ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ರಕ್ಷಿತಾ ಆಟಕ್ಕೆ ಬಿಗ್ ಬಾಸ್ ವೀಕ್ಷಕರು ಫಿದಾ: ಶೆಟ್ರಿಗೆ ಹೆಚ್ಚುತ್ತಲೇ ಇದೆ ಫ್ಯಾನ್ ಬೇಸ್

Rakshita Shetty Bigg Boss: ಐದನೇ ವಾರದಲ್ಲಿ ರಕ್ಷಿತಾ ಶೆಟ್ಟಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆರಂಭದಲ್ಲಿ ಇವರನ್ನು ಎಲಿಮಿನೇಟ್ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ವಿರುದ್ಧ ಹಾಗೂ ಮನೆಯ ಒಂಟಿ ಸದಸ್ಯರ ವಿರುದ್ಧ ಫ್ಯಾನ್ಸ್ ಕೋಪಗೊಂಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಇವರು ಪುನಃ ಬಂದಾಗ ಕೃಷ್ಣ ಸುಂದರಿ ಎಂದೆಲ್ಲ ಕರೆದರು.

ರಕ್ಷಿತಾ ಆಟಕ್ಕೆ ಬಿಗ್ ಬಾಸ್ ವೀಕ್ಷಕರು ಫಿದಾ

Rakshita Shetty -

Profile Vinay Bhat Oct 30, 2025 11:23 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಐದು ವಾರ ಆಗುತ್ತಿದೆ. ರಿಯಲ್ ಆಟ ಈಗ ಶುರುವಾಗಿದ್ದು, ಸ್ಪರ್ಧಿಗಳು ಸ್ನೇಹ-ಪ್ರೀತಿ ಬಿಟ್ಟು ಆಟದ ಕಡೆ ಗಮನ ಹರಿಸುತ್ತಿದ್ದಾರೆ. ಮೊದಲ ವಾರದಿಂದ ಸದಾ ಜೊತೆಗಿದ್ದ ಜೋಡಿಗಳು ಈಗ ಬೇರೆಬೇರೆ ಆಗಿ ತಮ್ಮ ಆಟ ಶುರುಹಚ್ಚಿಕೊಂಡಿದ್ದಾರೆ. ಇವುಗಳ ಮಧ್ಯೆ ರಕ್ಷಿತಾ ಶೆಟ್ಟಿ ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಕೂಡ ಮನೆಯಲ್ಲಿ ಇವರ ನಡವಳಿಕೆಯನ್ನು ಇಷ್ಟಪಟ್ಟಿದ್ದಾರೆ. ತಮ್ಮ ನೇರ ಮಾತುಗಳಿಂದಲೇ ವೀಕ್ಷಕರಿಗೆ ಇಷ್ಟವಾಗುತ್ತಿದ್ದಾರೆ.

ಐದನೇ ವಾರದಲ್ಲಿ ರಕ್ಷಿತಾ ಶೆಟ್ಟಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆರಂಭದಲ್ಲಿ ಇವರನ್ನು ಎಲಿಮಿನೇಟ್ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ವಿರುದ್ಧ ಹಾಗೂ ಮನೆಯ ಒಂಟಿ ಸದಸ್ಯರ ವಿರುದ್ಧ ಫ್ಯಾನ್ಸ್ ಕೋಪಗೊಂಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಇವರು ಪುನಃ ಬಂದಾಗ ಕೃಷ್ಣ ಸುಂದರಿ ಎಂದೆಲ್ಲ ಕರೆದರು. ರಕ್ಷಿತಾಗೆ ಇಂದು ಇಷ್ಟೊಂದು ಅಭಿಮಾನಿಗಳು ಹುಟ್ಟಲು ಕಾರಣ ಮನೆಯಲ್ಲಿರುವ ಇತರೆ ಸದಸ್ಯರೇ ಎಂದರೆ ತಪ್ಪಾಗಲಾರದು.

ಯಾಕೆಂದರೆ, ಅಶ್ವಿನಿ ಗೌಡ, ರಾಶಿಕಾ, ಜಾನ್ವಿ, ಕಾಕ್ರೋಚ್ ಸುಧಿ ಅವರು ಕಳೆದು ಕೆಲವು ವಾರಗಳಿಂದ ರಕ್ಷಿತಾ ಅವರನ್ನು ಸದಾ ಟಾರ್ಗೆಟ್ ಮಾಡುತ್ತ ಬಂದರು. ಅನವಶ್ಯಕವಾಗಿ ರಕ್ಷಿತಾ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿದರು. ಚಿಕ್ಕ ಹುಡುಗಿ ಎಂದು ಟೆಲಿಕಾಸ್ಟ್ ಮಾಡಲಾಗದಂತಹ ಪದ ಬಳಕೆ ಮಾಡಿದರು. ಇಷ್ಟೆಲ್ಲ ಆದರು ರಕ್ಷಿತಾ ಕುಗ್ಗದೆ ಎದುರಾಳಿಗರನ್ನು ಸಮರ್ಥವಾಗಿ ಎದುರಿಸಿದರು. ವೀಕ್ಷಕರಿಗೆ ರಕ್ಷಿತಾ ಮೇಲೆ ಈಗ ಒಂದು ಸಾಫ್ಟ್ ಕಾರ್ನರ್ ಹುಟ್ಟುಕೊಂಡಿದೆ. ಇದೇ ಅವರಿಗೆ ಒಂದು ಪ್ಲಸ್ ಪಾಯಿಂಟ್ ಆಗಿದೆ.

ನಿನ್ನೆಯ ಎಪಿಸೋಡ್​ನಲ್ಲಿ ಕೂಡ ರಘು ಹಾಗೂ ಗಿಲ್ಲಿ ಮಾತನಾಡುತ್ತ, ಪಾಪಾ ರಕ್ಷಿತಾ ಅವರು ಎಷ್ಟೇ ಬೈದ್ರು ಸುಮ್ಮನೆ ಇರುತ್ತಾಳೆ.. ಅವಳನ್ನ ಮನೆಯ ಕೆಲಸದವಳ ರೀತಿ ಟ್ರೀಟ್ ಮಾಡ್ತಾರೆ.. ಅಡುವೆ ಮಾಡೋದು ಪಾತ್ರೆ ತೊಳೆಯೋದು ಎಲ್ಲ ಅವಳೇ ಮಾಡುತ್ತಾಳೆ ಎಂದು ಹೇಳಿದರು. ವೀಕ್ಷಕರು ಕೂಡ ರಕ್ಷಿತಾ ಅವರ ಈ ಗುಣವನ್ನು ಇಷ್ಟಪಟ್ಟಿದ್ದಾರೆ. ಇದರಿಂದಲೇ ಅವರಿಗೆ ಇಂದು ದೊಡ್ಡ ಮಟ್ಟದ ಫ್ಯಾನ್ ಬೇಸ್ ಹುಟ್ಟುಕೊಂಡಿದೆ.

BBK 12: ತನ್ನ ಜೊತೆ ಜಗಳಕ್ಕೆ ಬಂದ ಅಶ್ವಿನಿ ಗೌಡಾಗೆ ಮೈಚಳಿ ಬಿಡಿಸಿದ ಕಾವ್ಯಾ ಶೈವ

ಕಲರ್ಸ್ ಕನ್ನಡ ಬಿಡುಗಡೆ ಮಾಡುತ್ತಿರುವ ಪ್ರೋಮೋಗಳಿಗೆ ನೆಟ್ಟಿಗರು ರಕ್ಷಿತಾ ಪರವಾಗಿ ಹೆಚ್ಚೆಚ್ಚು ಕಮೆಂಟ್‌ಗಳು ಬರುತ್ತಿವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಾವೆ ಗೂಬೆಗಳು. ಹೊರಗೆ ಅವಳಿಗೆ ಇರುವ ಅಭಿಮಾನಿಗಳನ್ನು ನೋಡಿದ್ರೆ ಏನಾಗ್ತವೋ ಎಂದು ಕಮೆಂಟ್ ಬಂದಿವೆ.

ಕರಾವಳಿಯ ಕನ್ನಡತಿ ರಕ್ಷಿತಾ ಶೆಟ್ಟಿ ಬಲೆ ಬಲೆ ಎನ್ನುತ್ತ ವ್ಲಾಗ್ ಮಾಡಿ ಫೇಮಸ್ ಆದವರು. ತಮಗೆ ಗೊತ್ತಿರುವ ಅಲ್ಪ-ಸ್ವಲ್ಪ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದವರು. ರಕ್ಷಿತಾ ಶೆಟ್ಟಿ ಮಂಗಳೂರಿನವರು. ಹುಟ್ಟಿದ್ದು ಪಡುಬಿದ್ರೆಯಲ್ಲಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತೃಭಾಷೆ ತುಳು ಆದ ಕಾರಣ ಅವರಿಗೆ ಕನ್ನಡ ಸರಿಯಾಗಿ ಬರಲ್ಲ. ಸದ್ಯ ರಕ್ಷಿತಾ ಅವರು ಈ ವಾರ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ವೀಕ್ಷಕರು ರಕ್ಷಿತಾಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ಹೇಳುತ್ತಿದ್ದಾರೆ.