ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಸ್ಪರ್ಧಿಗಳ ಟೂತ್ ಬ್ರಶ್​ನಲ್ಲಿ ಟಾಯ್ಲೆಟ್ ಕ್ಲೀನ್?: ಅಶ್ವಿನಿ ಗೌಡ ಮೇಲೆ ಮತ್ತೊಂದು ಆರೋಪ

ಅಶ್ವಿನಿ ಗೌಡ ಅವರಿಗೆ ರಘು ಅವರು ಕಳಪೆ ನೀಡಿದರು. ಇದರಿಂದ ಅಶ್ವಿನಿ ಗೌಡ ಸಿಟ್ಟಾದರು. ಆ ಬಳಿಕ ಎಲ್ಲರ ಟೂತ್‌ ಬ್ರಶ್‌ಗಳನ್ನ ಬಳಸಿ ಅಶ್ವಿನಿ ಗೌಡ ಬಾತ್‌ರೂಮ್‌ ಕ್ಲೀನ್ ಮಾಡಿದ್ರಾ ಎಂಬ ಅನುಮಾನ ವೀಕ್ಷಕರಿಗೆ ಬಂದಿದೆ. ಇದರ ಬಗ್ಗೆ ನಮಗೆ ಕ್ಲಾರಿಟಿ ಬೇಕೆಂದು ಒತ್ತಾಯಿಸಿದ್ದಾರೆ.

ಟೂತ್ ಬ್ರಶ್​ನಲ್ಲಿ ಟಾಯ್ಲೆಟ್ ಕ್ಲೀನ್?: ಅಶ್ವಿನಿ ಮೇಲೆ ಮತ್ತೊಂದು ಆರೋಪ

Ashwini Gowda -

Profile Vinay Bhat Oct 25, 2025 10:58 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ನಾಲ್ಕು ವಾರ ಆಗಿದೆ. ಈ ನಾಲ್ಕು ವಾರಗಳಲ್ಲಿ ದೊಡ್ಮನೆಯೊಳಗಿನ ಸ್ಪರ್ಧಿಗಳು ಜನರಿಗೆ ಕನೆಕ್ಟ್ ಆಗಿದ್ದಾರೆ. ಕೆಲ ಸ್ಪರ್ಧಿಗಳನ್ನು ಜನರು ತುಂಬಾ ಇಷ್ಟಪಡುತ್ತಿದ್ದರೆ, ಇನ್ನೂ ಕೆಲ ಸ್ಪರ್ಧಿಗಳ ವಿರುದ್ಧ ಕೆಲ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಜನರು ಸದ್ಯ ಸಿಡಿದು ನಿಂತಿರುವುದು ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ವಿರುದ್ಧ. ಮೊದಲ ವಾರದಿಂದಲೇ ಅಶ್ವಿನಿ ಗೌಡ ವಿರುದ್ಧ ಜನರು ಒಂದಲ್ಲ ಒಂದು ವಿಚಾರಕ್ಕೆ ಕೋಪಗೊಳ್ಳುತ್ತಲೇ ಇದ್ದಾರೆ. ಈಗ ವೀಕ್ಷಕರ ಈ ಕೋಪ ಮತ್ತೊಂದು ಹಂತಕ್ಕೆ ಹೋಗಿದೆ.

ಕಳೆದ ವೀಕೆಂಡ್​ನಲ್ಲಿ ರಕ್ಷಿತಾ ಶೆಟ್ಟಿ ವಿಚಾರವಾಗಿ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಮೈಚಳಿ ಬಿಡಿಸಿದ್ದರು. ಆದರೆ, ಆ ತಪ್ಪನ್ನು ಅಶ್ವಿನಿ ಗೌಡ ಇನ್ನೂ ಸರಿಪಡಿಸಿಕೊಂಡಿಲ್ಲ. ಈ ವಾರವೂ ಸಾಕಷ್ಟು ತಪ್ಪು ಮಾಡಿದ್ದಾರೆ. ಬೇರೆಯವರ ತಪ್ಪನ್ನು ಬೊಟ್ಟು ಮಾಡಿ ತೋರಿಸುವ ಅಶ್ವಿನಿ, ತಾನೇ ಆ ತಪ್ಪು ಮಾಡಿದಾಗ ಅದನ್ನು ಒಪ್ಪಲು ತಯಾರು ಇರುವುದಿಲ್ಲ. ಈ ವಾರ ಇದು ಅನೇಕ ಬಾರಿ ಸಂಭವಿಸಿದೆ. ತನ್ನನ್ನು ಯಾರೂ ಏಕವಚನದಲ್ಲಿ ಮಾತನಾಡಬಾರದು.. ಆದರೆ, ಇವರು ಗಿಲ್ಲಿ, ಕಾವ್ಯ, ರಕ್ಷಿತಾ ಅವರನ್ನು ಹೇಗೆ ಬೇಕಾದರು ಏಕವಚನದಲ್ಲಿ ಕರೆಯಬಹುದು.

ಇದಿಷ್ಟೇ ಅಲ್ಲದೆ ಕಳಪೆ ಕೊಟ್ಟಾಗ ಅಶ್ವಿನಿ ಅವರು ರೂಲ್ಸ್ ಫಾಲೋ ಮಾಡಿಲ್ಲ. ಅವರು ನಿಯಮ ಮುರಿದ ಆ್ಯಪಲ್ ತಿಂದಿದ್ದಾರೆ. ಇದನ್ನು ಅವರು ಬೇಕಂತಲೇ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬಳಿಕ ಅವರು ಕಜ್ಜಾಯ ತಿಂದಿದ್ದಾರೆ. ಇದಿಷ್ಟೆ ಅಲ್ಲದೆ ಎಲ್ಲರ ಟೂತ್‌ ಬ್ರಶ್‌ಗಳನ್ನ ಬಳಸಿ ಅಶ್ವಿನಿ ಗೌಡ ಬಾತ್‌ರೂಮ್‌ ಕ್ಲೀನ್ ಮಾಡಿದ್ರಾ ಎಂಬ ಅನುಮಾನ ವೀಕ್ಷಕರಿಗೆ ಬಂದಿದೆ. ಇದರ ಬಗ್ಗೆ ನಮಗೆ ಕ್ಲಾರಿಟಿ ಬೇಕೆಂದು ಒತ್ತಾಯಿಸಿದ್ದಾರೆ.

ಅಶ್ವಿನಿ ಗೌಡ ಅವರಿಗೆ ರಘು ಅವರು ಕಳಪೆ ನೀಡಿದರು. ಇದರಿಂದ ಅಶ್ವಿನಿ ಗೌಡ ಸಿಟ್ಟಾದರು. ಆ ಬಳಿಕ ಅವರು ಪದೇ ಪದೇ ಟಾಯ್ಲೆಟ್ ಹೋಗೋ ಬಗ್ಗೆ ಬೇಡಿಕೆ ಇಟ್ಟರು. ಹೀಗೆ ಟಾಯ್ಲೆಟ್ ಹೋದ ಸಂದರ್ಭದಲ್ಲಿ ಅವರು ಇತರ ಸ್ಪರ್ಧಿಗಳ ಹಲ್ಲುಜ್ಜುವ ಬ್ರೆಶ್​​ಗಳನ್ನು ಒಟ್ಟುಗೂಡಿಸಿಕೊಂಡು ಟಾಯ್ಲೆಟ್​ ಒಳಗೆ ಹೋಗಿದ್ದಾರೆ. ಈ ವಿಚಾರ ಚರ್ಚೆಗೆ ಕಾರಣ ಆಗಿದೆ. ಎಲ್ಲರ ಟೂತ್‌ ಬ್ರಶ್‌ಗಳನ್ನ ವಾಶ್‌ರೂಮ್‌ಗೆ ಅಶ್ವಿನಿ ಗೌಡ ಕೊಂಡೊಯ್ದಿದ್ಯಾಕೆ? ಎಲ್ಲರ ಟೂತ್‌ ಬ್ರಶ್‌ಗಳನ್ನ ಉಪಯೋಗಿಸಿ ಅಶ್ವಿನಿ ಗೌಡ ಬಾತ್‌ರೂಮ್ ಕ್ಲೀನ್ ಮಾಡಿದ್ರಾ? ಹೀಗಂತ ವೀಕ್ಷಕರೇ ಪ್ರಶ್ನೆ ಮಾಡುತ್ತಿದ್ದಾರೆ.

ಎಲ್ಲರ ಟೂತ್‌ಬ್ರಶ್‌ಗಳನ್ನ ತಮ್ಮಲ್ಲಿ ಮುಚ್ಚಿಟ್ಟುಕೊಳ್ಳಲು ಅಶ್ವಿನಿ ಗೌಡ ಬಾತ್‌ರೂಮ್‌ಗೆ ಹೋದ್ರಾ? ಸಿಟ್ಟಲ್ಲಿ ಎಲ್ಲರ ಟೂತ್‌ಬ್ರಶ್‌ಗಳನ್ನ ಬಳಸಿ ಅಶ್ವಿನಿ ಗೌಡ ಬಾತ್‌ರೂಮ್‌ ತೊಳೆದ್ರಾ? ಬಾತ್‌ರೂಮ್‌ ಒಳಗೆ ಎಲ್ಲರ ಟೂತ್‌ಬ್ರಶ್‌ಗಳನ್ನ ತಗೊಂಡು ಹೋದ ಉದ್ದೇಶವಾದರೂ ಏನು? ಎಂಬುದು ವೀಕ್ಷಕರ ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಕ್ಲಾರಿಟಿ ಸಿಗಬೇಕಿದೆ.

BBK 12: ಈ ವಾರವೂ ಅಶ್ವಿನಿಗೆ ಕಿಚ್ಚನಿಂದ ಕ್ಲಾಸ್ ಖಚಿತ, ಕಾಕ್ರೋಚ್​ಗೂ ಶುರುವಾಗಿದೆ ನಡುಕ