ಬಿಗ್ ಬಾಸ್ ಕಾಲೇಜ್​ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

ಮಲ್ಲಮ್ಮ ಅವರಿಗೆ ಕೆಲವು ನಿಯಮಗಳು, ಆಟದ ವಿಚಾರಗಳು ಅರ್ಥ ಆಗುತ್ತಿರಲಿಲ್ಲ. ಆದರೆ, ಇವರು ಅನೇಕರ ಫೇವರಿಟ್ ಸ್ಪರ್ಧಿ ಆಗಿದ್ದರು. ವಯಸ್ಸಾಗಿದ್ದರೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಠಕ್ಕರ್ ಕೊಡೋ ರೀತಿಯಲ್ಲಿ ಮಲ್ಲಮ್ಮ ಆಟ ಆಡುತ್ತಿದ್ದರು. ಕೆಲವು ಬಾರಿ ಇತರೆ ಸ್ಪರ್ಧಿಗಳು ಮನೆಯವರನ್ನು ನೆನೆದು ಕಣ್ಣೀರಿಟ್ಟಿದ್ದರೆ ಮಲ್ಲಮ್ಮ ಮಾತ್ರ ಗಟ್ಟಿತನ ತೋರಿಸುತ್ತಿದ್ದರು. ಭಾವನಾತ್ಮಕ ವಿಚಾರಕ್ಕೆ ಕುಗ್ಗಿರಲಿಲ್ಲ. ಆದರೀಗ ದಿಢೀರ್ ಎಂದು ಮಲ್ಲಮ್ಮ ಕುಟುಂಬಕ್ಕೆ ಅವಶ್ಯಕತೆ ಇರುವ ಕಾರಣ ಬಿಗ್ ಬಾಸ್ ತೊರೆದಿದ್ದಾರೆ.