Praveen Jain: ಕಾಮಿಡಿ ಕಿಲಾಡಿಗಳು ಪ್ರವೀಣ್ ಜೈನ್ ಮನೆಗೆ ಹೊಸ ಕಾರು ಆಗಮನ: ಇದರ ಬೆಲೆ ಎಷ್ಟು ನೋಡಿ
ತಮ್ಮ ಅದ್ಭುತ ಕಾಮಿಡಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ಪ್ರವೀಣ್ ಜೈನ್ ಮನೆಗೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಹೊಚ್ಚ ಹೊಸ ಕಾರನ್ನು ಪ್ರವೀಣ್ ಖರೀದಿ ಮಾಡಿದ್ದಾರೆ. ಈ ಖುಷಿಯ ವಿಚಾರವನ್ನು ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Praveen Jain

ಕಾಮಿಡಿ ಕಿಲಾಡಿಗಳು ಸೀಸನ್ ಮೂರರಲ್ಲಿ ಮಿಂಚಿದ ಪ್ರವೀಣ್ ಜೈನ್ (Praveen Jain) ಇಂದು ಕರ್ನಾಕಟದ ಮನೆಮಾತಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ನಲ್ಲಿ ಕೂಡ ಇವರು ಭಾಗಿ ಆಗಿಯಾಗಿ ರಂಚಿಸಿದ್ದರು. ಬಳಿಕ ಪುಟ್ಟಕ್ಕನ ಮಕ್ಕಳು ಹಾಗೂ ಮನಸೆಲ್ಲ ನೀನೇ ಧಾರಾವಾಹಿಯಲ್ಲಿ ನಟಿಸಿ ಹಲವಾರು ಸಿನಿಮಾಗಳಲ್ಲೂ ಪ್ರವೀಣ್ ನಟಿಸಿದ್ದಾರೆ. ಝೀ ಕನ್ನಡದಲ್ಲಿ ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭರ್ಜರಿ ಬ್ಯಾಚುಲರ್ಸ್ ಸೀಸನ್ ಎರಡರಲ್ಲೂ ಇವರು ಕಾಣಿಸಿಕೊಂಡಿದ್ದರು.
ತಮ್ಮ ಅದ್ಭುತ ಕಾಮಿಡಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ಪ್ರವೀಣ್ ಜೈನ್ ಮನೆಗೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಹೊಚ್ಚ ಹೊಸ ಕಾರನ್ನು ಪ್ರವೀಣ್ ಖರೀದಿ ಮಾಡಿದ್ದಾರೆ. ಈ ಖುಷಿಯ ವಿಚಾರವನ್ನು ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬ್ಯೂಟಿಫುಲ್ ಫೋಟೋಗಳ ಜೊತೆಗೆ, ಚಿಕ್ಕ ವಯಸ್ಸಲ್ಲಿದ್ದಾಗ ಕಂಡ ಚಿಕ್ಕ ಕನಸು. ಹೌದು ನಾನು ಒಂದು ಕಾರು ತೆಗೊಳ್ತೆನೇ, ಅಮ್ಮನ್ನನ್ನು ಪಕ್ಕದಲ್ಲಿ ಕೂರುಸ್ಕೊಂಡು ಹೋಗ್ತೇನೆ. ಇಂದು ಚಿಕ್ಕ ಹೆಜ್ಜೆಯೊಂದಿಗೆ ನನಸಾಯಿತು ಎಂದು ಬರೆದುಕೊಂಡಿದ್ದಾರೆ.
ಇನ್ನೂ, ಹೊಸ ಕಾರನ್ನು ಖರೀದಿಸುವ ವೇಳೆ ತಾಯಿ ಪ್ರಮೀಳಾ ಹಾಗೂ ಕಾಮಿಡಿ ಕಿಲಾಡಿಗಳು ಸ್ನೇಹಿತರು ಭಾಗಿಯಾಗಿದ್ದರು. ಇವರು ಖರೀದಿ ಮಾಡಿರುವ ಕಾರು ಹುಂಡೈ ಕಂಪನಿಯ i10 Nios. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 5.98 ಲಕ್ಷ ಆಗಿದೆ. ಇದರ ಟಾಪ್- ಎಂಟ್ ರೂಪಾಂತರದ ಎಕ್ಸ್-ಶೋರೂಂ ಬೆಲೆ ರೂ. 8.62 ಲಕ್ಷ ಆಗಿದೆ.
ಹುಂಡೈ i10 ನಿಯೋಸ್ 1.2-ಲೀಟರ್ ಕಪ್ಪಾ ಪೆಟ್ರೋಲ್ ಮೋಟಾರ್ ಅನ್ನು ಪಡೆಯುತ್ತದೆ. ಇದು ಗರಿಷ್ಠ 83 PS ಪವರ್ ಮತ್ತು 113.8 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಮಾರ್ಟ್ ಆಟೋ AMT ಸೇರಿವೆ. ಈ ಕಾರು ಟೈಟಾನ್ ಗ್ರೇ, ಪೋಲಾರ್ ವೈಟ್, ಫೈರಿ ರೆಡ್, ಟೈಫೂನ್ ಸಿಲ್ವರ್, ಸ್ಪಾರ್ಕ್ ಗ್ರೀನ್ ಮತ್ತು ಟೀಲ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಇದು ಸುಮಾರು 20 ಕಿ. ಮೀ ಮೈಲೇಜ್ ನೀಡುತ್ತದೆ.
Mansi Joshi: ಕೃಷ್ಣ ಜನ್ಮಾಷ್ಟನಿಯಂದು ರಾಧೆಯ ಅವತಾರ ತಾಳಿದ ಮಾನಸಿ ಜೋಶಿ