ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12 TRP: ಬಿಗ್ ಬಾಸ್ ಟಿಆರ್​ಪಿ ಔಟ್: ಕಿಚ್ಚನ ರುಬ್ಬಿಂಗ್ ಸೆಷನ್​ಗೆ ಎಷ್ಟು ರೇಟಿಂಗ್?

ಕಿಚ್ಚನ ಥರ್ಡ್ ವೀಕ್ನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ಗೆ ಇಡೀ ಕರ್ನಾಟಕ ಜನತೆ ಕಾದು ಕುಳಿತಿತ್ತು. ಆ ವಾರ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ರಕ್ಷಿತಾ ಶೆಟ್ಟಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಗೆಜ್ಜೆ ಸದ್ದು, ಈಡಿಯೆಟ್ ಪದ ಸೌಂಡ್ ಮಾಡಿತ್ತು. ಹೀಗಾಗಿ ಅಶ್ವಿನಿ-ಜಾನ್ವಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಶನಿವಾರದ ಸಂಚಿಕೆಗೆ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ 8.2 ಟಿವಿಆರ್‌ ಸಿಕ್ಕಿದೆ.

BBK 12 TRP ಔಟ್: ಕಿಚ್ಚನ ರುಬ್ಬಿಂಗ್ ಸೆಷನ್​ಗೆ ಎಷ್ಟು ರೇಟಿಂಗ್?

BBK 12 3rd week TRP -

Profile Vinay Bhat Oct 28, 2025 7:34 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಶುರುವಾಗಿ ನಾಲ್ಕು ವಾರ ಕಳೆದಿವೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿಕೊಟ್ಟ ಬಳಿಕ ಶೋನ ದಿಕ್ಕೇ ಬದಲಾಗಿದ್ದು, ಸದ್ಯ ಸ್ಪರ್ಧಿಗಳು ಎಚ್ಚೆತ್ತುಕೊಂಡು ತಮ್ಮ ಆಟ ಶುರುಮಾಡಿಕೊಂಡಿದ್ದಾರೆ. ಪ್ರತಿ ವೀಕೆಂಡ್ ಕಿಚ್ಚ ಸುದೀಪ್ ಬಂದು ಸ್ಪರ್ಧಿಗಳು ಮಾಡಿದ ತಪ್ಪನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ ಕೆಲಸ ಮಾಡುತ್ತಾರೆ. ಇದರ ಮಧ್ಯೆ ಇದೀಗ ಈ ವರ್ಷದ 41ನೇ ವಾರದ ಟಿಆರ್​ಪಿ ಹೊರಬಿದ್ದಿದೆ. ಬಿಗ್ ಬಾಸ್​ಗೆ ಮೊದಲ ವಾರ ದಾಖಲೆಯ ಭರ್ಜರಿ ಟಿಆರ್​ಪಿ ಸಿಕ್ಕಿತ್ತು. ಮೂರನೇ ವಾರ ಕೂಡ ಬಿಗ್ ಬಾಸ್​ಗೆ ಮುಖ್ಯವಾಗಿ ವೀಕೆಂಡ್ ಎಪಿಸೋಡ್​ಗೆ ಅತ್ಯುತ್ತಮ ಟಿಆರ್​ಪಿ ದಕ್ಕಿದೆ.

ಕಿಚ್ಚನ ಥರ್ಡ್ ವೀಕ್​ನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ಗೆ ಇಡೀ ಕರ್ನಾಟಕ ಜನತೆ ಕಾದು ಕುಳಿತಿತ್ತು. ಆ ವಾರ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ರಕ್ಷಿತಾ ಶೆಟ್ಟಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಗೆಜ್ಜೆ ಸದ್ದು, ಈಡಿಯೆಟ್ ಪದ ಸೌಂಡ್ ಮಾಡಿತ್ತು. ಹೀಗಾಗಿ ಅಶ್ವಿನಿ-ಜಾನ್ವಿಗೆ ಕಿಚ್ಚ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಶನಿವಾರದ ಸಂಚಿಕೆಗೆ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ 8.2 ಟಿವಿಆರ್‌, ಅರ್ಬನ್‌ನಲ್ಲಿ 8.1 ಟಿವಿಆರ್‌ ದಾಖಲಾಗಿದೆ. ಇನ್ನೂ ಭಾನುವಾರದ ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಗೆ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 8.2 ಟಿವಿಆರ್, ಅರ್ಬನ್ ಮಾರ್ಕೆಟ್‌ನಲ್ಲಿ 8.8 ಟಿವಿಆರ್‌ ಲಭಿಸಿದೆ. ವಾರದ ರಿಯಾಲಿಟಿ ಸಂಚಿಕೆಗಳಿಗೆ ಅರ್ಬನ್ + ರೂರಲ್‌ ಮಾರ್ಕೆಟ್‌ನಲ್ಲಿ 5.7 ಟಿವಿಆರ್‌ ಲಭಿಸಿದೆ. ಅರ್ಬನ್‌ ಮಾರ್ಕೆಟ್‌ನಲ್ಲಿ 6.0 ಟಿವಿಆರ್‌ ಸಿಕ್ಕಿದೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬಂದರೆ, ಝೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿದ್ದು, ಜನರಿಗೆ ಇಷ್ಟವಾಗಿದೆ. ಹೀಗಾಗಿ ಇದು 9.0 ಟಿವಿಆರ್ ಪಡೆದು ಮೊದಲ ಸ್ಥಾನ ಸಂಪಾದಿಸಿದೆ. ಮೂರನೇ ಸ್ಥಾನಕ್ಕೆ ಕುಸಿದಿದ್ದ ಕರ್ಣ ಧಾರಾವಾಹಿ ಇದೀಗ ಎರಡನೇ ಸ್ಥಾನಕ್ಕೇರಿದ್ದು 8.9 ಟಿವಿಆರ್ ಪಡೆದುಕೊಂಡಿದೆ. ಅಣ್ಣಯ್ಯ ಸೀರಿಯಲ್ ಧಾರಾವಾಹಿಯ ಟಿಆರ್​ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಈ ಸೀರಿಯಲ್ ಈ ಬಾರಿ 8.8 ಟಿವಿಆರ್ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.

BBK 12: ಬಿಗ್ ಬಾಸ್ ಮನೆ ಈಗ ಬಿಬಿ ಕಾಲೇಜ್: ಭರ್ಜರಿಯಾಗಿ ಸಾಗುತ್ತಿದೆ ರಾಶಿಕಾ-ಸೂರಜ್ ಪ್ರೇಮಗೀತೆ

ಲಕ್ಷ್ಮೀ ನಿವಾಸ ಸೀರಿಯಲ್‌ 8.2 ಟಿವಿಆರ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದು ವಿಶೇಷ ಎಂದರೆ ಕಳೆದ ಹಲವು ತಿಂಗಳುಗಳಿಂದ 5ಕ್ಕಿಂತ ಕಡಿಮೆ ಟಿವಿಆರ್ ಪಡೆದುಕೊಳ್ಳುತ್ತಿದ್ದ ನಾ ನಿನ್ನ ಬಿಡಲಾರೆ ಧಾರಾವಾಹಿ 6.6 ಟಿವಿಆರ್ ಪಡೆದುಕೊಂಡು ಐದನೇ ಸ್ಥಾನಕ್ಕೇರಿದೆ.

ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್​ನಲ್ಲಿದೆ. ಈ ಧಾರಾವಾಹಿಗೆ 6.2 ಟಿವಿಆರ್ ಲಭಿಸಿದೆ. ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 5.2 ಟಿವಿಆರ್‌ ಸಿಕ್ಕಿದೆ. ಮುದ್ದು ಸೊಸೆ ಮತ್ತು ಇತ್ತೀಚೆಗಷ್ಟೆ ಪ್ರಾರಂಭವಾದ ಪ್ರೇಮಕಾವ್ಯ ಧಾರಾವಾಹಿ 4.8 ಟಿವಿಆರ್ ಪಡೆದು ಕಲರ್ಸ್​ನ ಮೂರನೇ ಮತ್ತು ನಾಲ್ಕನೇ ಧಾರಾವಾಹಿ ಆಗಿದೆ. ಹಾಗೂ ಭಾಗ್ಯ ಲಕ್ಷ್ಮೀ 4.7 ಟಿವಿಆರ್​ನೊಂದಿಗೆ ನಂತರದ ಸ್ಥಾನದಲ್ಲಿದೆ.